• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ

|

ನವದೆಹಲಿ, ಫೆಬ್ರವರಿ 26 : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರ ಪೊಲೀಸ್ ಮೀಸಲು ಪಡೆಯ ಮೇಲೆ ನಡೆದ ಬರ್ಬರ ಆತ್ಮಾಹುತಿ ದಾಳಿಯ ಪ್ರತೀಕಾರವನ್ನು ಸರಿಯಾಗಿ ಹನ್ನೆರಡು ದಿನಗಳ ನಂತರ ಭಾರತದ ವಾಯು ಸೇನೆ ತೀರಿಸಿಕೊಂಡು, ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ.

ಮಾರುತಿ ಎಕೋ ವಾಹನದಲ್ಲಿ ಸುಮಾರು ನೂರು ಕೆಜಿಯಷ್ಟು ಸ್ಫೋಟಕಗಳನ್ನು ತುಂಬಿಕೊಂಡಿದ್ದ ಆದಿಲ್ ಎಂಬ ಉಗ್ರ, ಕೇಂದ್ರ ಪೊಲೀಸ್ ಮೀಲಸು ಪಡೆಯಿದ್ದ ವಾಹನಕ್ಕೆ ಗುದ್ದಿ ಸ್ಫೋಟಗೊಳಿಸಿದ್ದ. ಈ ದುಷ್ಕೃತ್ಯದಲ್ಲಿ 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಜವಾನರು ಹುತಾತ್ಮರಾಗಿದ್ದರು.

ಪುಲ್ವಾಮಾ ಪ್ರತೀಕಾರ LIVE: ನೂರಾರು ಜೈಷ್ ಉಗ್ರರ ಹತ್ಯೆ ಮಾಡಿದ್ದು ಸತ್ಯ

ಈ ದಾಳಿಯ ನಂತರ ಭಾರತ ಏಕೆ ಭಾರೀ ಪ್ರಮಾಣದಲ್ಲಿ ಪ್ರತೀಕಾರ ತೀರಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳೇ ಕೇಳಿಬರುತ್ತಲೇ ಇದ್ದವು. ವಿರೋಧಿ ಪಕ್ಷಗಳು ಕೂಡ ಭಾರತ ಸರಕಾರವನ್ನು ಕೆಣಕುತ್ತಲೇ ಇತ್ತು. ಇದಕ್ಕೆ ಉತ್ತರವಾಗಿ ಫೆಬ್ರವರಿ 26ರ ಬೆಳಗಿನ ಜಾವ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದಾಳಿ ನಡೆಸಿರುವ ಭಾರತೀಯ ವಾಯು ಸೇನೆ ತಕ್ಕ ಉತ್ತರ ನೀಡಿದೆ.

ಇಲ್ಲಿ ಒಂದು ಗಮನಿಸಬೇಕಾದ ಅತ್ಯಂತ ಪ್ರಮುಖ ಅಂಶವೆಂದರೆ, ಭಾರತದ ವಾಯು ಸೇನೆ ಪಾಕಿಸ್ತಾನದ ಯಾವುದೇ ಸೈನಿಕರ ಮೇಲೆ ದಾಳಿ ನಡೆಸಿಲ್ಲ. ಬದಲಿಗೆ, ದಾಳಿ ನಡೆಸಿರುವುದು, ಪುಲ್ವಾಮಾ ಭಯೋತ್ಪಾದಕ ದಾಳಿಯ ಹೊಣೆಯನ್ನು ತಾನೇ ಹೊತ್ತುಕೊಂಡಿದ್ದ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ ಮೇಲೆ.

ಕೇವಲ 21 ನಿಮಿಷದಲ್ಲಿ ಉಗ್ರರ ನೆಲೆಗಳ ಧ್ವಂಸ, ಆಪರೇಷನ್ ಫಿನಿಷ್

ಆದರೆ, ಈ ಕರಾರುವಾಕ್ ದಾಳಿ ನಡೆದಿದ್ದು ಹೇಗೆ? ಇದ್ದಕ್ಕಿದ್ದಂತೆ ಈ ದಾಳಿ ನಡೆಸಲು ನಿರ್ಧರಿಸಲಾಯಿತೆ? ಅಥವಾ ಪೂರ್ವಯೋಜನೆಯಂತೆ ಎಲ್ಲವನ್ನೂ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಂಡು, ಮುಟ್ಟಿ ನೋಡುವ ಹಾಗೆ ದಾಳಿ ಮಾಡಲಾಯಿತೆ? ಮತ್ತಿತರ ವಿವರಗಳು ಮುಂದಿವೆ.

