• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇಂದ್ರದ ಮಾಜಿ ಸಚಿವ ಚಮನ್‌ ಲಾಲ್ ಗುಪ್ತಾ ನಿಧನ

|
Google Oneindia Kannada News

ಶ್ರೀನಗರ, ಮೇ 18: ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಚಮನ್‌ ಲಾಲ್ ಗುಪ್ತಾ ನಿಧನರಾಗಿದ್ದಾರೆ.

ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು,ಅವರಿಗೆ 87 ವರ್ಷ ವಯಸ್ಸಾಗಿತ್ತು. ಗುಪ್ತಾ ತಮ್ಮ ಗಾಂಧಿ ನಗರದ ನಿವಾಸದಲ್ಲಿ ಮಂಗಳವಾರ ಸಾವನ್ನಪ್ಪಿದ್ದು ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಹೃದ್ರೋಗ ತಜ್ಞ ಡಾ. ಕೆ. ಕೆ. ಅಗರ್ವಾಲ್ ಕೋವಿಡ್‌ಗೆ ಬಲಿಹೃದ್ರೋಗ ತಜ್ಞ ಡಾ. ಕೆ. ಕೆ. ಅಗರ್ವಾಲ್ ಕೋವಿಡ್‌ಗೆ ಬಲಿ

ಕೋವಿಡ್ ಪಾಸಿಟಿವ್ ಕಂಡು ಬಂದಿದ್ದು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು, ಮೇ 5 ರಂದು ನಾರಾಯಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

ಆದರೆ ಇದ್ದಕ್ಕಿದ್ದಂತೆ ಅವರ ಆರೋಗ್ಯ ಸಮಸ್ಯೆ ಉಲ್ಬಣಗೊಂಡಿತ್ತು, ಮುಂಜಾನೆ 5.10 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ ಅನಿಲ್ ಗುಪ್ತ ಹೇಳಿದ್ದಾರೆ. 1972 ರಲ್ಲಿ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ಶಾಸಕಾಂಗ ಸಭೆಯ ಸದಸ್ಯರಾದ ನಂತರ ಮೃತ ನಾಯಕ ಐದು ದಶಕಗಳ ಕಾಲ ರಾಜಕೀಯ ನಡೆಸಿದ್ದರು. ಅವರು 2008 ಮತ್ತು 2014 ರ ನಡುವೆ ಮತ್ತೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಸದಸ್ಯರಾಗಿದ್ದರು.

ಚಮನ್ ಲಾಲ್ ಗುಪ್ತಾ ಅವರು 1996 ರಲ್ಲಿ ಜಮ್ಮುವಿನ ಉಧಂಪುರ್ ಕ್ಷೇತ್ರದಿಂದ 11 ನೇ ಲೋಕಸಭೆಗೆ ಆಯ್ಕೆಯಾದರು ಮತ್ತು 1998 ಮತ್ತು 1999 ರಲ್ಲಿ 12 ಮತ್ತು 13 ನೇ ಲೋಕಸಭೆಗೆ ಮರು ಆಯ್ಕೆಯಾದರು. ಚಮನ್ ಲಾಲ್ ಗುಪ್ತಾ ಅವರು ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದರು.

ಚಮನ್‌ಲಾಲ್ ಅವರು ಏಪ್ರಿಲ್ 13, 1934 ರಂದು ಜಮ್ಮುವಿನಲ್ಲಿ ಜನಿಸಿದ್ದರು, ಅವರು ಭಾರತೀಯ ಜನತಾ ಪಕ್ಷದ ನಾಯಕರಾಗಿದ್ದರು. ಕಳೆದ ಎರಡು ವರ್ಷಗಳಿಂದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರಿಂದ ಮತ್ತು ಸಾರ್ವಜನಿಕ ಜೀವನದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.

English summary
Veteran BJP leader and former union minister Chaman Lal Gupta died after a prolonged illness at his Gandhi Nagar residence here on Tuesday, days after undergoing successful treatment for COVID-19 at a hospital, his family said. Gupta (87) is survived by his two sons and a daughter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X