ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹಬಂಧನದಿಂದ ಮುಕ್ತಿ; ಮಾಜಿ ಸಿಎಂ ಫಾರೂಕ್ ಅಬ್ದುಲ್ ಹೇಳಿದ್ದೇನು?

|
Google Oneindia Kannada News

ಶ್ರೀನಗರ್, ಮಾರ್ಚ್.13: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾರನ್ನು ವಿರುದ್ಧ ಕೇಂದ್ರ ಸರ್ಕಾರವು ಹೇರಿದ್ದ ಸಾರ್ವಜನಿಕ ಸುರಕ್ಷಿತಾ ಕಾಯ್ದೆಯನ್ನು ತೆರವುಗೊಳಿಸಲಾಗಿದೆ.

ಕಳೆದ ಏಳು ತಿಂಗಳಿನಿಂದ ಗೃಹ ಬಂಧನದಲ್ಲಿದ್ದ ಫಾರೂಕ್ ಅಬ್ದುಲ್ಲಾ ಶುಕ್ರವಾರ ಅದರಿಂದ ಹೊರ ಬಂದಿದ್ದಾರೆ. ಈ ವೇಳೆ ಮಾತನಾಡಿದ ಅವರು, ನನಗೆ ಮಾತುಗಳೇ ಹೊರಡುತ್ತಿಲ್ಲ. ನಾನೀನ ಆರಾಮವಾಗಿದ್ದೇನೆ ಎಂದರು.

ಜಮ್ಮು ಕಾಶ್ಮೀರ: ಗೃಹ ಬಂಧನದಲ್ಲಿದ್ದ ಫಾರೂಕ್ ಅಬ್ದಾಲ್ಲಾಗೆ ಬಿಡುಗಡೆ ಭಾಗ್ಯಜಮ್ಮು ಕಾಶ್ಮೀರ: ಗೃಹ ಬಂಧನದಲ್ಲಿದ್ದ ಫಾರೂಕ್ ಅಬ್ದಾಲ್ಲಾಗೆ ಬಿಡುಗಡೆ ಭಾಗ್ಯ

ಗೃಹಬಂಧನದಿಂದ ಹೊರ ಬಂದಿರುವ ನಾನು ದೆಹಲಿಗೆ ತೆರಳಲು ಶಕ್ತನಾಗಿದ್ದೇನೆ. ಸಂಸತ್ ಅಧಿವೇಶನದಲ್ಲಿ ಭಾಗಿಯಾಗಲಿದ್ದು, ಸಾರ್ವಜನಿಕರ ಪರವಾಗಿ ಕಲಾಪದಲ್ಲಿ ಧ್ವನಿ ಎತ್ತುತ್ತೇನೆ ಎಂದು ಫಾರೂಕ್ ಅಬ್ದುಲ್ಲಾ ತಿಳಿಸಿದರು.

ಗೃಹ ಬಂಧನದಲ್ಲಿಟ್ಟ ನಾಯಕರ ಬಿಡುಗಡೆ ಬಗ್ಗೆ ಮಾತು

ಗೃಹ ಬಂಧನದಲ್ಲಿಟ್ಟ ನಾಯಕರ ಬಿಡುಗಡೆ ಬಗ್ಗೆ ಮಾತು

ಸಾರ್ವಜನಿಕ ಸುರಕ್ಷತಾ ಕಾಯ್ದೆ 1978ರ ಸೆಕ್ಷನ್ 19(1)ರ ಅಡಿಯಲ್ಲಿ ಗೃಹ ಬಂಧನದಲ್ಲಿ ಇಟ್ಟಿರುವ ಎಲ್ಲ ನಾಯಕರನ್ನು ಬಿಡುಗಡೆ ಮಾಡಬೇಕು. ಆಗ ಮಾತ್ರ ನಮ್ಮ ಸ್ವಾತಂತ್ರ್ಯದ ಹೋರಾಟಕ್ಕೆ ಒಂದು ಅರ್ಥ ಸಿಗುತ್ತದೆ. ನಮ್ಮ ಹೋರಾಟದ ಉದ್ದೇಶ ಪೂರ್ಣಗೊಳ್ಳುತ್ತದೆ ಎಂದರು.

