• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಕ್ ಸೈನಿಕನ ಸಮಾಧಿ ಮರು ಸ್ಥಾಪಿಸಿದ ಭಾರತೀಯ ಯೋಧರು

|

ಶ್ರೀನಗರ, ಅಕ್ಟೋಬರ್ 17: ಹಾನಿಗೊಳಗಾಗಿದ್ದ ಪಾಕಿಸ್ತಾನ ಸೈನಿಕನ ಸಮಾಧಿಯನ್ನು ಪುನಃಸ್ಥಾಪಿಸುವ ಮೂಲಕ ಭಾರತೀಯ ಸೈನಿಕರು ಗೌರವ ಸಲ್ಲಿಸಿದ್ದು, ಯೋಧರ ಈ ಕಾರ್ಯಕ್ಕೆ ಮೆಚ್ಚುಗೆಯ ಸುರಿಮಳೆಯೇ ಬಂದಿದೆ.

ಈ ಸಮಾಧಿ ದಿವಂಗತ ಮೇಜರ್ ಮೊಹಮ್ಮದ್ ಶಬ್ಬಿರ್ ಖಾನ್ ಅವರದ್ದು. 1972ರಲ್ಲಿ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಭಾರತೀಯ ಸೈನಿಕರ ದಾಳಿಗೆ ತುತ್ತಾಗಿ, ಸಾವನ್ನಪ್ಪಿದ್ದರು.

ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್‌: ಓರ್ವ ಉಗ್ರನ ಹತ್ಯೆ

ಖಾನ್ ಪಾಕಿಸ್ತಾನದ ಮೂರನೇ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯಾದ ಸೀತಾರಾ-ಎ-ಜುರಾತ್ ಪಡೆದವರಾಗಿದ್ದಾರೆ.

'ಸೈನಿಕನೇ ಮೊದಲು ಉಳಿದದ್ದೆಲ್ಲ ನಂತರ' ಎಂಬ ಧ್ಯೇಯ ವಾಕ್ಯದ ಬದ್ಧತೆಯನ್ನು ಭಾರತೀಯ ಸೇನೆ ಪ್ರದರ್ಶಿಸಿದ ಬಳಿಕ ಇದೀಗ ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ. ಜಮ್ಮು-ಕಾಶ್ಮೀರದ ನೌಗಮ್ ಸೆಕ್ಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನಿ ಅಧಿಕಾರಿಯ ಸಮಾಧಿ ಹಾಳಾಗಿದ್ದನ್ನು ಕಂಡು ಭಾರತೀಯ ಸೈನಿಕರು, ಮರು ಸ್ಥಾಪಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.

ದಿವಂಗತ ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಮಾಧಿಯನ್ನು ಭಾರತೀಯ ಸೈನಿಕರು ಪುನಃ ಸ್ಥಾಪಿಸಿದ್ದು, ಹುತಾತ್ಮ ಸೈನಿಕ ಯಾವುದೇ ದೇಶಕ್ಕೆ ಸೇರಿದ್ದರೂ ಗೌರವಕ್ಕೆ ಅರ್ಹ ಎಂದು ಶ್ರೀನಗರ ಮೂಲದ ಸೈನ್ಯದ ಚಿನಾರ್ ಕಾರ್ಪ್ಸ್ ತಿಳಿಸಿದೆ. ಅಲ್ಲದೆ ಅವರ ಸಮಾಧಿಯನ್ನು ಮರು ಸ್ಥಾಪಿಸಿದೆ.

ಸಮಾಧಿಯನ್ನು ಮರು ಸ್ಥಾಪಿಸಿದ ಫೋಟೋಗಳನ್ನು ಚಿನಾರ್ ಕಾರ್ಪ್ಸ್ ಟ್ವೀಟ್ ಮಾಡಿದ್ದು, ಮೇಜರ್ ಮೊಹಮ್ಮದ್ ಶಬ್ಬಿರ್ ಖಾನ್ ನೆನಪಿನಾರ್ಥವಾಗಿ ಸಿತಾರ್-ಎ-ಜುರತ್ ಶಾಹಿದ್ 5 ಮೇ, 1972, 1630 ಎಚ್ ಅವರು ಇ ಸಿಖ್ಖರ ಪ್ರತಿ ದಾಳಿ ವೇಳೆ ಸಾವನ್ನಪ್ಪಿದ್ದಾರೆ ಎಂದು ಟ್ವೀಟ್‍ನಲ್ಲಿ ಬರೆಯಲಾಗಿದೆ.

ಭಾರತೀಯ ಸೇನೆಯ ಸಂಪ್ರದಾಯ ಹಾಗೂ ನೀತಿಯಂತೆ ಚಿನಾರ್ ಕಾರ್ಪ್ಸ್ ಪಾಕಿಸ್ತಾನ ಸೇನೆಯ ಮೇಜರ್ ಮೊಹಮ್ಮದ್ ಶಬ್ಬಿರ್ ಖಾನ್, ಸಿತಾರಾ-ಎ-ಜುರತ್ ಅವರ ಹಾನಿಗೊಂಡಿದ್ದ ಸಮಾಧಿಯನ್ನು ಪುನಃ ಸ್ಥಾಪಿಸಲಾಗಿದೆ. ಅವರು 5 ಮೇ, 1972ರಂದು ನೌಗಮ್ ಸೆಕ್ಟರ್ ನಲ್ಲಿ ಎಲ್‍ಸಿ ಉದ್ದಕ್ಕೂ ಇದ್ದ ಕಿಲ್ಲ್ಡ್ ಇನ್ ಆ್ಯಕ್ಷನ್(ಕೆಐಎ) ವೇಳೆ ಸಾವನ್ನಪ್ಪಿದ್ದಾರೆ ಎಂದು ಟ್ವೀಟ್‍ನಲ್ಲಿ ತಿಳಿಸಲಾಗಿದೆ.

ಪಾಕಿಸ್ತಾನವು ಭಯೋತ್ಪಾದಕರನ್ನು ಭಾರತದ ಕಡೆಗೆ ನುಸುಳುತ್ತಲೇ ಇದೆ ಮತ್ತು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಅವರ ಪಡೆ ನಿರ್ಧರಿಸಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾನೆ ಹೇಳಿದ್ದಾರೆ.

English summary
The Indian Army on Thursday said it has restored the damaged grave of a decorated Pakistani officer in Naugam sector of Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X