ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತ್ಯೇಕತಾವಾದಿ ನಾಯಕರ ಭದ್ರತೆಗೆ ಕೋಟಿ ಕೋಟಿ ಖರ್ಚು

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

Pulwama : ಪ್ರತ್ಯೇಕತಾವಾದಿಗಳಿಗೆ ನೀಡಲಾಗಿದ್ದ ಭದ್ರತೆಯನ್ನ ವಾಪಸ್ ಪಡೆದ ರಾಜ್ಯ ಸರ್ಕಾರ | Oneindia Kannada

ಶ್ರೀನಗರ, ಫೆಬ್ರವರಿ 18 : ಜಮ್ಮು ಮತ್ತು ಕಾಶ್ಮೀರದ ಐವರು ಪ್ರತ್ಯೇಕತಾವಾದಿ ನಾಯಕರಿಗೆ ನೀಡಲಾಗಿದ್ದ ಭದ್ರತೆಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಬಳಿಕ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಹುರಿಯತ್ ಮುಖಂಡರಾದ ಮೀರ್‌ವೈಜ್‌ ಉಮರ್ ಫಾರೂಕ್, ಪ್ರೊ. ಅಬ್ದುಲ್ ಗನಿ ಭಟ್, ಬಿಲಾಲ್ ಲೋನ್, ಜೆಕೆಎಲ್‌ಎಫ್ ನಾಯಕ ಹಾಶಿಮ್ ಖುರೇಷಿ ಮತ್ತು ಶಬೀರ್ ಶಾ ಅವರಿಗೆ ನೀಡಲಾಗಿದ್ದ ಭದ್ರತಾ ಸಿಬ್ಬಂದಿ ಮತ್ತು ವಾಹನಗಳನ್ನು ತಕ್ಷಣದಿಂದಲೇ ವಾಪಸ್ ಪಡೆಯಲಾಗಿದೆ.

'ಯೋಧರ ದೇಹದ ಭಾಗಗಳು 600ಮೀ ದೂರ ಚಿಮ್ಮಿದ್ದನ್ನು ಕಣ್ಣಾರೆ ಕಂಡೆವು!''ಯೋಧರ ದೇಹದ ಭಾಗಗಳು 600ಮೀ ದೂರ ಚಿಮ್ಮಿದ್ದನ್ನು ಕಣ್ಣಾರೆ ಕಂಡೆವು!'

ಸರ್ಕಾರದ ಮಾಹಿತಿಗಳ ಪ್ರಕಾರ ಪ್ರತ್ಯೇಕತಾವಾದಿ ನಾಯಕರಿಗೆ ನೀಡಲಾಗಿದ್ದ ಭದ್ರತೆಗಾಗಿ ಸರ್ಕಾರ 10.88 ಕೋಟಿ ರೂ.ಗಳನ್ನು ಖರ್ಚು ಮಾಡಿತ್ತು. ನಾಯಕರಿಗೆ ಭದ್ರತೆ ನೀಡುತ್ತಿದ್ದ ಪೊಲೀಸರ ವೇತನಕ್ಕಾಗಿ ಸರ್ಕಾರ ಇಷ್ಟೊಂದು ವೆಚ್ಚ ಮಾಡುತ್ತಿತ್ತು.

ಭಾರತದಿಂದ ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ಪಾಕಿಸ್ತಾನಭಾರತದಿಂದ ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ಪಾಕಿಸ್ತಾನ

Govt has saved crores of Rupees in withdrawing security for Kashmir separatists

49.7 ಲಕ್ಷ ರೂ.ಗಳನ್ನು ನಾಯಕರಿಗೆ ನೀಡುತ್ತಿದ್ದ ಭದ್ರತೆಯ ವಾಹನಗಳ ಇಂಧನ, ಎಸ್ಕಾರ್ಟ್ ವಾಹನಳ ಇಂಧನಕ್ಕಾಗಿ ಖರ್ಚು ಮಾಡಲಾಗುತ್ತಿತ್ತು. 2017-18ನೇ ಸಾಲಿನಲ್ಲಿ 19.51 ಲಕ್ಷ ರೂ.ಗಳನ್ನು ಮೀರ್‌ವೈಜ್‌ ಉಮರ್ ಫಾರೂಕ್‌ಗೆ ಭದ್ರತೆ ನೀಡುತ್ತಿದ್ದ ಸಿಬ್ಬಂದಿ ವೇತನಕ್ಕಾಗಿ ವೆಚ್ಚ ಮಾಡಲಾಗಿದೆ.

Exclusive : ಪುಲ್ವಾಮಾದ ಸದ್ಯದ ಸ್ಥಿತಿಯ ಬಗ್ಗೆ ರವಿ ಬೆಳಗೆರೆ ಸಂದರ್ಶನExclusive : ಪುಲ್ವಾಮಾದ ಸದ್ಯದ ಸ್ಥಿತಿಯ ಬಗ್ಗೆ ರವಿ ಬೆಳಗೆರೆ ಸಂದರ್ಶನ

2008-09ರಲ್ಲಿ 1.27 ಕೋಟಿ ವೇತನಕ್ಕಾಗಿ ವೆಚ್ಚ ಮಾಡಲಾಗಿದೆ. 5.06 ಕೋಟಿ ರೂ.ಗಳನ್ನು ಕಳೆದ 10 ವರ್ಷಗಳಲ್ಲಿ ಖರ್ಚು ಮಾಡಲಾಗಿದೆ. ಹುರಿಯತ್ ಮುಖಂಡರಾದ ಮೀರ್‌ವೈಜ್‌ ಉಮರ್ ಫಾರೂಕ್ ಮಾಧ್ಯಮ ಕಾರ್ಯದರ್ಶಿ ಎನ್‌ಐಎನಿಂದ ಬಂಧನವಾಗುವ ತನಕ ಆತನಿಗೂ ಸರ್ಕಾರ ಭದ್ರತೆಯನ್ನು ನೀಡಿದೆ.

ಹುರಿಯತ್ ಮುಖಂಡರಾದ ಮೀರ್‌ವೈಜ್‌ ಉಮರ್ ಫಾರೂಕ್‌ಗಾಗಿಯೇ ಸರ್ಕಾರ ಹೆಚ್ಚು ವೆಚ್ಚ ಮಾಡಿದೆ. ಶ್ರೀನಗರದಲ್ಲಿರುವ ಮೀರ್‌ವೈಜ್ ನಿವಾಸಕ್ಕೆ 10 ಪೊಲೀಸರು ಸದಾ ಕಾವಲಿನಲ್ಲಿ ಇರುತ್ತಿದ್ದರು. ಇತನ ಮಾಧ್ಯಮ ಸಲಹೆಗಾರ 2017ರಲ್ಲಿ ಬಂಧನವಾದ ಬಳಿಕ ಆತನಿಗೆ ನೀಡುತ್ತಿದ್ದ ಭದ್ರತೆ ವಾಪಸ್ ಪಡೆಯಲಾಗಿತ್ತು.

English summary
In a major decision the government scrapped the security provided to separatists in Jammu and Kashmir. The data available suggested that Rs 10.88 crore was spent on the security of separatist leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X