ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ವಿಧಾನಸಭೆ ವಿಸರ್ಜನೆ: ಪಿಡಿಪಿ, ಕಾಂಗ್ರೆಸ್‌, ಎನ್‌ಸಿಗೆ ಮುಖಭಂಗ

|
Google Oneindia Kannada News

ಶ್ರೀನಗರ, ನವೆಂಬರ್ 21: ಬಿಜೆಪಿ ಬೆಂಬಲ ಹಿಂದಕ್ಕೆ ಪಡೆದುಕೊಂಡು ಸರ್ಕಾರ ಪತನಗೊಂಡ ಹಲವು ತಿಂಗಳ ಬಳಿಕ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿದ್ದ ಜಮ್ಮು ಮತ್ತು ಕಾಶ್ಮೀರದ ಪಿಡಿಪಿ, ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳಿಗೆ ತೀವ್ರ ಮುಖಭಂಗ ಉಂಟಾಗಿದೆ.

ಮಹಾಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿದ್ದ ಪಕ್ಷಗಳಿಗೆ ಅಧಿಕಾರಕ್ಕೆ ಬರುವ ಆಸೆ ನುಚ್ಚು ನೂರಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಗೆ ಬಿಗ್ ಶಾಕ್! ವಿರೋಧಿಗಳಿಂದ ಮೈತ್ರಿ?ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಗೆ ಬಿಗ್ ಶಾಕ್! ವಿರೋಧಿಗಳಿಂದ ಮೈತ್ರಿ?

ಮೂರೂ ಪಕ್ಷಗಳು ಸರ್ಕಾರ ರಚನೆಯ ಕಸರತ್ತು ನಡೆಸುವ ವೇಳೆಯೇ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜನೆಗೊಳಿಸಿ ಆದೇಶ ಹೊರಡಿಸಿದ್ದಾರೆ.

Governor dissolves J&K assembly after Mehbooba stakes claim to form govt

ಇದರಿಂದ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದ ಪಿಡಿಪಿಯ ಆಸೆಗೆ ತಣ್ಣೀರೆರಚಿದಂತಾಗಿದೆ. ಬುಧವಾರ ನಡೆದ ನಾಟಕೀಯ ಬೆಳವಣಿಗೆಗಳು ಕುತೂಹಲ ಮೂಡಿಸಿದ್ದವು.

ಆದರೆ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಬೆಂಬಲದ ನೆರವಿನೊಂದಿಗೆ ಸರ್ಕಾರ ರಚಿಸುವುದಾಗಿ ಹಕ್ಕು ಮಂಡಿಸಲು ಮುಂದಾಗುವುದಾಗಿ ಪತ್ರ ಬಹಿರಂಗಪಡಿಸಿದ ಕೆಲವೇ ಸಮಯದಲ್ಲಿ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ವಿಧಾನಸಭೆ ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.

ರಾಜಭವನದಿಂದ ಅಧಿಕೃತ ಆದೇಶ ಹೊರಬರುವ ಕೆಲವೇ ನಿಮಿಷಗಳ ಮೊದಲು ರಾಜ್ಯದಲ್ಲಿ ಸರ್ಕಾರ ರಚಿಸುವ ಸಲುವಾಗಿ ರಾಜ್ಯಪಾಲರ ಭೇಟಿಗೆ ಸಮಯ ನೀಡುವಂತೆ ಕೋರುವುದಾಗಿ ಮೆಹಬೂಬಾ ಮುಫ್ತಿ ಪತ್ರವನ್ನು ಟ್ವೀಟ್ ಮಾಡಿದ್ದರು.

ಪಿಡಿಪಿಯಿಂದ ಬಿಜೆಪಿ ಬೆಂಬಲ ವಾಪಸ್: ಅಸಲಿ ಕಾರಣವೇನು?ಪಿಡಿಪಿಯಿಂದ ಬಿಜೆಪಿ ಬೆಂಬಲ ವಾಪಸ್: ಅಸಲಿ ಕಾರಣವೇನು?

89 ಸೀಟುಗಳ ವಿಧಾನಸಭೆಯಲ್ಲಿ ಬಹುಮತಕ್ಕೆ 44 ಸೀಟುಗಳ ಅಗತ್ಯವಿದೆ. ಮೂರೂ ಪಕ್ಷಗಳಿಂದ ಒಟ್ಟು 56 ಸೀಟುಗಳು ಲಭ್ಯವಾಗಲಿದೆ. ಇದರಿಂದ ಸರ್ಕಾರ ರಚಿಸಬಹುದು ಎಂದು ಮುಫ್ತಿ ಬಯಸಿದ್ದರು. ಪಿಡಿಪಿ 28 ಸೀಟುಗಳನ್ನು ಹೊಂದಿದ್ದರೆ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಕ್ರಮವಾಗಿ 15 ಮತ್ತು 12 ಸೀಟುಗಳ ಬಲ ಹೊಂದಿವೆ.

ಇದಕ್ಕೂ ಮುನ್ನ ಪೀಪಲ್ಸ್ ಕಾನ್ಫರೆನ್ಸ್ ಪಕ್ಷದ ಸಜ್ಜದ್ ಲೋನ್, ಬಿಜೆಪಿ ಮತ್ತು ಇತರೆ 18 ಚುನಾಯಿತ ಸದಸ್ಯರ ಬೆಂಬಲದಿಂದ ಸರ್ಕಾರ ರಚಿಸುವುದಾಗಿ ಹೇಳಿಕೊಂಡಿದ್ದರು. ಬಿಜೆಪಿ 25 ಶಾಸಕರನ್ನು ಹೊಂದಿದ್ದರೆ, ಪೀಪಲ್ಸ್ ಕಾನ್ಫರೆನ್ಸ್ ಇಬ್ಬರು ಶಾಸಕರನ್ನು ಹೊಂದಿದೆ.

English summary
Jammu and Kashmir Governor Satya Pal Malik on Wednesday dissolved the Assembly even as former chief minister Mehbooba Mufti staked a claim to form the government with the support of the National Conference and the Congress party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X