• search
 • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತ-ಪಾಕಿಸ್ತಾನ ಗಡಿಯಲ್ಲಿ ಕಾಡ್ಗಿಚ್ಚು: ನೆಲಬಾಂಬ್‌ಗಳು ಸ್ಫೋಟ

|
Google Oneindia Kannada News

ಶ್ರೀನಗರ, ಮೇ 19: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಕಾಡ್ಗಿಚ್ಚು ಹಬ್ಬಿದ್ದು, ಹಲವು ನೆಲಬಾಂಬ್‌ಗಳು ಸ್ಫೋಟಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 16ರ ಸೋಮವಾರದಂದು ನಿಯಂತ್ರಣ ರೇಖೆಯಲ್ಲಿರುವ ಕಾಡಿನ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಮೆಂಧರ್ ಸೆಕ್ಟರ್‍‌ನ ಭಾರತದ ಗಡಿಯೊಳಗಿನ ಪ್ರದೇಶಗಳ ಅರಣ್ಯ ಭಾಗಕ್ಕೂ ಕಾಡ್ಗಿಚ್ಚು ವ್ಯಾಪಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಬುರ್ಖಾ ಧರಿಸಿದ ವ್ಯಕ್ತಿ ನಡೆಸಿದ ಗ್ರನೇಡ್ ದಾಳಿಗೆ ಒಬ್ಬ ಸಾವುಜಮ್ಮು-ಕಾಶ್ಮೀರದಲ್ಲಿ ಬುರ್ಖಾ ಧರಿಸಿದ ವ್ಯಕ್ತಿ ನಡೆಸಿದ ಗ್ರನೇಡ್ ದಾಳಿಗೆ ಒಬ್ಬ ಸಾವು

"ಕಾಡ್ಗಿಚ್ಚಿನ ಪರಿಣಾಮ ಸುಮಾರು 6 ನೆಲಬಾಂಬ್‌ಗಳು ಸ್ಫೋಟಗೊಂಡಿವೆ, ಶತ್ರುಗಳು ಭಾರತಕ್ಕೆ ಒಳನುಸುಳದಂತೆ ಹಿಮ್ಮೆಟ್ಟಿಸಲು ನೆಲಬಾಂಬ್‌ಗಳನ್ನು ಹುದುಗಿಸಿ ಇಡಲಾಗಿತ್ತು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಡ್ಗಿಚ್ಚು ಗಡಿ ಭಾಗದ ಹಳ್ಳಿಗಳಿಗೆ ತಲುಪುತ್ತಿದ್ದಂತೆ ಸೇನೆಯ ಸಹಾಯದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅರಣ್ಯಾಧಿಕಾರಿ ಹುಸೇನ್ ಷಾ ಹೇಳಿದ್ದಾರೆ.

ಜಮ್ಮು-ಕಾಶ್ಮೀರದ ಕುರಿತು ಪಾಕ್ ವಿಧಾನಸಭೆಯಲ್ಲಿ ನಿರ್ಣಯ; ಭಾರತದ ತಿರುಗೇಟು ಜಮ್ಮು-ಕಾಶ್ಮೀರದ ಕುರಿತು ಪಾಕ್ ವಿಧಾನಸಭೆಯಲ್ಲಿ ನಿರ್ಣಯ; ಭಾರತದ ತಿರುಗೇಟು

"ಕಳೆದ ಮೂರು ದಿನಗಳಿಂದ ಕಾಡ್ಗಿಚ್ಚು ಉರಿಯುತ್ತಿದೆ. ಸೇನೆಯೊಂದಿಗೆ ಸೇರಿ ನಾವು ಬೆಂಕಿಯನ್ನು ನಂದಿಸುತ್ತಿದ್ದೇವೆ. ಕಾಡ್ಗಿಚ್ಚನ್ನು ಹತೋಟಿಗೆ ತರಲಾಗಿತ್ತು ಆದರೆ ಬುಧವಾರ ಬೆಳಿಗ್ಗೆ ದರಂಶಾಲ್ ಬ್ಲಾಕ್‌ನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿತ್ತು ತೀವ್ರ ಗಾಳಿ ಬೀಸಿದ ಪರಿಣಾಮ ಕಾಡ್ಗಿಚ್ಚು ವೇಗವಾಗಿ ಹಬ್ಬಿದೆ" ಎಂದು ಅವರು ತಿಳಿಸಿದ್ದಾರೆ.

