ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ನಾಯಕನ ಮನೆ ಮೇಲೆ ಗ್ರೆನೇಡ್ ದಾಳಿ, ಐವರಿಗೆ ಗಾಯ

|
Google Oneindia Kannada News

ಶ್ರೀನಗರ, ಆಗಸ್ಟ್‌ 13: ಬಿಜೆಪಿ ನಾಯಕನ ಮನೆ ಮೇಲೆ ಗ್ರೆನೇಡ್ ದಾಳಿ ನಡೆದಿದ್ದು, ಐವರು ಗಾಯಗೊಂಡಿರುವ ಘಟನೆ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದಿದೆ.

ಬಿಜೆಪಿ ನಾಯಕ ಮತ್ತು ಅವರ ಪತ್ನಿಯನ್ನು ಹತ್ಯೆಗೈದ ಮೂರು ದಿನಗಳ ನಂತರ, ಉಗ್ರರು ಗುರುವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಯ ರಾಜೌರಿಯಲ್ಲಿರುವ ಬಿಜೆಪಿ ನಾಯಕರ ನಿವಾಸದ ಮೇಲೆ ದಾಳಿ ನಡೆಸಿದ್ದು, ಬಿಜೆಪಿ ನಾಯಕ ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಎಲ್ಲಾ ಐವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದರು.

ಗ್ರೆನೇಡ್ ದಾಳಿ ನಡೆದ ತಕ್ಷಣ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ದಾಳಿಕೋರರನ್ನು ಪತ್ತೆ ಮಾಡಲು ಭದ್ರತಾ ಸಿಬ್ಬಂದಿ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

Five Injured In Grenade Attack On BJP Leaders House In J-Ks Rajouri

ಮೂರು ದಿನಗಳೊಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ನಾಯಕರ ಮೇಲೆ ನಡೆದ ಎರಡನೇ ಉಗ್ರರ ದಾಳಿ ಇದಾಗಿದೆ. ಶಂಕಿತ ಉಗ್ರರು ಸಂಜೆ ರಾಜೌರಿ ಜಿಲ್ಲೆಯ ಖಂಡ್ಲಿ ಪ್ರದೇಶದಲ್ಲಿರುವ ಬಿಜೆಪಿ ನಾಯಕ ಜಸ್ಬೀರ್ ಸಿಂಗ್ ನಿವಾಸದ ಮೇಲೆ ಗ್ರೆನೇಡ್ ಎಸೆದಿದ್ದಾರೆ. ಬಿಜೆಪಿ ನಾಯಕ ಸೇರಿದಂತೆ ಐವರು ಗಾಯಗೊಂಡಿದ್ದಾರೆ ಪೊಲೀಸ್ ಮೂಲಗಳ ತಿಳಿಸಿವೆ.

ಇತ್ತೀಚೆಗಷ್ಟೇ ಬಿಜೆಪಿ ಮುಖಂಡರೊಬ್ಬರು ಹಾಗೂ ಅವರ ಪತ್ನಿಯನ್ನು ಹತ್ಯೆಗೈಯಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ನಗರದ ಲಾಲ್ ಚೌಕ್ ನಲ್ಲಿ ಬಿಜೆಪಿ ಮುಖಂಡ ಗುಲಾಂ ರಸೂಲ್ ದಾರ್ , ಮತ್ತು ಅವರ ಪತ್ನಿ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗ ಮಧ್ಯೆಯೇ ಇಬ್ಬರೂ ಕೊನೆಯುಸಿರೆಳೆದಿದ್ದರು.

ಕುಲ್ಗಾಂ ಕಿಸಾನ್ ಮೋರ್ಚಾ ಅಧ್ಯಕ್ಷನ ಹತ್ಯೆ : ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ, ಭಯೋತ್ಪಾದಕರು ಸೋಮವಾರ ಭಾರತೀಯ ಜನತಾ ಪಕ್ಷ ನಾಯಕ ಮತ್ತು ಅವರ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ದಕ್ಷಿಣ ಕಾಶ್ಮೀರದ ಅನಂತನಾಗ್‌ ಪ್ರದೇಶದ ಸರ್ ಪಂಚ್ ಮತ್ತು ಬಿಜೆಪಿ ಕಿಸಾನ್ ಮೋರ್ಚಾದ ಕುಲ್ಗಾಮ್ ಜಿಲ್ಲಾ ಘಟಕದ ಅಧ್ಯಕ್ಷ ಗುಲಾಂ ರಸೂಲ್ ದಾರ್ ಮತ್ತು ಅವರ ಪತ್ನಿ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ಲಾ ವಿಕಾಸ್ ಪರಿಷತ್ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು : ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಾರ್ಗಮಧ್ಯೆಯೇ ಇಬ್ಬರು ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಲ್ಗಾಂನ ರೆಡ್ವಾನಿ ನಿವಾಸಿಯಾದ ದಾರ್, ಬಿಜೆಪಿ (BJP) ಬೆಂಬಲಿತ ಸರ್ಪಂಚ್ ಆಗಿದ್ದರು. ಅವರು ಕಳೆದ ವರ್ಷ ಜಿಲ್ಲಾ ಕಾಸ್ ಪರಿಷತ್ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಆದರೆ ಆ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ದಾರ್ ಅನಂತನಾಗ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಇನ್ನು 2020ರಲ್ಲಿ ದೇವಸ್ಥಾನವೊಂದರ ಮೇಲೆ ