ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆ: ಭೂಕುಸಿತ, ಪ್ರವಾಹದಿಂದ ನಲುಗಿದ ಕಣಿವೆ ರಾಜ್ಯ

|
Google Oneindia Kannada News

ಶ್ರೀನಗರ, ಜೂನ್ 22: ಭಾರಿ ಮಳೆಯಿಂದ ಉಂಟಾದ ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ಜಮ್ಮು ಮತ್ತು ಕಾಶ್ಮೀರ ರಾಜ್ಯ ನಲುಗಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ಭೂಕುಸಿತದಿಂದಾಗಿ ನೂರಾರು ವಾಹನಗಳು ಜಖಂಗೊಂಡಿವೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಅಧಿಕಾರಿಗಳು ದೋಡಾ, ಕಿಶ್ತ್ವಾರ್ ಮತ್ತು ರಾಂಬನ್ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.

270 ಕಿಲೋಮೀಟರ್ ಉದ್ದದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯು ಸತತ ಎರಡನೇ ದಿನವೂ ರಾಂಬನ್-ಉದಂಪುರ್ ಸೆಕ್ಟರ್‌ನಲ್ಲಿ 30 ಕ್ಕೂ ಹೆಚ್ಚು ಭೂಕುಸಿತಗಳಾಗಿದೆ. ಮಣ್ಣು ಕುಸಿತದಿದ ರಸ್ತೆಗಳಲ್ಲಿ ಓಡಾಟವನ್ನು ನಿರ್ಬಂಧಿಸಲಾಗಿದೆ. ಏಕಾಏಕಿ ಮಣ್ಣು ಕುಸಿತದಿಂದ ನೂರಾರು ವಾಹನಗಳು ಜಖಂಗೊಂಡಿವೆ.

ಅಸ್ಸಾಂ ಪ್ರವಾಹ: 48 ಲಕ್ಷ ಜನ, 33 ಲಕ್ಷ ಪ್ರಾಣಿಗಳ ಮೇಲೆ ಪರಿಣಾಮಅಸ್ಸಾಂ ಪ್ರವಾಹ: 48 ಲಕ್ಷ ಜನ, 33 ಲಕ್ಷ ಪ್ರಾಣಿಗಳ ಮೇಲೆ ಪರಿಣಾಮ

ಭಾರೀ ಮಳೆಯ ನಡುವೆ, ರಾಂಬನ್ ಮತ್ತು ಕಿಶ್ತ್ವಾರ್ ಜಿಲ್ಲೆಗಳಲ್ಲಿ ಅಧಿಕಾರಿಗಳು ಖಾಸಗಿ ಶಾಲೆಗಳು ಸೇರಿದಂತೆ ಹೈಯರ್ ಸೆಕೆಂಡರಿ ಹಂತದವರೆಗಿನ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ದಿನದ ಮಟ್ಟಿಗೆ ಮುಚ್ಚಿದ್ದಾರೆ. "ಹಲವು ಸ್ಥಳಗಳಲ್ಲಿ ಭಾರೀ ಮಳೆ ಮತ್ತು ನಾಲಾಗಳು ಮತ್ತು ಮಣ್ಣಿನ ಕುಸಿತದ ಹಿನ್ನೆಲೆಯಲ್ಲಿ ಹೈಯರ್ ಸೆಕೆಂಡರಿ ಶಾಲೆಗಳು ಸೇರಿದಂತೆ ರಾಂಬನ್ ಜಿಲ್ಲೆಯಾದ್ಯಂತ ಎಲ್ಲಾ ಶಾಲೆಗಳನ್ನು ಇಂದು ಮುಚ್ಚಲಾಗುವುದು" ಎಂದು ಡೆಪ್ಯೂಟಿ ಕಮಿಷನರ್ ರಾಂಬನ್ ಮುಸ್ಸರತ್ ಇಸ್ಲಾಂ ಟ್ವೀಟ್ ಮಾಡಿದ್ದಾರೆ.

ಸಲಾಲ್ ಅಣೆಕಟ್ಟಿನಿಂದ ಭಾರಿ ಪ್ರಮಾಣದ ನೀರು ಹೊರಕ್ಕೆ

ಈ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಚೆನಾಬ್ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಒಳಹರಿವು ಇರುವುದರಿಂದ, ಸಲಾಲ್ ಅಣೆಕಟ್ಟು ಅಧಿಕಾರಿಗಳು ಅಪಾರ ಪ್ರಮಾಣದ ನೀರನ್ನು ಬಿಡುಗಡೆ ಮಾಡಿದ್ದಾರೆ. ಅಧಿಕಾರಿಗಳು ರಿಯಾಸಿ ಜಿಲ್ಲೆಯಲ್ಲಿ ಹೊರಹೊಮ್ಮುವ ಜಲಾಶಯದಿಂದ ನೀರು ಹೊರಬಿಟ್ಟಿದ್ದಾರೆ.

ಸಲಾಲ್ ಅಣೆಕಟ್ಟಿನಿಂದ ನದಿಯ ನೀರಿನ ಭಾರಿ ಹೊರಹರಿವಿನ ದೃಶ್ಯಗಳನ್ನು ಎಎನ್‌ಐ ಟ್ವೀಟ್ ಮಾಡಿದೆ. ಇದಲ್ಲದೆ, ಉಧಾಂಪುರ ಜಿಲ್ಲೆಯ ಟೋಲ್ಡಿ ನುಲ್ಲಾ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ತಾವಿ ನದಿ ಕೂಡ ಉಕ್ಕಿ ಹರಿಯುತ್ತಿದೆ.