ರಕ್ಷಣಾ ಸಚಿವೆಯೊಡನೆ ಡೋವಲ್ ಭೇಟಿ

ರಕ್ಷಣಾ ಸಚಿವೆಯೊಡನೆ ಡೋವಲ್ ಭೇಟಿ

ಈ ದಾಳಿಗೂ ಕೆಲ ದಿನಗಳ ಮುಂಚೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಅವರು, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮೂರೂ ಸೇನಾ ಮುಖ್ಯಸ್ಥರನ್ನು ಭೇಟಿಯಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ತರಬೇತಿ ನೆಲೆಗಳ ಮೇಲೆ ನಡೆಸಲಾಗುತ್ತಿರುವ ದಾಳಿಯ ವಿವರಗಳನ್ನು ನವದೆಹಲಿಯಲ್ಲಿ ನೀಡಿದ್ದಾರೆ. ಈ ದಾಳಿಯ ಹಿಂದಿರುವ ಅಪಾಯ ಮತ್ತು ದಾಳಿಗೆ ಬೇಕಾಗಿರುವ ಯುದ್ಧ ವಿಮಾನಗಳ ವಿವರಗಳನ್ನು ನೀಡಿದ್ದಾರೆ. ಈ ವಿವರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ನೀಡಲಾಗಿದೆ.

ಎಲ್ಲಿ, ಹೇಗೆ, ಯಾವ ನೆಲೆಗಳ ಮೇಲೆ ದಾಳಿ

ಎಲ್ಲಿ, ಹೇಗೆ, ಯಾವ ನೆಲೆಗಳ ಮೇಲೆ ದಾಳಿ

ಬಲ್ಲ ಮೂಲಗಳ ಪ್ರಕಾರ, ಭಾರತೀಯ ವಾಯು ಸೇನೆಯ 12 ಮಿರಾಜ್ 2000 ಯುದ್ಧ ವಿಮಾನಗಳು ದಾಳಿಗೆ ಸಜ್ಜಾಗಿವೆ ಮತ್ತು ಅವನ್ನು ಮೂರು ತಂಡಗಳನ್ನಾಗಿ ವಿಭಾಗಿಸಲಾಗಿದೆ. ಗಡಿ ನಿಯಂತ್ರಣಾ ರೇಖೆಯ ಬಳಿಯಿರುವ ಬಾಲಕೋಟ್, ಮುಜಫರಾಬಾದ್ ಮತ್ತು ಚಾಕೋಟಿಯ ಮೇಲೆ ಯಾರು, ಯಾವ ರೀತಿ ಮತ್ತು ಎಷ್ಟು ಸಮಯಕ್ಕೆ ದಾಳಿ ಮಾಡಬೇಕೆಂದು ನಿರ್ಧಾರವಾಗಿದೆ. ಯೋಜನೆಯ ಪ್ರಕಾರ ಬೆಳಗಿನ ಜಾವ ಸುಮಾರು 3.45ಕ್ಕೆ ಬಾಲಕೋಟ್ ನಲ್ಲಿ ಮೊದಲ ದಾಳಿಯಾಗಿದೆ. ನಂತರ 21 ನಿಮಿಷಗಳಲ್ಲಿ ಮುಜಫರಾಬಾದ್ ಮತ್ತು ಚಾಕೋಟಿಯ ಮೇಲೆ ದಾಳಿಗಳಾಗಿ, ತರಬೇತಿ ನೆಲೆಗಳು ಧ್ವಂಸವಾದ ನಂತರ ಯುದ್ಧ ವಿಮಾನಗಳು ವಾಪಸ್ ಬಂದಿವೆ.

