ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಏರ್ ಸ್ಟ್ರೈಕ್ ನಿಂದ ಉಗ್ರರು ಹೆದರಿದ್ದಾರೆ', ಸಾಕ್ಷ್ಯ ನೀಡಿದ ಸರ್ಕಾರ

|
Google Oneindia Kannada News

ಶ್ರೀನಗರ, ಜುಲೈ 09: ಪಾಕಿಸ್ತಾನದ ಭಯೋತ್ಪಾದಕ ನೆಲೆಯ ಮೇಲೆ ಭಾರತೀಯ ವಾಯು ಸೇನೆ ಏರ್ ಸ್ಟ್ರೈಕ್ ನಡೆಸಿದ ನಂತರ ಭಯೋತ್ಪಾದಕರು ಹೆದರಿದ್ದಾರೆ ಎಂಬುದನ್ನು ಕೇಂದ್ರ ಸರ್ಕಾರ ಇಂದು ಸಂಸತ್ತಿನ ಮುಂದೆ ಸಾಕ್ಷ್ಯ ನೀಡಿದೆ.

ಏರ್ ಸ್ಟ್ರೈಕ್ ನಂತರ ಶೇ.43 ಪ್ರತಿಶತ ಅಕ್ರಮ ಒಳನುಸುಳುವಿಕೆ ಕಡಿಮೆಯಾಗಿದೆ ಎಂದು ಅಂಕಿಸಂಖ್ಯೆಯನ್ನು ಸರ್ಕಾರ ಸಂಸತ್ತಿನ ಮುಂದಿಟ್ಟಿದೆ.

ಪಾಕಿಸ್ತಾನವನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡ ಅಮೆರಿಕಪಾಕಿಸ್ತಾನವನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡ ಅಮೆರಿಕ

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಈ ಬಗ್ಗೆ ಮಾತನಾಡಿ, "ಗಡಿದಾಟಿ ಒಳನುಸುಳುವ ಚಟುವಟಿಕೆಯ ಬಗ್ಗೆ ಸರ್ಕಾರ ಶೂನ್ಯ ಸಂವೇದನೆ ಹೊಂದಿದ್ದು, ಉಗ್ರರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. 2018 ಕ್ಕೆ ಹೋಲಿಸಿದರೆ ಈ ವರ್ಶಶದ ಆರಂಭದಿಂದಲೂ ಒಳನುಸುಳುವಿಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ನಮ್ಮ ಸೇನೆಯ ನಿರಂತರ ಪರಿಶ್ರಮವೇ ಇದಕ್ಕೆ ಕಾರಣ. ಈಗಾಗಲೇ ಅಕ್ರಮ ಒಳನುಸುಳುವಿಕೆಯನ್ನು ತಡೆಯಲು ಸರ್ಕಾರ ತೆಗೆದುಕೊಂಡ ಎಲ್ಲಾ ಕ್ರಮಗಳೂ ಯಶಸ್ವಿಯಾಗಿವೆ ಎಂದು ಅವರು ಹೇಳಿದರು.

Government says, Balakot airstrikes led to 43% reduction in infiltration from Pakistan

ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರಿದ್ದ ವಾಹನದ ಮೇಲೆ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ 40 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಹೊಣೆಯನ್ನು ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು.

ಉಗ್ರನ ಜೇಬಿನಲ್ಲಿ ವಾಯುನೆಲೆಯ ಮ್ಯಾಪ್: ಮೇ 23ರಂದು ತಪ್ಪಿದ ಭಾರೀ ದುರಂತಉಗ್ರನ ಜೇಬಿನಲ್ಲಿ ವಾಯುನೆಲೆಯ ಮ್ಯಾಪ್: ಮೇ 23ರಂದು ತಪ್ಪಿದ ಭಾರೀ ದುರಂತ

ಈ ಘಟನೆಯ ನಂತರ ಫೆಬ್ರವರಿ 26 ರಂದು ಭಾರತ ಪಾಕಿಸ್ತಾನದ ಬಾಲಕೋಟ್ ನಲ್ಲಿರುವ ಉಗ್ರನೆಲೆಯ ಮೇಲೆ ಏರ್ ಸ್ಟ್ರೈಕ್ ನಡೆಸಿತ್ತು.

English summary
The central government informed Parliament on Tuesday that airstrikes led to 43% reduction in infiltration from Pakistan,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X