ಜಮ್ಮು ಕಾಶ್ಮೀರದಲ್ಲಿ ಪಾಕ್ ಗುಂಡಿಗೆ ಯೋಧ ರವಿ ರಂಜನ್ ಹುತಾತ್ಮ
ಶ್ರೀನಗರ, ಆಗಸ್ಟ್ 20: ಜಮ್ಮು ಕಾಶ್ಮೀರದ ಪೂಂಚ್ನಲ್ಲಿ ಪಾಕಿಸ್ತಾನದ ಗುಂಡಿಗೆ ಯೋಧ ನಾಯ್ಕ್ ರಂಜನ್ ಕುಮಾರ್ ಹುತಾತ್ಮರಾಗಿದ್ದಾರೆ.
ಮಂಗಳವಾರ(ಆಗಸ್ಟ್ 20)ರಂದು ಬೆಳಗ್ಗೆ ಪಾಕ್ ಕದನ ವಿರಾಮ ಉಲ್ಲಂಘಿಸಿ ಪೂಂಚ್ನಲ್ಲಿ ನಡೆಸಿ ಪಾಕ್ ಯೋಧರ ಮೇಲೆ ಗುಂಡಿನ ದಾಳಿ ನಡೆಸಿತ್ತು. ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಈ ಘಟನೆ ನಡೆದಿದೆ.
ಕಾಶ್ಮೀರದಲ್ಲಿ ಪಾಕಿಸ್ತಾನದ ಗುಂಡಿಗೆ ಸೈನಿಕ ಹುತಾತ್ಮ
ಗುಂಡಿನ ದಾಳಿ ನಡುವೆ 36 ವರ್ಷದ ನಾಯ್ಕ್ ರವಿ ರಂಜನ್ ಕುಮಾರ್ ಹುತಾತ್ಮರಾಗಿದ್ದಾರೆ. ರವಿ ಅವರು ಬಿಹಾರದ ಗೋಪಿ ಬೀಘಾ ಗ್ರಾಮದವರಾಗಿದ್ದಾರೆ.ಅವರು ಪತ್ನಿಯನ್ನು ಅಗಲಿದ್ದಾರೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಪಾಕಿಸ್ತಾನದ ಗುಂಡಿಗೆ ಇನ್ನೊಬ್ಬ ಯೋಧ ಹುತಾತ್ಮರಾಗಿದ್ದರು. ಜುಲೈ ತಿಂಗಳಲ್ಲಿ ಹಲವು ಬಾರಿ ಪಾಕಿಸ್ತಾನವು ಕದಮ ವಿರಾಮ ಉಲ್ಲಂಘಿಸಿ ಕಾಶ್ಮೀರ ಪ್ರವೇಶಿಸಿತ್ತು.