ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್‌ನಲ್ಲಿ ತನ್ನ ಸೇನಾ ಸಿಬ್ಬಂದಿಗೆ ವಸತಿ ವ್ಯವಸ್ಥೆ ಬದಲಿಸಿದ ಚೀನಾ

|
Google Oneindia Kannada News

ಲಡಾಖ್, ಸೆಪ್ಟೆಂಬರ್ 28: ಈಶಾನ್ಯ ಲಡಾಖ್‌ನಲ್ಲಿ ಚೀನಾ ಸೇನಾ ಸಿಬ್ಬಂದಿಗೆ ಕಂಟೈನರ್ ಆಧಾರಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಈಶಾನ್ಯ ಲಡಾಖ್‌ನಲ್ಲಿ ತನ್ನ ವ್ಯಾಪ್ತಿಯ ಎತ್ತರದ ಪ್ರದೇಶಗಳಲ್ಲಿ ಚೀನಾ ತನ್ನ ಸೇನಾ ಸಿಬ್ಬಂದಿಗಳಿಗೆ ಮಾಡ್ಯುಲರ್ ಕಂಟೈನರ್ ಆಧಾರಿತ ವಸತಿಗಳನ್ನು ಕಲ್ಪಿಸಿದೆ ಎಂಬ ಮಾಹಿತಿ ಸ್ಥಳೀಯ ಬೆಳವಣಿಗೆಯ ಬಗ್ಗೆ ಅರಿವಿರುವ ಮೂಲಗಳಿಂದ ತಿಳಿದುಬಂದಿದೆ.

 ಜನಸಂಖ್ಯೆ ಏರಿಕೆ; ಕುಟುಂಬ ಯೋಜನೆ ಸಂಬಂಧ ಮೂರು ಕಾನೂನು ರದ್ದುಗೊಳಿಸಿದ ಚೀನಾ ಜನಸಂಖ್ಯೆ ಏರಿಕೆ; ಕುಟುಂಬ ಯೋಜನೆ ಸಂಬಂಧ ಮೂರು ಕಾನೂನು ರದ್ದುಗೊಳಿಸಿದ ಚೀನಾ

ತಶಿಗಾಂಗ್, ಮಾಂಜಾ, ಹಾಟ್ ಸ್ಪ್ರಿಂಗ್ಸ್ ಮತ್ತು ಚುರುಪ್‌ಗಳಲ್ಲಿ ಚೀನಾ ತನ್ನ ಸಿಬ್ಬಂದಿಗಳಿಗೆ ಈ ರೀತಿಯ ವಸತಿ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಈ ನಡುವೆ ಭಾರತ ಈಶಾನ್ಯ ಲಡಾಖ್ ಹಾಗೂ ಎಲ್ಎಸಿಗೆ 3,500 ಕಿ.ಮೀ ವ್ಯಾಪ್ತಿಯಲ್ಲಿ ಟನಲ್ ಗಳ ನಿರ್ಮಾಣ, ಸೇತುವೆ ರಸ್ತೆಗಳಂತಹ ಮೂಲಸೌಕರ್ಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುತ್ತಿದೆ.

In Eastern Ladakh China Installs New Shelters For Troops

ಇತ್ತ ಚೀನಾ ಸಹ ಈಶಾನ್ಯ ಲಡಾಖ್ ನ ಬಳಿಯ ತನ್ನ ಪ್ರದೇಶದಲ್ಲಿ ತನ್ನ ವಾಯುನೆಲೆಗಳು, ರಕ್ಷಣಾ ಘಟಕಗಳ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಸೂಕ್ಷ್ಮ ಪ್ರದೇಶವಾಗಿರುವ ಎಲ್ಎಸಿಯಲ್ಲಿ ಉಭಯ ರಾಷ್ಟ್ರಗಳ ಬಳಿ ತಲಾ 50,000-60,000 ತುಕಡಿಗಳಿವೆ.

ಪಿಎಲ್ಎ ಸಿಬ್ಬಂದಿಗಳು ತನ್ನ ದುಸ್ಸಾಹಸಕ್ಕೆ ಕಳೆದ ವರ್ಷ ಭಾರತೀಯ ಸೇನೆಯ ತಕ್ಕ ಪ್ರತ್ಯುತ್ತರದಿಂದ ತತ್ತರಿಸಿದ್ದು ಸ್ಥಳೀಯವಾಗಿ ಚೀನಾ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಗಳನ್ನು ನಿಯೋಜಿಸುತ್ತಿದೆ ಹಾಗೂ ಮೂಲಸೌಕರ್ಯವನ್ನು ಈ ಪ್ರದೇಶದಲ್ಲಿ ಹೆಚ್ಚಿಸಿಕೊಳ್ಳುತ್ತಿದೆ.

ಗಲ್ವಾನ್ ಕಣಿವೆಯಲ್ಲಿ ಘರ್ಷಣೆಯ ನಂತರ ಚೀನಾ ತಾನು ಎಂದಿಗೂ ನಿಯೋಜಿಸದ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೇನಾ ಪಡೆಗಳನ್ನು ನಿಯೋಜಿಸುತ್ತಿರುವುದು ಅಚ್ಚರಿ ಮೂಡಿಸಿದೆ.