ತ್ರಿಕೂಟ ಬೆಟ್ಟಗಳ ಮೇಲಿನ ಕಾಡುಗಳಿಗೂ ಬೆಂಕಿ ಹಬ್ಬಿದ್ದು, ಹೊಸ ಮಾರ್ಗದ ಮೂಲಕ ಮಾತಾ ವೈಷ್ಣೋದೇವಿ ಪುಣ್ಯಕ್ಷೇತ್ರಕ್ಕೆ ತೀರ್ಥಯಾತ್ರೆಯನ್ನು ಸ್ಥಗಿತಗೊಳಿಸಿದೆ. ಆದರೆ ಸಾಂಪ್ರದಾಯಿಕ ಮಾರ್ಗದ ಮೂಲಕ ವೈಷ್ಣೋದೇವಿ ಕ್ಷೇತ್ರಕ್ಕೆ ಹೋಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Forest Fire Triggers Landmine Explosions Along Line Of Control In Poonch

ಕಾಡ್ಗಿಚ್ಚಿನಿಂದಾಗಿ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿ ಬುಧವಾರ ಬೆಳಗ್ಗೆ ಬ್ಯಾಟರಿ ಚಾಲಿತ ಕಾರುಗಳ ಸೇವೆಯನ್ನು ಸ್ಥಗಿತಗೊಳಿಸಿತ್ತು. ಹೊಸ ಟ್ರ್ಯಾಕ್‌ನಲ್ಲಿ ಕಲ್ಲು ತೂರಾಟ ನಡೆಸಿದ್ದರಿಂದ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ರಜೌರಿ ಜಿಲ್ಲೆಯಲ್ಲಿ, ಗಡಿ ಸಮೀಪದ ಸುಂದರಬಂಡಿ ಪ್ರದೇಶದಲ್ಲೂ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಗಂಭೀರ್, ನಿಕ್ಕಾ, ಪಂಜ್‌ಗ್ರೇ, ಬ್ರಾಹ್ಮಣ, ಮೊಘಲಾ ಸೇರಿದಂತೆ ಇತರ ಅರಣ್ಯ ಪ್ರದೇಶಗಳಿಗೆ ವ್ಯಾಪಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಕಲಕೋಟೆಯ ಕಾಳಾರ್, ರಂತಾಲ್, ಚಿಂಗಿ ಅರಣ್ಯಗಳಲ್ಲೂ ಬೆಂಕಿ ಕಾಣಿಸಿಕೊಂಡಿದೆ.

   ಬಯೋ ಬಬ್ಬಲ್ ಬಿಟ್ಟು ಹೊರಟ Williamson | Oneindia Kannada

   "ಗಡಿಯುದ್ದಕ್ಕೂ ಬೆಂಕಿ ಆವರಿಸಿಕೊಂಡಿದ್ದು, ಅಪ್ಪರ್ ಕಂಗ್ಡಿ ಮತ್ತು ಡೋಕ್ ಬನ್ಯಾಡ್‌ನ ಎಲ್‌ಒಸಿ ಪ್ರದೇಶಗಳಿಗೂ ಹರಡಿತು" ಎಂದು ಅಧಿಕಾರಿಯೊಬ್ಬರು ಹೇಳಿದರು. ಕಾಡ್ಗಿಚ್ಚು ಹತೋಟಿಗೆ ಬಂದಿದ್ದು, ಅವಘಡದಲ್ಲಿ ಯಾವುದೇ ಜೀವಹಾನಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

   English summary
   A forest fire triggered several landmine explosions along the Line of Control (LOC) in Jammu and Kashmir's Poonch district, according to the officials.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X