ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಪ್ವಾರದಲ್ಲಿ ಪಾಕ್ BAT ಯತ್ನ ವಿಫಲ, ಭಾರತದ ದಾಳಿ ಸಫಲ

|
Google Oneindia Kannada News

ಶ್ರೀನಗರ, ಆಗಸ್ಟ್ 04: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೆರನ್ ಸೆಕ್ಟರ್ ನಲ್ಲಿ ಪಾಕಿಸ್ತಾನದ ಗಡಿ ಕ್ಷಿಪ್ರ ಪಡೆ(Border Action Team) ನಡೆಸಿದ ನುಸುಳು ದಾಳಿಯನ್ನು ಹತ್ತಿಕ್ಕಲಾಗಿದೆ. ನುಸುಳುಕೋರರು ಸೇರಿದಂತೆ 5 ರಿಂದ 7 ಮಂದಿ ಮೃತದೇಹ ಪತ್ತೆಯಾಗಿರುವುದನ್ನು ಭಾರತೀಯ ಸೇನೆ ವಕ್ತಾರ ರಾಜೇಶ್ ಕಾಲಿಯಾ ಅಧಿಕೃತವಾಗಿ ಘೋಷಿಸಿದ್ದಾರೆ.

ಗಡಿ ಉದ್ವಿಗ್ನ: ಅಮರನಾಥ ಯಾತ್ರಿಗಳ ಏರ್‌ಲಿಫ್ಟ್‌ಗಡಿ ಉದ್ವಿಗ್ನ: ಅಮರನಾಥ ಯಾತ್ರಿಗಳ ಏರ್‌ಲಿಫ್ಟ್‌

ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ನಂತರದಲ್ಲಿ ಭಾರತದ ಆರ್ಟಿಲರಿ ಗನ್ ಸ್ಟ್ರೈಕ್ ಗೆ ಗಡಿಭಾಗದಲ್ಲಿದ್ದ ಉಗ್ರ ಸಂಘಟನೆಗಳು ಬೆಚ್ಚಿವೆ.

Infiltration bid by Pakistans Border Action Team foiled in Keran Sector, 5-7 killed

"ಕೆರನ್ ವಲಯದಲ್ಲಿ ಸಿಕ್ಕದೇಹಗಳ ಪೈಕಿ ನಾಲ್ವರು ಪಾಕಿಸ್ತಾನ ಸೇನೆಯ SSGಕಮ್ಯಾಂಡೋ ಪಡೆಗೆ ಸೇರಿದವರಾಗಿದ್ದಾರೆ. ಮೃತರ ಬಳಿ ಇದ್ದ ಐಇಡಿ, ಪಾಕಿಸ್ತಾನ ಲಾಂಛನ, ರೈಫಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜುಲೈ 31 ರಿಂದ ಆಗಸ್ಟ್ 01ರೊಳಗೆ ಉಗ್ರರನ್ನು ಭಾರತದ ಗಡಿಯೊಳಗೆ ನುಸುಳಲು ನೆರವು ನೀಡಲು ಪಾಕಿಸ್ತಾನದ ಕ್ಷಿಪ್ರ ಪಡೆ ನೆರವಾಗುತ್ತಿತ್ತು. ಆದರೆ, ನುಸುಳುವಿಕೆಯನ್ನು ಸಂಪೂರ್ಣವಾಗಿ ತಡೆಯಲಾಗಿದೆ" ಎಂದು ಸೇನಾ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಹೇಳಿದ್ದಾರೆ.

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಭಾರತದ Rapid ಆಕ್ಷನ್ ಫೋರ್ಸ್ ಸಜ್ಜಾಗುತ್ತಿದ್ದು, ಗಡಿ ಭಾಗದ 30-40 ಕಿ.ಮೀ ವ್ಯಾಪ್ತಿಯ ಎಲ್ಲಾ ಉಗ್ರನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಡಗುತಾಣಗಳನ್ನು ಧ್ವಂಸಗೊಳಿಸುವ ಕಾರ್ಯ ಆರಂಭವಾಗಿದೆ.

English summary
An infiltration bid by Pakistani Border Action Team (BAT) has been foiled and "5-7 Pakistani army regulars/terrorists eliminated".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X