ವೈರಲ್‌ ವಿಡಿಯೋ; ಅಸ್ಸಾಂ ಪ್ರವಾಹ, ಮಗು ರಕ್ಷಿಸಿ ಬುಟ್ಟಿಯಲ್ಲಿ ಸಾಗಣೆವೈರಲ್‌ ವಿಡಿಯೋ; ಅಸ್ಸಾಂ ಪ್ರವಾಹ, ಮಗು ರಕ್ಷಿಸಿ ಬುಟ್ಟಿಯಲ್ಲಿ ಸಾಗಣೆ

ದೋಡಾ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ

ದೋಡಾ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ

ಜಮ್ಮು ಪ್ರದೇಶದ ಅವಳಿ ಜಿಲ್ಲೆಗಳಾದ ಪೂಂಚ್ ಮತ್ತು ರಜೌರಿಯನ್ನು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಗೆ ಸಂಪರ್ಕಿಸುವ ಪರ್ಯಾಯ ಕೊಂಡಿಯಾಗಿರುವ ಮೊಘಲ್ ರಸ್ತೆಯಲ್ಲಿನ ಸಂಚಾರವನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಮಾರ್ಗದಲ್ಲಿ ಭೂಕುಸಿತದ ಪರಿಣಾಮವಾಗಿ ಸಂಚಾರ ನಿರ್ಬಂಧಿಸಲಾಗಿದೆ.

ಪರ್ವತಮ ಪ್ರದೇಶವಾದ ದೋಡಾ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. "ನಾವು ಚೆನಾಬ್ ನದಿ ಮತ್ತು ಅದರ ಉಪನದಿಗಳಿಗೆ ಸಮೀಪವಿರುವ ಪ್ರದೇಶಗಳಲ್ಲಿ ಮತ್ತು ರಾಂಬನ್ ಮತ್ತು ದೋಡಾ ಜಿಲ್ಲೆಗಳ ಇಳಿಜಾರು ಮತ್ತು ಸ್ಲೈಡ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ಘೋಷಿಸಲು ಒತ್ತಾಯಿಸಲ್ಪಟ್ಟಿದ್ದೇವೆ" ಎಂದು ಸುದ್ದಿ ಸಂಸ್ಥೆಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಳೆಯಿಂದ ಹಲವೆಡೆ ಮನೆ ಕುಸಿತ

ಮಳೆಯಿಂದ ಹಲವೆಡೆ ಮನೆ ಕುಸಿತ

ರಾಮಬಾಣದಲ್ಲಿ ಮನೆ ಕುಸಿದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಆದಾಗ್ಯೂ, ರಿಯಾಸಿ ಜಿಲ್ಲೆಯ ಆನ್ಸ್ ನದಿಯಲ್ಲಿ ಹಠಾತ್ ಪ್ರವಾಹದಲ್ಲಿ ಐದು ಜನರು ಸಿಲುಕಿಕೊಂಡರು, ಪೊಲೀಸರು ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎತ್ತರದ ಪ್ರದೇಶಗಳಿಂದ ಹಿಮಪಾತವು ಸಹ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹ ಪರಿಸ್ಥಿತಿ ತೀವ್ರವಾಗುತ್ತಿದ್ದು, ಜನರು ಮನೆಯೊಳಗೆ ಇರುವಂತೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸೂಚನೆ ನೀಡಲಾಗಿದೆ. ಅಧಿಕಾರಿಗಳ ಪ್ರಕಾರ, ಜಮ್ಮು ಪ್ರದೇಶದ ಬಯಲು ಪ್ರದೇಶದಲ್ಲಿ ಭಾರಿ ಮಳೆ ಮುಂದುವರಿದಿದ್ದು, ತಾಪಮಾನ ಕಡಿಮೆಯಾಗಿದೆ.

ಇನ್ನೂ ಭಾರಿ ಮಳೆಯಾಗುವ ಸಾಧ್ಯತೆ

ಇನ್ನೂ ಭಾರಿ ಮಳೆಯಾಗುವ ಸಾಧ್ಯತೆ

ಕಿಶ್ತ್ವಾರ್ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. "ಕಿಶ್ತ್ವಾರ್ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸಹಾಯ ಕೇಂದ್ರವನ್ನು ಸ್ಥಾಪಿಸಿದ್ದಾರೆ ಮತ್ತು ಜನರು ಮನೆಯಲ್ಲಿಯೇ ಇರಬೇಕು ಮತ್ತು ಅನಗತ್ಯವಾಗಿ ತಮ್ಮ ಮನೆಯಿಂದ ಹೊರಗೆ ಹೋಗದಂತೆ ಸೂಚಿಸಲಾಗಿದೆ" ಎಂದು ಪೊಲೀಸ್ ಇಲಾಖೆ ಹೇಳಿದೆ.

"ಸಾರ್ವಜನಿಕರು ಹೊರಗೆ ಹೋಗದಂತೆ ಮತ್ತು ರಸ್ತೆಯ ಮೂಲಕ ಪ್ರಯಾಣ ಮಾಡುವುದನ್ನು ತಪ್ಪಿಸುವಂತೆ ಸೂಚಿಸಲಾಗಿದೆ. ಇಳಿಜಾರು ಪ್ರದೇಶಗಳಲ್ಲಿ ವಾಸಿಸುವ ಎಲ್ಲಾ ಜನರು ಜಾಗರೂಕರಾಗಿರಲು ಮತ್ತು ಯಾವುದೇ ಅಪಘಾತ, ಅವಘಡ ಸಂಭವಿಸಿದರೆ ಸ್ಥಳೀಯ ಆಡಳಿತಕ್ಕೆ ವರದಿ ಮಾಡಲು ಸೂಚಿಸಲಾಗಿದೆ" ಎಂದು ದೋಡಾ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

English summary
As rainfall continued in the Jammu region and there was heavy inflow of water in Chenab river. heavy rains causes for Jammu and Kashmir was hit by flash floods and landslides
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X