ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾದಲ್ಲಿ ಗುಂಡಿನ ಚಕಮಕಿ: ನಾಲ್ವರು ಯೋಧರು ಹುತಾತ್ಮ

|
Google Oneindia Kannada News

ಶ್ರೀನಗರ, ಫೆಬ್ರವರಿ 18: ಪುಲ್ವಾಮಾದಲ್ಲಿ ಉಗ್ರರ ಅಡಗುದಾಣದ ಮೇಲೆ ಸೇನಾಪಡೆ ಸಿಬ್ಬಂದಿ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಪುಲ್ವಾಮಾದ ಪಿಂಗ್ಲಾನ್​ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಸೇನಾಪಡೆ ಸಿಬ್ಬಂದಿ ಉಗ್ರರನ್ನು ಸುತ್ತುವರಿದು ಗುಂಡಿನ ದಾಳಿ ಆರಂಭಿಸಿದರು.

ಒಂದೇ ಒಂದು ಬುಲೆಟ್ ಹಾರಿಸದೇ ಕೇಂದ್ರ ಸರಕಾರ ಪಾಕಿಸ್ತಾನಕ್ಕೆ ನೀಡುತ್ತಿರುವ ಶಾಕ್ ಒಂದೇ ಒಂದು ಬುಲೆಟ್ ಹಾರಿಸದೇ ಕೇಂದ್ರ ಸರಕಾರ ಪಾಕಿಸ್ತಾನಕ್ಕೆ ನೀಡುತ್ತಿರುವ ಶಾಕ್

ಇಬ್ಬರು ಅಥವಾ ಮೂವರು ಉಗ್ರರು ಇರುವ ಶಂಕೆ ಇದ್ದು, ಕಾರ್ಯಾಚರಣೆ ಮುಂದುವರಿದಿದೆ. 60 ಕೆ.ಜಿ. ಆರ್​ಡಿಎಕ್ಸ್​ನೊಂದಿಗೆ ಉಗ್ರರು ಮಾಡಿದ ದಾಳಿಯಲ್ಲಿ 49 ಸಿಬ್ಬಂದಿ ಹುತಾತ್ಮರಾದ ಕೆಲವೇ ದಿನಗಳಲ್ಲಿ ನಡೆದ ಮೊದಲ ಕಾರ್ಯಾಚರಣೆ ಇದಾಗಿದೆ.

ಉಗ್ರ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಈಗಲೂ ಪುಲ್ವಾಮಾದಲ್ಲಿ ಉಗ್ರ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಈಗಲೂ ಪುಲ್ವಾಮಾದಲ್ಲಿ

ಪುಲ್ವಾಮಾದಲ್ಲಿ ಜೈಶ್ ಉಗ್ರರ ವಿರುದ್ಧ ಕಾರ್ಯಾಚರಣೆ ಮಾಡುವ ವೇಳೆ ಯೋಧರು ಹುತಾತ್ಮರಾಗಿದ್ದಾರೆ. ಕಣಿವೆಯಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸಿಪಾಯಿ ಅಜಯ್ ಕುಮಾರ್ , ಸಿಪಾಯಿ ಹರಿಸಿಂಗ್ ಗುಲ್ಜಾರ್ ಅಹಮದ್, ಮೇಜರ್ ಡಿಎಸ್ ದೋಂಡಿಯಲ್, ಹೆಡ್ ಕಾನ್‌ಸ್ಟೇಬಲ್ ಸವೆ ರಾಮ್ ಹುತಾತ್ಮರಾಗಿದ್ದಾರೆ.

Five army personnel martyred in encounter with jaish terrorist in pulwama

ನಾಲ್ಕು ಯೋಧರು, ಓರ್ವ ನಾಗರಿಕ ಸೇರಿ ಒಟ್ಟು 5 ಮಂದಿ ಮೃತರಾಗಿದ್ದಾರೆ. ಶ್ರೀನಗರ ಸೇನಾ ಆಸ್ಪತ್ರೆಯಲ್ಲಿ ಗುಲ್ಜರ್ ಅಹಮದ್ ಮೃತಪಟ್ಟಿದ್ದಾರೆ. ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 49 ಯೋಧರು ಹುತಾತ್ಮರಾಗಿದ್ದರು.

"ಭದ್ರತಾ ಲೋಪವಿಲ್ಲದೆ ಇಂಥ ಘಟನೆ ನಡೆಯಲು ಸಾಧ್ಯವೇ ಇಲ್ಲ"

60 ಕೆಜಿ ಆರ್‌ಡಿಎಕ್ಸ್ ತುಂಬಿದ ವಾಹನವನ್ನು ತಂದು ಯೋಧರಿದ್ದ ಬಸ್ ಅನ್ನು ಸ್ಫೋಟಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಅನಂತ್‌ನಾಗ್, ಸೋಪೋರ್, ಕುಲ್ಗಾವ್, ಕುಪ್ವಾರಾ, ಹಂದ್ವಾರಾದಲ್ಲಿ 2ಜಿ,3ಜಿ,4ಜಿದಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

ಶನಿವಾರವಷ್ಟೇ ಎಲ್‌ಓಸಿಯಲ್ಲಿ ಸ್ಫೋಟಕವನ್ನು ನಿಷ್ಕ್ರಿಯಗೊಳಿಸುವ ವೇಳೆ ಹಿರಿಯ ಸೇನಾ ಅಧಿಕಾರಿ ಹುತಾತ್ಮರಾಗಿದ್ದರು.

English summary
Five army personnel , including a major were martyred on monday in an encounter with jaish terrorist in jammu and kashmir's pulwama district on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X