ನಮ್ಮ ಕಾರ್ಯತಂತ್ರ ಅವರಿಗೆ ನೋವುಂಟುಮಾಡುತ್ತಿದೆ; ನಮ್ಮ ಪ್ರತಿಕ್ರಿಯೆಗೆ ಚೀನಾದವರೂ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಗಲ್ವಾನ್ ಕಣಿವೆಯ ಎಲ್ಒಸಿಯಲ್ಲಿ ಚೀನಾದ ಪಿಎಲ್ಎ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡುವಂತಾಗಿದೆ.

ಈ ಹವಾಮಾನದಲ್ಲಿ ಚೀನಾದ ಮಂದಿ ಎಂದಿಗೂ ಕಾರ್ಯಾಚರಣೆ ನಡೆಸಿರಲಿಲ್ಲ. ಆದ್ದರಿಂದ ಅವರ ವಿಶ್ವಾಸ ಕುಗ್ಗುತ್ತಿದ್ದು ಚೀನಾ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮೊರೆ ಹೋಗಿದೆ ಎನ್ನುತ್ತಾರೆ ಸ್ಥಳೀಯರು.

ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಯೋಜಿಸಿದ್ದ ಕ್ವಾಡ್ ಶೃಂಗಸಭೆಯ ಬಗ್ಗೆ ಚೀನಾ ಪ್ರತಿಕ್ರಿಯೆ ನೀಡಿದೆ.

ಕೆಲವು ರಾಷ್ಟ್ರಗಳು ಪ್ರತ್ಯೇಕ ಗುಂಪುಗಳನ್ನು ರಚಿಸಿಕೊಂಡು ಚೀನಾದ ಅಪಾಯ ಎಂಬ ವಿಷಯವನ್ನು ಹೆಚ್ಚು ಪ್ರಚಾರ ಮಾಡುತ್ತಿವೆ ಎಂದು ಚೀನಾ ಕ್ವಾಡ್ ನ ಬಗ್ಗೆ ಟೀಕೆ ಮಾಡಿದೆ.

ಕ್ವಾಡ್ ನ ಈ ನಡೆ ವಿಫಲವಾಗಲಿದೆ ಎಂದು ಚೀನ ಭವಿಷ್ಯ ನುಡಿದಿದೆ. ಸೆ.25 ರಂದು ಕ್ವಾಡ್ ನ ಸಭೆ ನಡೆದಿತ್ತು. ಈ ಸಭೆಯಲ್ಲಿ ಭಾರತವೂ ಭಾಗಿಯಾಗಿತ್ತು. ಮುಕ್ತ ಹಾಗೂ ಸ್ವತಂತ್ರ ಇಂಡೋ-ಪೆಸಿಫಿಕ್ ನ್ನು ಖಾತ್ರಿಪಡಿಸಿಕೊಳ್ಳುವುದು ಈ ಸಭೆಯ ಉದ್ದೇಶವಾಗಿತ್ತು.

ಈ ಭಾಗದಲ್ಲಿ ಚೀನಾದ ಮಿಲಿಟರಿ ಬಲ ಹೆಚ್ಚುಗೊಳ್ಳುತ್ತಿರುವುದರಿಂದ ಚೀನಾವನ್ನು ನಿಯಂತ್ರಿಸುವ ಬಗ್ಗೆ ಕ್ವಾಡ್ ನಲ್ಲಿ ಚರ್ಚಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ, ಅಮೆರಿಕ ಅಧ್ಯಕ್ಷ, ಜಪಾನ್ ನ ಪ್ರಧಾನಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಭೆಯ ಬಗ್ಗೆ ಚೀನಾದ ಪ್ರತಿಕ್ರಿಯೆ ಕೇಳಿದಾಗ ಇದಕ್ಕೆ ಉತ್ತರಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹ್ಯೂ ಚುನ್ಯಿಂಗ್, ಕ್ವಾಡ್ ಸಭೆಯನ್ನು ಗಮನಿಸಿದ್ದೇವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದೆ.

ಒಂದಷ್ಟು ಸಮಯದಿಂದ ಕೆಲವು ರಾಷ್ಟ್ರಗಳು ಚೀನಾದ ಮೇಲೆ ದಾಳಿ ಮಾಡುವ ಗೀಳು ಹೊಂದಿದೆ. ಚೀನಾದ ಅಪಾಯ' ಎಂಬ ವಿಷಯವನ್ನು ಹೆಚ್ಚು ಪ್ರಚಾರ ಮಾಡುತ್ತಿವೆ ಎಂದು ಹೇಳಿದ್ದಾರೆ.

English summary
China has put in place new modular container-based accommodations for its troops in several high-altitude forward areas on its side of the Line of Actual Control (LAC) in eastern Ladakh in response to Indian deployment in the region, people familiar with the developments said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X