ಮಿರಾಜ್ 2000 ಯುದ್ಧ ವಿಮಾನದ ಬಗ್ಗೆ ಒಂದಿಷ್ಟು ಮಾಹಿತಿ

ಬಾಲಕೋಟ್, ಮುಜಫರಾಬಾದ್, ಚಾಕೋಟಿ

ಬಾಲಕೋಟ್, ಮುಜಫರಾಬಾದ್, ಚಾಕೋಟಿ

ಮೊದಲ ದಾಳಿ ಮುಜಫರಾಬಾದ್ ನಿಂದ 24 ಕಿ.ಮೀ. ದೂರದಲ್ಲಿರುವ ಬಾಲಕೋಟ್ ಎಂಬಲ್ಲಿ ಜರುಗಿದೆ. 3.45ರಿಂದ 3.53ರೊಳಗೆ ಜೈಷ್ ಉಗ್ರ ಸಂಘಟನೆಯ ಕಂಟ್ರೋಲ್ ರೂಮ್, ತರಬೇತಿ ತಾಣಗಳನ್ನು ನಿರ್ನಾಮ ಮಾಡುವುದರ ಜೊತೆಗೆ ಜೈಷ್ ಸಂಘಟನೆಯ ಮುಖ್ಯಸ್ಥರನ್ನು ಕೂಡ ಅಲ್ಲಾಹುವಿನ ಬಳಿಗೆ ಕಳುಹಿಸಲಾಗಿದೆ. ಎರಡನೇ ದಾಳಿ ಮುಜಫರಾಬಾದ್ ನಲ್ಲಿ 3.48ರಿಂದ 3.55ರೊಳಗೆ ನಡೆದಿದೆ. ಮೂರನೇ ದಾಳಿ ನಡೆದಿದ್ದು ಚಾಕೋಟಿಯಲ್ಲಿ. ಇದು ಬೆಳಿಗ್ಗೆ 4.06ರೊಳಗೆ ಸಂಪೂರ್ಣವಾಗಿದೆ. ಜೈಷ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದಿನ್, ಮತ್ತು ಲಷ್ಕರ್-ಇ-ತೈಬಾದ ನೆಲೆಗಳೂ ಇವುಗಳಲ್ಲಿ ಸೇರಿವೆ.

ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು?

ಜೈಷ್, ಲಷ್ಕರ್, ಹಿಜ್ಬುಲ್ ಮೇಲೆ ದಾಳಿ

ಜೈಷ್, ಲಷ್ಕರ್, ಹಿಜ್ಬುಲ್ ಮೇಲೆ ದಾಳಿ

ಈ ದಾಳಿಯಲ್ಲಿ ಸುಮಾರು 1000 ಕೆಜಿ ಲೇಸರ್ ಗೈಡೆಡ್ ಬಾಂಬ್ ಗಳನ್ನು ಬಳಸಲಾಗಿದ್ದು, ಬಾಲಕೋಟ್, ಮುಜಫರಾಬಾದ್, ಚಾಕೋಟಿಯಲ್ಲಿನ ಎಲ್ಲ ಉಗ್ರರ ನೆಲೆಗಳು ನೆಲಸಮವಾಗಿವೆ. ಜೈಷ್-ಎ-ಮೊಹಮ್ಮದ್ ಉಗ್ರ ಸಂಘನೆಗೆ ಸೇರಿದೆ ಅಲ್ಫಾ-3 ಕಂಟ್ರೋಲ್ ರೂಂಗಳು ಸಂಪೂರ್ಣ ಧ್ವಂಸವಾಗಿವೆ. ಇದರಲ್ಲಿ ಉಗ್ರ ಸಂಘಟನೆಗೆ ಸೇರಿದ ಹಿರಿಯ ಕಮಾಂಡರ್ ಗಳು, ಜಿಹಾದಿಗಳು, ತರಬೇತಿದಾರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಭಾರತದ ವಿದೇಶಾಂಗ ಸಚಿವಾಲಯದ ಪ್ರಕಾರ, ಈ ಕ್ಯಾಂಪ್ ಗಳ ನೇತೃತ್ವವನ್ನು ಜೈಷ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನ ಭಾವಮೈದ ಮೌಲಾನಾ ಯುಸೂಫ್ ಅಜರ್ ಅಲಿಯಾಸ್ ಉಸ್ತಾದ್ ಘೌರಿ ಎಂಬಾತ ವಹಿಸಿಕೊಂಡಿದ್ದ.

ಬೆಂಕಿಯೊಂದಿಗೆ ಸರಸವಾಡಬೇಡಿ : ಮೋದಿಗೆ ಮೆಹಬೂಬಾ ಚಾಲೆಂಜ್!

