India
 • search
 • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಜ್ಬುಲ್‌ ಮುಜಾಯಿದ್ದೀನ್‌ ಭಯೋತ್ಪಾದಕನ ಎನ್‌ಕೌಂಟರ್‌ನಲ್ಲಿ ಹತ

|
Google Oneindia Kannada News

ಶ್ರೀನಗರ, ಜೂ. 11: ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್- ಮುಜಾಹಿದ್ದೀನ್ ಸಂಘಟನೆಯ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ಜಮ್ಮು ಕಾಶ್ಮೀರದ ಪೊಲೀಸರು ಶನಿವಾರ ತಿಳಿಸಿದ್ದಾರೆ.

ನಿಷೇಧಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್- ಮುಜಾಹಿದ್ದೀನ್‌ನ ಒಬ್ಬ ಭಯೋತ್ಪಾದಕ ಹತ್ಯೆಯಾಗಿದೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ. ಹೆಚ್ಚಿನ ವಿವರಗಳನ್ನು ತಿಳಿಸಲಾಗುವುದು ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ. ಶನಿವಾರದ ಮುಂಜಾನೆ ಖಂಡಿಪೋರಾ ಪ್ರದೇಶದಲ್ಲಿ ಎನ್‌ಕೌಂಟರ್ ನಡೆಯಿತು ಎಂದು ಪೊಲೀಸರು ತಿಳಿಸಿದರು.

ಇಬ್ಬರು ಭಯೋತ್ಪಾದಕ ಬಂಧನ:

ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯು ಬಾರಾಮುಲ್ಲಾದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಜೊತೆ ನಂಟು ಹೊಂದಿರುವ ಇಬ್ಬರು ಸಕ್ರಿಯ ಭಯೋತ್ಪಾದಕರನ್ನು ಬಂಧಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಿರ್ದಿಷ್ಟ ಮಾಹಿತಿಯ ಸಿಕ್ಕಿದ ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಂಧಿಸಲ್ಪಟ್ಟವರು ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿಯ ಇಬ್ಬರು ಸಕ್ರಿಯ ಭಯೋತ್ಪಾದಕರನ್ನು ಅಬ್ದುಲ್ ರೆಹಮಾನ್ ಮೀರ್ ಅವರ ಮಗ ಇರ್ಷಾದ್ ಅಹ್ಮದ್ ಮಿರ್ ಮತ್ತು ಬಶೀರ್ ಅಹ್ಮದ್ ಅವರ ಮಗ ಜಾಹಿದ್ ಬಶೀರ್ ಎಂದು ಗುರುತಿಸಲಾಗಿದೆ. ಇಬ್ಬರೂ ನೆಹಲ್ಪೋರಾ ಪಟ್ಟಣ ಪ್ರದೇಶದ ನಿವಾಸಿಗಳು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Hizbul Mujahideen terrorist killed in encounter
   ಗಾಬರಿಯಿಂದ ಸಿದ್ದು ಹೊರಟಿದ್ದು ಎಲ್ಲಿಗೆ?? | Oneindia Kannada

   ಬಂಧಿತರಿಂದ ಎರಡು ಚೈನೀಸ್ ಪಿಸ್ತೂಲ್‌ಗಳು, 18 ಸುತ್ತಿನ ಕಾರ್ಟ್ರಿಡ್ಜ್‌ಗಳು ಮತ್ತು 2 ಮ್ಯಾಗಜೀನ್‌ಗಳು ಸೇರಿದಂತೆ ದೋಷಾರೋಪಣೆಯ ಸಾಮಗ್ರಿಗಳು, ಮದ್ದುಗುಂಡುಗಳ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪೊಲೀಸರು ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ವಿಷಯದ ಕುರಿತು ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

   English summary
   Jammu and Kashmir police said on Saturday that a terrorist of the Hizbul-Mujahideen organization was killed in a confrontation with security forces.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X