ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ಮಾದರಿಯ ಮತ್ತೊಂದು ದಾಳಿ ತಡೆದ ಸೇನಾ ಪಡೆ: 52 ಕೆ.ಜಿ. ಸ್ಫೋಟಕ ವಶ

|
Google Oneindia Kannada News

ಶ್ರೀನಗರ, ಸೆಪ್ಟೆಂಬರ್ 18: ಪುಲ್ವಾಮಾ ಮಾದರಿಯ ಸಂಭವನೀಯ ದಾಳಿಯೊಂದನ್ನು ತಡೆಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಗಡಿಕಲ್‌ನ ಕರೇವಾ ಪ್ರದೇಶದಲ್ಲಿ ಸಿಂಟೆಕ್ಸ್ ಟ್ಯಾಂಕ್ ಒಂದರಲ್ಲಿ ಸುಮಾರು 52 ಕೆಜಿ ತೂಕದ ಸ್ಫೋಟಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿಗಳನ್ನು ಆಧರಿಸಿ ಗುರುವಾರ ಬೆಳಿಗ್ಗೆ 8 ಗಂಟೆಗೆ ಕರೇವಾದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ 42 ರಾಷ್ಟ್ರೀಯ ರೈಫಲ್ಸ್, ಸಿಂಟೆಕ್ಸ್ ಟ್ಯಾಂಕ್ ಒಂದರಲ್ಲಿ ಭರ್ತಿ ಮಾಡಲಾಗಿದ್ದ 52 ಕೆಜಿ ತೂಕದಷ್ಟು 416 ಪ್ಯಾಕೆಟ್‌ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರತಿ ಪ್ಯಾಕೆಟ್ 125 ಗ್ರಾಂ ತೂಗುತ್ತಿತ್ತು.

ಜಮ್ಮು ಕಾಶ್ಮೀರದಲ್ಲಿ 3 ಉಗ್ರರನ್ನು ಸದೆಬಡಿದ ಭಾರತೀಯ ಸೇನೆ ಜಮ್ಮು ಕಾಶ್ಮೀರದಲ್ಲಿ 3 ಉಗ್ರರನ್ನು ಸದೆಬಡಿದ ಭಾರತೀಯ ಸೇನೆ

ಮತ್ತಷ್ಟು ಪರಿಶೀಲನೆ ನಡೆಸಿದ ಸೇನಾ ಪಡೆ, ಕರೇವಾದಲ್ಲಿ ಮತ್ತೊಂದು ಸಿಂಟೆಕ್ಸ್ ಟ್ಯಾಂಕ್‌ನಿಂದ 50 ಡೆಟೊನೇಟರ್ಸ್‌ಗಳನ್ನು ಸಹ ವಶಪಡಿಸಿಕೊಂಡಿದೆ. ಲೆಟಪೊರಾದ ಆಗ್ನೇಯ ದಿಕ್ಕಿನಿಂದ 9 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಯಸಮೀಪವೇ ಈ ಸ್ಫೋಟಗಳು ಪತ್ತೆಯಾಗಿವೆ. ಪುಲ್ವಾಮಾ ದಾಳಿ ನಡೆದ ಸ್ಥಳ ಕೂಡ ಹೆಚ್ಚು ದೂರವಿಲ್ಲ.

Indian Army Averts Pulwama Type Attack In Jammu And Kashmir

ಕಳೆದ ವರ್ಷದ ಫೆಬ್ರವರಿ 14ರಂದು 40 ಸಿಆರ್‌ಪಿಎಫ್ ಯೋಧರನ್ನು ಕರೆಯುತ್ತಿದ್ದ ಸೇನಾ ವಾಹನದ ಮೇಲೆ ಪುಲ್ವಾಮಾ ಜಿಲ್ಲೆಯ ಆವಂತಿಪೊರದ ಗೋರಿಪುರ ಪ್ರದೇಶದಲ್ಲಿ ಆತ್ಮಾಹುತಿ ವಾಹನ ಬಾಂಬ್ ದಾಳಿ ನಡೆಸಲಾಗಿತ್ತು. ಇದರಿಂದ 40 ಯೋಧರು ಮೃತಪಟ್ಟಿದ್ದರು. ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು.

English summary
Indian Army has averted a Pulwama type attack and recovered 52 KGs of explosives from a syntex tank in Karewa area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X