ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರ ಎನ್ ಕೌಂಟರ್ ನಲ್ಲಿ ಸತ್ತವರು ನಿಜವಾಗಿ ಉಗ್ರರೇ?

|
Google Oneindia Kannada News

ಶ್ರೀನಗರ್, ಸಪ್ಟೆಂಬರ್.18: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ‌ನಲ್ಲಿ ನಡೆದ ವಿವಾದಾತ್ಮಕ ಎನ್ ಕೌಂಟರ್ ನಲ್ಲಿ ಯೋಧರೇ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೂವರು ಉಗ್ರರ ಹತ್ಯೆಗೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿದೆ.

ಆಪಾದಿತ ಯೋಧರ ಕುರಿತು ಸೇನೆಗೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದ್ದು, ತಪ್ಪಿತಸ್ಥ ಯೋಧರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಭಾರತೀಯ ಸೇನೆಯು ಸ್ಪಷ್ಟನೆ ನೀಡಿದೆ. ಶೋಪಿಯಾನ್ ನಲ್ಲಿ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೂವರು ಯುವಕರನ್ನು ಉಗ್ರರು ಎಂದು ಶಂಕಿಸಿ ಹತ್ಯೆಗಯ್ಯಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪರಿಪೂರ್ಣ ಪ್ರಾಂತ್ಯದ ಸ್ಥಾನಮಾನ ನೀಡಲು ಪಾಕ್ ತೀರ್ಮಾನಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪರಿಪೂರ್ಣ ಪ್ರಾಂತ್ಯದ ಸ್ಥಾನಮಾನ ನೀಡಲು ಪಾಕ್ ತೀರ್ಮಾನ

ಭಾರತೀಯ ಸೇನೆಯ ಯೋಧರು ಸಶಸ್ತ್ರ ಪಡೆಗಳ ವಿಶೇಷ ಶಕ್ತಿ ಕಾಯ್ದೆ ಅಥವಾ ಎಎಫ್‌ಎಸ್‌ಪಿಎ ಅಡಿಯಲ್ಲಿ ನೀಡಲಾಗಿರುವ ಅಧಿಕಾರವನ್ನು ಮೀರಿದ್ದಾರೆ ಎಂದು ಸೇನೆಯೇ ಸ್ಥಾಪಿಸಿದ ವಿಚಾರಣಾ ನ್ಯಾಯಾಲಯ ತಿಳಿಸಿದೆ.

Indian Troops Killed Three Suspected Terrorists, Army Order To Inquiry

ನಿಯಮ ಉಲ್ಲಂಘಿಸಿರುವ ಬಗ್ಗೆ ಸಾಕ್ಷ್ಯ:

"ಸೇನಾ ಪ್ರಾಧಿಕಾರದ ಅಂಶಿಪೋರಾ ನಡೆಸಿದ ತನಿಖೆಯು ಪೂರ್ಣಗೊಂಡಿದೆ. ಯೋಧರ ವಿಚಾರಣೆ ವೇಳೆ ಎಎಫ್‌ಎಸ್‌ಪಿಎ 1990ರ ಅಡಿ ನೀಡಿರುವ ಅಧಿಕಾರವನ್ನು ಮೀರಿದೆ. ನಿಗದಿತ ಅಧಿಕಾರವನ್ನು ಯೋಧರು ಉಲ್ಲಂಘಿಸಿರುವ ಬಗ್ಗೆ ಪ್ರಾಥಮಿಕ ವಿಚಾರಣೆ ಸಂದರ್ಭದಲ್ಲಿ ಲಭ್ಯವಾದ ಸಾಕ್ಷ್ಯಗಳಿಂದ ಸಾಬೀತಾಗಿದೆ" ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಇನ್ನು ವಿವಾದಿತ ಎನ್ ಕೌಂಟರ್ ನಲ್ಲಿ ಹತ್ಯೆಯಾದ ಮೂವರು ಶಂಕಿತ ಭಯೋತ್ಪಾದಕರನ್ನು ಇಮ್ತಿಯಾಜ್ ಅಹ್ಮದ್, ಅಬ್ರಾರ್ ಅಹ್ಮದ್ ಮತ್ತು ಮೊಹಮ್ಮದ್ ಇಬ್ರಾರ್ ಎಂದು ವಿಚಾರಣೆಯಿಂದ ಸಂಗ್ರಹಿಸಲಾದ ಸಾಕ್ಷ್ಯಗಳು ಸೂಚಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆಪ್ ಅಮ್ಶಿಪೋರಾದಲ್ಲಿ ಹತ್ಯೆಗೀಡಾದ ಮೂವರು ಅಪರಿಚಿತ ಭಯೋತ್ಪಾದಕರು ರಾಜೌರಿಯಿಂದ ಬಂದವರು ಎನ್ನಲಾಗಿದೆ. ಸೇನಾ ಎನ್ ಕೌಂಟರ್ ನಲ್ಲಿ ಬಲಿಯಾದವರು ಉಗ್ರರೇ ಅಥವಾ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾದವರೇ ಎನ್ನುವುದನ್ನು ಪತ್ತೆ ಮಾಡುವುದಕ್ಕಾಗಿ ಡಿಎನ್ಎ ಪರೀಕ್ಷಾ ವರದಿಗಾಗಿ ಪೊಲೀಸರು ಎದುರು ನೋಡುತ್ತಿದ್ದಾರೆ.

English summary
Jammu-Kashmir: Indian Troops Killed Three Suspected Terrorists, Army Order To Inquiry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X