• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನನ್ನನ್ನು ಬಂಧಿಸಲಾಗಿತ್ತು, ಶಾ ಸುಳ್ಳು ಹೇಳಿದ್ದಾರೆ: ಫಾರೂಕ್ ಅಬ್ದುಲ್ಲಾ

|
Google Oneindia Kannada News

ಬೆಂಗಳೂರು, ಆಗಸ್ಟ್ 06: ಗೃಹ ಸಚಿವ ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ, ನನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು ಎಂದು ಜಮ್ಮು ಕಾಶ್ಮೀರ ಹಿರಿಯ ರಾಜಕಾರಿಣಿ ನ್ಯಾಷನಲ್ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಫಾರೂಕ್ ಅಬ್ದುಲ್ಲಾ ಅವರನ್ನು ಬಂಧಿಸಲಾಗಿಲ್ಲ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಅವರು ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಗೃಹ ಸಚಿವರ ಅಮಿತ್ ಶಾ ಅವರು ಸದನದಲ್ಲಿ ಹೇಳಿದ್ದರು. ಆದರೆ ಅದು ಸುಳ್ಳು ಎಂದು ಸ್ವತಃ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಕಾಶ್ಮೀರ ಕುರಿತು ಕೈ ಮುಖಂಡನ ಹೇಳಿಕೆಗೆ ಸೋನಿಯಾ ಅಸಮಾಧಾನ: ಶಾ ಕೊಟ್ಟರು ದಿಟ್ಟ ಉತ್ತರ ಕಾಶ್ಮೀರ ಕುರಿತು ಕೈ ಮುಖಂಡನ ಹೇಳಿಕೆಗೆ ಸೋನಿಯಾ ಅಸಮಾಧಾನ: ಶಾ ಕೊಟ್ಟರು ದಿಟ್ಟ ಉತ್ತರ

ನನ್ನನ್ನು ಬಂಧಿಸಿರಲಿಲ್ಲ, ನನ್ನನ್ನು ವಶಕ್ಕೂ ಪಡೆದುಕೊಂಡಿರಲಿಲ್ಲ, ಆದರೆ ನನ್ನನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು, ಗೃಹ ಮಂತ್ರಿಗಳೇ ಹೀಗೆ ಸದನದಲ್ಲಿ ಸುಳ್ಳು ಹೇಳಿರುವುದು ದುರಾದೃಷ್ಟಕರ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

'ಫಾರೂಕ್ ಅಬ್ದುಲ್ಲಾ ಅವರು ಏಕೆ ಬಂದಿಲ್ಲ?'

'ಫಾರೂಕ್ ಅಬ್ದುಲ್ಲಾ ಅವರು ಏಕೆ ಬಂದಿಲ್ಲ?'

'ಫಾರೂಕ್ ಅಬ್ದುಲ್ಲಾ ಅವರಿಗೆ ಏನಾಗಿದೆ, ಸದನದಲ್ಲಿ ಅವರು ನನ್ನ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದರು, ಅವರ ಅಭಿಪ್ರಾಯ ಈ ವಿಷಯದಲ್ಲಿ ಮುಖ್ಯವಾಗಿತ್ತು, ಆದರೆ ಅವರಿಲ್ಲದೇ ಮಾಡುವ ಚರ್ಚೆ ಪರಿಪೂರ್ಣವಲ್ಲ' ಎಂದು ಎನ್‌ಎಂಸಿ ಸಂಸದೆ ಸುಪ್ರಿಯಾ ಸುಲೆ ಅವರು ಹೇಳಿದರು.

ಸದನಕ್ಕೆ ಉತ್ತರ ನೀಡಿದ ಅಮಿತ್ ಶಾ

ಸದನಕ್ಕೆ ಉತ್ತರ ನೀಡಿದ ಅಮಿತ್ ಶಾ

ಇದಕ್ಕೆ ಸದನದಲ್ಲಿ ಪ್ರತಿಕ್ರಿಯಿಸಿದ ಅಮಿತ್ ಶಾ, 'ಫಾರೂಕ್ ಅಬ್ದುಲ್ಲಾ ಅವರನ್ನು ಬಂಧಿಸಿಲ್ಲ, ಅವರನ್ನು ವಶಕ್ಕೂ ಪಡೆದಿಲ್ಲ, ಅವರು ತಮ್ಮಿಚ್ಛೆಯಂತೆ ಮನೆಯಲ್ಲಿಯೇ ಉಳಿದಿದ್ದಾರೆ' ಎಂದು ಹೇಳಿದರು.

ಮೋದಿ-ಶಾ ಕಲಂ 370 ರದ್ದು ಮಾಡಲು 5 ಕಾರಣಗಳುಮೋದಿ-ಶಾ ಕಲಂ 370 ರದ್ದು ಮಾಡಲು 5 ಕಾರಣಗಳು

ಗನ್‌ ಹಿಡಿದು ಸದನಕ್ಕೆ ಕರೆತರಲಾಗದು: ಅಮಿತ್ ಶಾ

ಇದೇ ವಿಷಯವಾಗಿ ಸದನದಲ್ಲಿ ಇಂದು ಮೂರು ಬಾರಿ ಉತ್ತರಿಸಿದ ಅಮಿತ್ ಶಾ, ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ, ಅವರಿಗೆ ಬರಲು ಇಷ್ಟವಿಲ್ಲದ ಕಾರಣ ಅವರು ಅವರು ಸದನಕ್ಕೆ ಆಗಮಿಸಿಲ್ಲ. ಅವರಿಗೇ ಇಷ್ಟವಿಲ್ಲವೆಂದ ಮೇಲೆ ನಾವು ಗನ್ ಹಿಡಿದು ಅವರನ್ನು ಸದನಕ್ಕೆ ಕರೆದುಕೊಂಡು ಬರಲು ಸಾಧ್ಯವಿಲ್ಲ' ಎಂದು ಹೇಳಿದರು.

ಮನೆಯಲ್ಲಿ ಉಳಿಯಲು ನನಗೇನು ಹುಚ್ಚೆ: ಫಾರೂಕ್

ಆದರೆ ಈಗ ಸ್ವತಃ ಫಾರೂಕ್ ಅಬ್ದುಲ್ಲಾ ಅವರೇ ತಮ್ಮನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು ಎಂದಿದ್ದಾರೆ. ಮುಂದುವರೆದು ಮಾತನಾಡಿರುವ ಫಾರೂಕ್ ಅಬ್ದುಲ್ಲಾ, 'ನನ್ನ ರಾಜ್ಯ ಹೊತ್ತಿ ಉರಿಯುವಾಗ, ನನ್ನ ಜನರನ್ನು ಜೈಲಿಗೆ ತಳ್ಳುತ್ತಿರುವ ಸಂದರ್ಭದಲ್ಲಿ ನಾನೇಕೆ ಮನೆಯಲ್ಲಿ ಕುಳಿತುಕೊಳ್ಳಲಿ' ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಆರ್ಟಿಕಲ್ 370: ಅಮಿತ್ ಶಾ ಭಾಷಣದ ಕೊನೆಯ ಸಾಲಿನ ಮುತ್ತಿನಂತ ಮಾತುಗಳುಆರ್ಟಿಕಲ್ 370: ಅಮಿತ್ ಶಾ ಭಾಷಣದ ಕೊನೆಯ ಸಾಲಿನ ಮುತ್ತಿನಂತ ಮಾತುಗಳು

English summary
I have been house arrested, home minster Amit Shah lying in the parliament said National conference leader Farooq Abdullah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X