ನಾಯಕರ ಬಿಡುಗಡೆವರೆಗೂ ರಾಜಕಾರಣದ ಮಾತಾಡಲ್ಲ

ನಾಯಕರ ಬಿಡುಗಡೆವರೆಗೂ ರಾಜಕಾರಣದ ಮಾತಾಡಲ್ಲ

ಗೃಹ ಬಂಧನದಲ್ಲಿ ಇರಿಸಿರುವ ಎಲ್ಲ ನಾಯಕರನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಬೇಕು. ಅಲ್ಲಿಯವರೆಗೂ ನಾನು ರಾಜಕಾರಣದ ಬಗ್ಗೆ ಯಾವುದೇ ಮಾತುಗಳನ್ನು ಆಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.

ಫಾರೂಕ್ ಅಬ್ದುಲ್ಲಾ ಗೃಹಬಂಧನವನ್ನು ತೆರವುಗೊಳಿಸಿ ಆದೇಶ

ಫಾರೂಕ್ ಅಬ್ದುಲ್ಲಾ ಗೃಹಬಂಧನವನ್ನು ತೆರವುಗೊಳಿಸಿ ಆದೇಶ

ಕಳೆದ ಸೆಪ್ಪೆಂಬರ್.17ರಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ ಅಡಿಯಲ್ಲಿ ಗೃಹಬಂಧನದಲ್ಲಿ ಇರಿಸಲಾಗಿತ್ತು. ಡಿಸೆಂಬರ್.13ರಂದು ನಾಯಕರ ಗೃಹಬಂಧನದ ಅವಧಿಯನ್ನು ವಿಸ್ತರಿಸಲಾಗಿತ್ತು. ಶುಕ್ರವಾರ ತತ್ ಕ್ಷಣವೇ ಗೃಹಬಂಧನದಿಂದ ಮುಕ್ತಗೊಳಿಸುವಂತೆ ಆದೇಶಿಲಾಗಿದೆ ಎಂದು ಜಮ್ಮು-ಕಾಶ್ಮೀರದ ಗೃಹ ಕಾರ್ಯದರ್ಶಿ ಶಾಲಿನ್ ಕಬ್ರಾ ತಿಳಿಸಿದ್ದಾರೆ. ಇನ್ನು, ಕೇಂದ್ರ ಸರ್ಕಾರದ ಆದೇಶವನ್ನು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕರು ಸ್ವಾಗತಿಸಿದ್ದಾರೆ.

ಗೃಹ ಬಂಧನದಲ್ಲೇ ಉಳಿದವರ ಬಿಡುಗಡೆ ಯಾವಾಗ?

ಗೃಹ ಬಂಧನದಲ್ಲೇ ಉಳಿದವರ ಬಿಡುಗಡೆ ಯಾವಾಗ?

ಫಾರೂಕ್ ಅಬ್ದುಲ್ಲಾರ ಬಿಡುಗಡೆಗೆ ಪುತ್ರಿ ಸಾಫಿಯಾ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಬಿಡುಗಡೆ ಆಗುವುದು ಯಾವಾಗ ಎಂದು ಪಕ್ಷದ ಕಾರ್ಯಕರ್ತರು ಪ್ರಶ್ನೆ ಮಾಡುತ್ತಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುತ್ತಿದ್ದಂತೆ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಉಪಾಧ್ಯಕ್ಷ ಉಮರ್ ಅಬ್ದುಲ್ಲಾ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿರನ್ನು ಕೇಂದ್ರ ಸರ್ಕಾರವು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಗೃಹ ಬಂಧನದಲ್ಲಿ ಇರಿಸಲಾಗಿತ್ತು.

English summary
"I will be able to go to Delhi and attend the Parliament", Say's NC Leader Farooq Abdullah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X