ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಿಂದ ಮತ್ತೆ ಕದನವಿರಾಮ ಉಲ್ಲಂಘನೆ, ಭಾರತೀಯ ಯೋಧ ಹುತಾತ್ಮ

|
Google Oneindia Kannada News

ಶ್ರೀನಗರ, ಆಗಸ್ಟ್ 23: ಜಮ್ಮು ಮತ್ತು ಕಾಶ್ಮೀರದ ನೌಶೇರಾ ಪ್ರದೇಶದ ಗಡಿನಿಯಂತ್ರಣ ರೇಖೆ ಬಳಿ ಕದನವಿರಾಮ ಉಲ್ಲಂಘಿಸಿ, ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಗೆ ಪ್ರತಿದಾಳಿ ನಡೆಸುವ ಸಂದರ್ಭದಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಕಣಿವೆ ರಾಜ್ಯದ ರಾಜೌರಿ ಜಿಲ್ಲೆಯಲ್ಲಿ ಇಂದು ಬೆಳಗ್ಗಿನಿಂದಲೂ ಪಾಕಿಸ್ತಾನ ಕದನವಿರಾಮ ಉಲ್ಲಂಘಿಸಿ, ಗುಂಡಿನ ದಾಳಿ ನಡೆಸುತ್ತಿತ್ತು. ಭಾರತೀಯ ಸೇನೆ ಆ ದಾಳಿಯನ್ನು ಸಮರ್ಥವಾಗಿ ಎದುರಿಸಿ, ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿತ್ತು. ಈ ಸಂದರ್ಭದಲ್ಲಿ ಏಕಾಏಕಿಯಾಗಿ ಪಾಕಿಸ್ತಾನ ಶೆಲ್ಲಿಂಗ್ ದಾಳಿ ನಡೆಸಿದ ಪರಿಣಾಮ ನಾಯ್ಕ್ ರಾಜಿಬ್ ಥಾಪಾ ಎಂದ ಯೋಧ ಹುತಾತ್ನರಾದರು.

Recommended Video

ಕರ್ತವ್ಯ ಮುಗಿಸಿ ಧೋನಿ ದೆಹಲಿಗೆ ಹೋಗಿದ್ದೇಕೆ..! | MS Dhoni | Oneindia Kannada

ಜಮ್ಮು ಕಾಶ್ಮೀರದಲ್ಲಿ ಪಾಕ್ ಗುಂಡಿಗೆ ಯೋಧ ರವಿ ರಂಜನ್ ಹುತಾತ್ಮಜಮ್ಮು ಕಾಶ್ಮೀರದಲ್ಲಿ ಪಾಕ್ ಗುಂಡಿಗೆ ಯೋಧ ರವಿ ರಂಜನ್ ಹುತಾತ್ಮ

ರಾಜಿಬ್ ಮೂಲತಃ ಪಶ್ಚಿಮ ಬಂಗಾಳ ರಾಜ್ಯದ ಜಲಪೈಗುರಿ ಜಿಲ್ಲೆಯ ಮೆಖಾಪರದವರಾಗಿದ್ದು, ಪತ್ನಿ ಖುಷ್ಬು ಮಂಗಾರ್ ಥಾಪಾ ಅವರನ್ನು ಅಗಲಿದ್ದಾರೆ.

Indian Army soldier martyred as Pakistan Violates Ceasefire in LoC

ಕಾಶ್ಮೀರದಲ್ಲಿ ಪಾಕಿಸ್ತಾನದ ಗುಂಡಿಗೆ ಸೈನಿಕ ಹುತಾತ್ಮಕಾಶ್ಮೀರದಲ್ಲಿ ಪಾಕಿಸ್ತಾನದ ಗುಂಡಿಗೆ ಸೈನಿಕ ಹುತಾತ್ಮ

ಆಗಸ್ಟ್ 17 ರಂದು ಅಪ್ರಚೋದಿತ ಗುಂದಿನ ದಾಳಿ ಆರಂಭಿಸಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿತ್ತು. ಈ ಸಂದರ್ಭದಲ್ಲಿ ಲಾನ್ಸ್ ನಾಯಕ್ ಸಂದೀಪ್ ಥಾಪಾ ಎನ್ನುವವರು ಹುತಾತ್ಮರಾಗಿದ್ದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಹಿಂಪಡೆದ ನಂತರವೂ ಶಾಂತವಾಗಿಯೇ ಇರುವ ಕಾಶ್ಮೀರ ಕಣಿವೆಯಲ್ಲಿ ಅಶಾಂತಿ, ಹಿಂಸಾಚಾರ ಉಂಟು ಮಾಡಿ ವಿಶ್ವದ ಗಮನ ಸೆಳೆಯಲು ಪಾಕಿಸ್ತಾನ ಪ್ರಯತ್ನಿಸುತ್ತಿದ್ದು, ದಿನವೂ ಗುಂಡಿನ ದಾಳಿ ನಡೆಸುತ್ತಲೇ ಇದೆ.

English summary
An Indian Army soldier was martyred on Friday as Pakistan continued to violate the ceasefire agreement in LOC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X