ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನಿಹಾಲ್‌ ಸ್ಫೋಟ : ದಾಳಿಗೆ ಪೋನ್ ಮೂಲಕ ಸೂಚನೆ ಬಂದಿತ್ತು

|
Google Oneindia Kannada News

ಶ್ರೀನಗರ, ಏಪ್ರಿಲ್ 01 : ಬನಿಹಾಲ್ ಬಳಿ ಸಿಎಆರ್‌ಪಿಎಫ್ ವಾಹನದ ಮೇಲೆ ದಾಳಿ ಮಾಡಲು ಪ್ರಯತ್ನ ನಡೆಸಿದ ಉಗ್ರನನ್ನು ಬಂಧಿಸಲಾಗಿದೆ. 'ಫೋನ್ ಮೂಲಕ ದಾಳಿ ಮಾಡಲು ಸೂಚನೆ ಬಂದಿತ್ತು' ಎಂದು ಉಗ್ರ ಹೇಳಿಕೆ ನೀಡಿದ್ದಾನೆ.

ದಕ್ಷಿಣ ಕಾಶ್ಮೀರದಲ್ಲಿ ಸೋಮವಾರ ಓವೈಸ್ ಅಹ್ಮದ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ ಬಿಜ್ಬೆಹರಾ ನಿವಾಸಿಯಾಗಿದ್ದು, ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಸೇರಿದವನು ಎಂದು ಶಂಕಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ.

ಜಮ್ಮು ಹೆದ್ದಾರಿಯಲ್ಲಿ ಸಿಆರ್‌ಪಿಎಫ್ ವಾಹನದ ಬಳಿ ಕಾರು ಸ್ಫೋಟಜಮ್ಮು ಹೆದ್ದಾರಿಯಲ್ಲಿ ಸಿಆರ್‌ಪಿಎಫ್ ವಾಹನದ ಬಳಿ ಕಾರು ಸ್ಫೋಟ

I was asked on phone to explode the convoy : Banihal car blast accused

'ನನಗೆ ದಾಳಿ ಮಾಡಲು ಪೋನ್ ಮೂಲಕ ಸೂಚನೆ ನೀಡಲಾಗಿತ್ತು. ಕಾರನ್ನು ಚಲಾಯಿಸಿಕೊಂಡು ಹೋಗಿ ಬಟನ್ ಒತ್ತುವುದು ಮಾತ್ರ ನನ್ನ ಕೆಲಸವಾಗಿತ್ತು' ಎಂದು ಓವೈಸ್ ಅಹ್ಮದ್ ಪ್ರಾಥಮಿಕ ವಿಚಾರಣೆ ವೇಳೆ ಹೇಳಿದ್ದಾನೆ.

ಪುಲ್ವಾಮಾದಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆಪುಲ್ವಾಮಾದಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆ

'ನಾನು ಕಾರಿನಲ್ಲಿ ಇದ್ದಾಗಲೇ ಬಟನ್ ಪ್ರೆಸ್ ಮಾಡಿದೆ. ಈ ಕೃತ್ಯ ಮಾಡುವಾಗ ನಾನು ಕಾರಿನಲ್ಲಿ ಏಕಾಂಗಿಯಾಗಿದ್ದೆ' ಎಂದು ಪ್ರಾಥಮಿಕ ತನಿಖೆ ವೇಳೆ ಓವೈಸ್ ಅಹ್ಮದ್ ತಪ್ಪೊಪ್ಪಿಕೊಂಡಿದ್ದಾನೆ.

ಜೈಷ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಫೈಯಾಜ್ ಅಹ್ಮದ್ ಬಂಧನಜೈಷ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಫೈಯಾಜ್ ಅಹ್ಮದ್ ಬಂಧನ

ಶನಿವಾರ ಬನಿಹಾಲ್‌ ಬಳಿಯ ಹೆದ್ದಾರಿಯಲ್ಲಿ ಸಿಎಆರ್‌ಪಿಎಫ್‌ನ 10 ವಾಹನಗಳು ಚಲಿಸುತ್ತಿದ್ದಾಗ ಸ್ಯಾಂಟ್ರೋ ಕಾರು ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆ ಕಡಿಮೆ ಇದ್ದ ಕಾರಣ ಯಾವುದೇ ಜೀವ ಹಾನಿಯಾಗಿರಲಿಲ್ಲ. ಕಾರು ಮಾತ್ರ ಸಂಪೂರ್ಣವಾಗಿ ಜಖಂಗೊಂಡಿತ್ತು.

ಫೆಬ್ರವರಿ 14ರಂದು ಪುಲ್ವಮಾದಲ್ಲಿ ಸಿಆರ್‌ಪಿಎಫ್ ವಾಹನಕ್ಕೆ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಡಿಕ್ಕಿ ಹೊಡೆಸಲಾಗಿತ್ತು. ಈ ಘಟನೆಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಇದೇ ಮಾದರಿಯಲ್ಲಿ ಬನಿಹಾಲ್‌ ಬಳಿ ಸ್ಫೋಟ ನಡೆಸಲಾಗಿತ್ತು.

English summary
I was asked on phone to explode the convoy. My task was to drive the car & press the switch said Banihal car blast accused. The accused Owais Ameen has been arrested. During interrogation he confessed to the crime.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X