ಜೈಷ್ ದಾಳಿಯನ್ನು ತಡೆಗಟ್ಟಲು ಸೇನೆಯ ಪ್ರತಿದಾಳಿ

ಜೈಷ್ ದಾಳಿಯನ್ನು ತಡೆಗಟ್ಟಲು ಸೇನೆಯ ಪ್ರತಿದಾಳಿ

ಯಾವುದೇ ನಾಗರಿಕರ ಸಾವು ಆಗಬಾರದು ಎಂದು ಗುಡ್ಡಗಾಡಿನ ಪ್ರದೇಶದಲ್ಲಿ ದಟ್ಟ ಅರಣ್ಯದಲ್ಲಿ ಉಗ್ರರು ನಿರ್ಮಿಸಿದ್ದ ಅಡಗುತಾಣ, ತರಬೇತಿ ನೆಲೆಗಳನ್ನು ದಾಳಿಗೆ ಆಯ್ದುಕೊಳ್ಳಲಾಗಿತ್ತು. ಗುಪ್ತಚರ ಇಲಾಖೆಯಿಂದ ಜೈಷ್-ಎ-ಮೊಹಮ್ಮದ್, ಲಷ್ಕರ್-ಇ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದಿನ್ ಉಗ್ರರ ನೆಲೆಗಳ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಿಯೇ ಈ ದಾಳಿಯನ್ನು ಮಾಡಲಾಗಿದೆ. ಇದಲ್ಲದೆ, ಜೈಷ್-ಎ-ಮೊಹಮ್ಮದ್ ಸಂಘಟನೆ ಇನ್ನಷ್ಟು ಭಯೋತ್ಪಾದಕ ದಾಳಿಯನ್ನು ಮಾಡಲು ಸಿದ್ಧತೆ ನಡೆಸಿದೆ ಎಂಬ ಇಂಟೆಲಿಜೆನ್ಸ್ ಮಾಹಿತಿಯನ್ನು ಸಂಗ್ರಹಿಸಿದ ನಂತರ ಪ್ರತಿದಾಳಿಯ ಯೋಜನೆ ರೂಪಿಸಲಾಗಿದೆ. ಇದನ್ನು ತಡೆಗಟ್ಟಲು ಉಗ್ರರ ನೆಲೆಗಳನ್ನು ಧ್ವಂಸ ಮಾಡಲೇಬೇಕಾಗಿತ್ತು ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ.

ಭಾರತೀಯ ಏರ್‌ಸ್ಟ್ರೈಕ್‌ಗೆ ಪಾಕಿಸ್ತಾನ ಹೇಳಿದ್ದೇನು?

ಮೆಹಬೂಬಾ ಮಫ್ತಿ ಏನು ಹೇಳುತ್ತಾರೆ?

ಮೆಹಬೂಬಾ ಮಫ್ತಿ ಏನು ಹೇಳುತ್ತಾರೆ?

ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡುವುದರ ಮೂಲಕ, ಭಾರತದ ಐಕ್ಯತೆಯ ಮತ್ತು ಸಾರ್ವಭೌಮತ್ವವನ್ನು ಪ್ರಶ್ನಿಸಿದ ಮೆಹಬೂಬಾ ಮಫ್ತಿಯಂಥವರಿದೆ ಭಾರತ ಸರಕಾರ ತಕ್ಕ ಉತ್ತರ ನೀಡಿದೆ. ಭಾರತೀಯ ಸೇನೆ ಕಾಶ್ಮೀರದ ಯುವಕರ ಮೇಲೆ ಹಲ್ಲೆ ಮಾಡುತ್ತಿದ್ದರಿಂದಲೇ ಉಗ್ರರು ಸಿಆರ್ಪಿಎಫ್ ಮೇಲೆ ದಾಳಿ ಮಾಡಿದ್ದು ಎಂದು ಹೇಳುತ್ತಿದ್ದ ಮೆಹಬೂಬಾ ಈ ವಾಯುಸೇನಾ ದಾಳಿಯ ಬಗ್ಗೆ ಏನು ಹೇಳುತ್ತಾರೆ?

English summary
How Indian air force conducted pre-dawn strike on terror groups. After collecting information from intelligence that Jaish was preparing to strike again on India, defence ministry in consultation with Ajit Doval and 3 service chiefs, decided to attack terror groups near LoC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X