• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಕಿಸ್ತಾನ ಸೇನೆಯ ಕ್ವಾಡ್‌ಕಾಪ್ಟರ್ ಹೊಡೆದುರುಳಿಸಿದ ಭಾರತ

|

ಶ್ರೀನಗರ, ಅಕ್ಟೋಬರ್ 24: ಭಾರತೀಯ ಸೇನೆಯು ಪಾಕಿಸ್ತಾನ ಸೇನೆಗೆ ಸೇರಿದ ಕ್ವಾಡ್‌ಕಾಪ್ಟರ್ ಅನ್ನು ಜಮ್ಮು ಮತ್ತು ಕಾಶ್ಮೀರದ ಕೇರನ್ ವಲಯದ ಗಡಿ ನಿಯಂತ್ರಣ ರೇಖೆ ಬಳಿ ಹೊಡೆದುರುಳಿಸಿದೆ.

ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಪಾಕಿಸ್ತಾನ ಸೇನೆಯ ಕ್ವಾಡ್‌ಕಾಪ್ಟರ್‌ಅನ್ನು ಸೇನೆ ಹೊಡೆದುರುಳಿಸಿದೆ. ಪಾಕಿಸ್ತಾನಿ ಕ್ವಾಡ್‌ಕಾಪ್ಟರ್ ಚೀನಾದ ಕಂಪೆನಿಯ ಡಿಜೆಐ ಮ್ಯಾವಿಕ್ 2 ಪ್ರೊ ಮಾದರಿಯದ್ದಾಗಿದೆ. ಭಾರತದ ಪ್ರದೇಶದೊಳಗೆ ಹಾರಾಟ ನಡೆಸುತ್ತಿದ್ದಾಗ ಅದನ್ನು ಹೊಡೆಯಲಾಗಿದೆ.

ಭಾರತೀಯ ಸೇನೆ ಬಂಧಿಸಿದ್ದ ಚೀನೀ ಸೈನಿಕನ ಹಸ್ತಾಂತರ

'ಭಾರತೀಯ ಸೇನಾ ಪಡೆಗಳು ಪಾಕಿಸ್ತಾನ ಸೇನೆಯ ಕ್ವಾಡ್‌ಕಾಪ್ಟರ್‌ಅನ್ನು ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಕೇರನ್ ವಲಯದ ಎಲ್‌ಒಸಿ ಬಳಿ ಹೊಡೆದು ಉರುಳಿಸಿದೆ. ಪಾಕಿಸ್ತಾನಿ ಕ್ವಾಡ್‌ಕಾಪ್ಟರ್ ಚೀನಾ ಕಂಪೆನಿ ಡಿಜೆಐ ಮ್ಯಾವಿಕ್ 2 ಪ್ರೋ ಮಾಡೆಲ್‌ನದ್ದಾಗಿ. ನಮ್ಮ ದೇಶದೊಳಗೆ ಹಾರಾಡುವಾಗ ಅದನ್ನು ಹೊಡೆಯಲಾಗಿದೆ' ಎಂದು ಸೇನೆಯ ಅಧಿಕಾರಿ ತಿಳಿಸಿದ್ದಾರೆ.

ಪಾಕ್ ಸೈನಿಕನ ಸಮಾಧಿ ಮರು ಸ್ಥಾಪಿಸಿದ ಭಾರತೀಯ ಯೋಧರು

ಭಾರತವು ಚೀನಾದೊಂದಿಗೆ ಲಡಾಖ್ ಗಡಿ ಬಳಿ ಸಂಘರ್ಷ ನಡೆಸುತ್ತಿರುವಾಗ ಇತ್ತ ಪಾಕಿಸ್ತಾನವು ಉಗ್ರರು ಮತ್ತು ಗಡಿ ಕಾರ್ಯಾಚರಣೆ ತಂಡಗಳನ್ನು ಎಲ್‌ಒಸಿಯಲ್ಲಿನ ಭಾರತೀಯ ಪಡೆಗಳ ಮೇಲೆ ದಾಳಿ ನಡೆಸಲು ಬಳಸುತ್ತಿದೆ. ಹೀಗಾಗಿ ಪಾಕಿಸ್ತಾನದ ಚಟುವಟಿಕೆಗಳ ಮೇಲೆ ಭಾರತ ಹದ್ದಿನ ಕಣ್ಣು ಇರಿಸಿದೆ.

English summary
Indian army on Saturday has shot down Pakistan army's Quadcopter in Jammu and Kashmir's Keran sector along LOC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X