ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವಿಂದರ್ ಸಿಂಗ್ ಬಳಿ ಜಪ್ತಿಯಾಗಿದ್ದು ಟೂತ್ ಬ್ರಷ್, ಅತ್ತರ್, ಎಕೆ47..

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜನವರಿ 22: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರಿಗೆ ನೆರವಾದ ಆರೋಪ ಹೊತ್ತಿರುವ ಮಾಜಿ ಡಿಎಸ್ಪಿ ದೇವಿಂದರ್ ಸಿಂಗ್ ಬಳಿ ಜಪ್ತಿಮಾಡಲಾದ ಸಾಮಾಗ್ರಿಗಳ ಪಟ್ಟಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕಟಿಸಿದ್ದಾರೆ.

ಉಗ್ರರ ಜತೆ ಸಿಕ್ಕಿಬಿದ್ದ ದೇವಿಂದರ್ ಸಿಂಗ್ ಯಾರು? ಅಫ್ಜಲ್ ಗುರು ಹೇಳಿದ್ದ ಸ್ಫೋಟಕ ಸಂಗತಿಉಗ್ರರ ಜತೆ ಸಿಕ್ಕಿಬಿದ್ದ ದೇವಿಂದರ್ ಸಿಂಗ್ ಯಾರು? ಅಫ್ಜಲ್ ಗುರು ಹೇಳಿದ್ದ ಸ್ಫೋಟಕ ಸಂಗತಿ

ಸದ್ಯ ಈ ಪ್ರಕರಣ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ತನಿಖೆಗೊಳಪಟ್ಟಿದೆ. ಜನವರಿ 11ರಂದು ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರ ಜೊತೆ ಡಿಎಸ್ಪಿ ದೇವಿಂದರ್ ಸಿಂಗ್ ಇದ್ದಾಗ ಸಿಕ್ಕಿ ಬಿದ್ದಿದ್ದರು. ಉಗ್ರರಿಗೆ ನೆರವಾದ ಕಾರಣಕ್ಕೆ ಬಂಧಿತರಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಫ್ಐಆರ್ ಹಾಕಿದ್ದಾರೆ. ನಂತರ ಸಿಂಗ್ ಅವರ ಮನೆ, ಕಚೇರಿ ಪರಿಶೀಲಿಸಿ, 32 ಸಾಮಾಗ್ರಿಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿಯಾದ ಸಾಮಾಗ್ರಿಗಳ ಪೈಕಿ ಅತ್ತರ್ ಶೀಶೆಯಿಂದ ಹಿಡಿದು ಎಕೆ 47 ರೈಫಲ್ ತನಕ ಇದೆ.

From toothbrush to attar bottle to Ak-47: Here is what cops recovered from Davinder Singh

* ಎಕೆ 47 ರೈಫಲ್ ಯುಬಿಜಿಎಲ್ ಲಾಂಚರ್
* 6 ಮ್ಯಾಗಜೀನ್ (ಎಕೆ 47 ರೈಫಲ್ ಗೆ ಸೇರಿದ್ದು)
* 174 ರೌಂಡ್ಸ್ ಗುಂಡು
* ಚೈನೀಸ್ ಪಿಸ್ತೂಲು
* ಸ್ಕ್ರ್ಯೂ ಡ್ರೈವರ್
* ಶೇವಿಂಗ್ ಬ್ಲೇಡ್
* 3 ಮ್ಯಾಗಜೀನ್ (ಪಿಸ್ತೂಲ್)
* 7 ಸಜೀವ ಪಿಸ್ತೂಲ್ ರೌಂಡ್
* 10 ಚೈನೀಸ್ ಪಿಸ್ತೂಲ್ ರೌಂಡ್
* ಯುಎಸ್ ನಿರ್ಮಿತ ಪಿಸ್ತೂಲ್ ಒಂದು ಮ್ಯಾಗಜೀನ್
* 4 ಯುಬಿಜಿಎಲ್ ಗ್ರೇನೇಡ್
* ಲೈವ್ ಚೈನೀಸ್ ಗ್ರೇನೆಡ್
* ಟಿಯರ್ ಗ್ಯಾಸ್ ಗ್ರೆನೇಡ್
* 2 ಪೌಂಚ್
* ಪವರ್ ಬ್ಯಾಂಕ್
* ಟೇಪ್ ರೋಲ್ಸ್
* ಬ್ಯಾಂಡ್ ಏಡ್ಸ್
* ಸನ್ ಸ್ಕ್ರೀನ್
* ಪೆನ್
* ಸಿಗರೇಟ್ ಲೈಟರ್
* ಟೇಪ್ ರೋಲ್ಸ್ ಸಣ್ಣದ್ದು
* ಅತ್ತರ್ ಶೀಶೆ
* ಕನ್ನಡಿ
* ಟೂತ್ ಬ್ರಷ್
* ಸೂಜಿ ದಾರ
* ಶಸ್ತ್ರಾಸ್ತ್ರ ಸ್ವಚ್ಛಗೊಳಿಸುವ ಎಣ್ಣೆ
* ನೇಲ್ ಕಟ್ಟರ್

ಶೋಪಿಯನ್ ನಲ್ಲಿದ್ದ ನವೀದ್ ಬಾಬು, ಮೀರ್ ಇರ್ಫಾನ್, ರಫಿ ರಥಾರ್ ರನ್ನು ಶ್ರೀನಗರಕ್ಕೆ ಕರೆ ತಂದಿದ್ದ ಸಿಂಗ್ ನಂತರ ನವದೆಹಲಿಗೆ ಕರೆದೊಯ್ಯಲು ಸಜ್ಜಾಗಿದ್ದರು. ಆದರೆ, ಈ ಪ್ರಯತ್ನದಲ್ಲಿರುವಾಗ ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ.

ಉಗ್ರರ ಜೊತೆ ಸಿಕ್ಕಿಬಿದ್ದ ಡಿವೈಎಸ್‌ಪಿ: ಕೆಲವು ಆತಂಕಕಾರಿ ಮಾಹಿತಿಉಗ್ರರ ಜೊತೆ ಸಿಕ್ಕಿಬಿದ್ದ ಡಿವೈಎಸ್‌ಪಿ: ಕೆಲವು ಆತಂಕಕಾರಿ ಮಾಹಿತಿ

ವಿಚಾರಣೆ ವೇಳೆ ಈ ಬಗ್ಗೆ ಪ್ರಶ್ನಿಸಿದಾಗ, ಉಗ್ರರನ್ನು ಶರಣಾಗತಿ ಮಾಡಿಸಲು ದೆಹಲಿಗೆ ಕರೆದುಕೊಂಡು ಹೋಗುತ್ತಿದ್ದೆ ಎಂದು ಸಿಂಗ್ ಹೇಳಿದ್ದಾರೆ. ಆದರೆ, ಹಣಕ್ಕಾಗಿ ಗಡಿಯೊಳಗೆ ನುಸುಳಲು ಉಗ್ರರಿಗೆ ಬನಿಹಾಲ್ ಮೂಲಕ ನೆರವಾಗುತ್ತಿದ್ದ ಆರೋಪ ಸಿಂಗ್ ಮೇಲಿದೆ.

READ IN ENGLISH

English summary
The Jammu and Kashmir police who were probing the case against DSP Davinder Singh had made huge recoveries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X