ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಗಡಿಯೊಳಗೆ ನುಸುಳಲು 250-300 ಉಗ್ರರಿಂದ ಯತ್ನ:ಭಾರತೀಯ ಸೇನೆ ಎಚ್ಚರಿಕೆ

|
Google Oneindia Kannada News

ನವದೆಹಲಿ, ಜುಲೈ 11: ಎಷ್ಟು ಕಲಿತರೂ ಬುದ್ದಿ ಬರದ ಪಾಕಿಸ್ತಾನ ಭಾರತದಲ್ಲಿ ಶಾಂತಿ ಕದಡುವ ಪ್ರಯತ್ನಕ್ಕೆ ಮತ್ತೆ ಕೈ ಹಾಕಿದಂತಿದೆ. ಇದಕ್ಕೆ ಸಾಕ್ಷಿ 250 ರಿಂದ 300 ಕ್ಕೂ ಹೆಚ್ಚು ಉಗ್ರರು ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾರತೀಯ ಸೇನೆ ಎಚ್ಚರಿಸಿದೆ.

Recommended Video

Jaggesh regrets helping Drone Prathap | Oneindia Kannada

ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯು ಕಳೆದ ಹಲವು ವಾರಗಳಿಂದ ಒಂದರ ಹಿಂದೆ ಮತ್ತೊಂದರಂತೆ ಎನ್‌ಕೌಂಟರ್‌ ಮಾಡುವ ಮೂಲಕ ಉಗ್ರರನ್ನು ಸದೆಬಡಿಯುತ್ತಿದೆ. ಹೀಗಾಗಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನಗಳು ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು ಎಂದು ಸೇನೆಯು ಎಚ್ಚರಿಸಿದೆ.

ಶತ್ರುಗಳಿಗೆ ಶೌರ್ಯದ ಪರಿಚಯ ಮಾಡಿಸಿದ್ದೀರಿ ಎಂದ ಮೋದಿಶತ್ರುಗಳಿಗೆ ಶೌರ್ಯದ ಪರಿಚಯ ಮಾಡಿಸಿದ್ದೀರಿ ಎಂದ ಮೋದಿ

ಕುಪ್ವಾರಾ ಗಡಿ ಜಿಲ್ಲೆಯ ನೌಗಮ್ ಸೆಕ್ಟರ್‌ನ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಇಂದು ಒಳನುಸುಳುವಿಕೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿರುವಾಗ ಬಾರಾಮುಲ್ಲ ಪ್ರಾಂತ್ಯದ ಜನರಲ್-ಆಫೀಸರ್-ಕಮಾಂಡಿಂಗ್ (ಜಿಒಸಿ), ಮೇಜರ್ ಜನರಲ್ ವೀರೇಂದ್ರ ವ್ಯಾಟ್ಸ್, ಮಾತನಾಡಿ " ಅವರ ಲಾಂಚ್‌ ಪ್ಯಾಡ್‌ಗಳನ್ನು ಸಂಪೂರ್ಣವಾಗಿ ಉಗ್ರರು ಆಕ್ರಮಿಸಿಕೊಂಡಿದೆ ಎಂದು ಸೂಚಿಸುತ್ತದೆ. ನಾವು ಊಹಿಸಬೇಕಾದರೆ, ಅದು ಪ್ರಸ್ತುತ ಲಾಂಚ್ ಪ್ಯಾಡ್‌ಗಳನ್ನು ಆಕ್ರಮಿಸಿಕೊಂಡಿರುವ 250-300 ಭಯೋತ್ಪಾದಕರ ನಡುವೆ ಆಗಿರಬಹುದು." ಎಂದರು.

Indian Army Warning:Around 250-300 Terrorists Present In Launchpads Along LOC

ನೌಗಂನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು ಅವರಿಂದ 1.5 ಲಕ್ಷ ಭಾರತೀಯ ಮತ್ತು ಪಾಕಿಸ್ತಾನಿ ಕರೆನ್ಸಿ ಸೇರಿದಂತೆ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಮ್ಮು ಮತ್ತು ಕಾಶ್ಮೀರದ ಶಾಂತಿಯನ್ನು ಭಂಗಗೊಳಿಸಲು ಕಾಶ್ಮೀರ ಕಣಿವೆಯಲ್ಲಿ ಹೆಚ್ಚು ಹೆಚ್ಚು ಭಯೋತ್ಪಾದಕರನ್ನು ತಳ್ಳಲು ಪಾಕಿಸ್ತಾನ ತೀವ್ರವಾಗಿ ಪ್ರಯತ್ನಿಸುತ್ತಿದೆ ಎಂದು ಮೇಜರ್ ಜನರಲ್ ವೀರೇಂದ್ರ ವ್ಯಾಟ್ಸ್ ಎಚ್ಚರಿಸಿದ್ದಾರೆ.

English summary
Around 250-300 terrorists along the LoC waiting to infiltrate Indian territory from the other side of the border, confirmed Major General Virendra Vats on Saturday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X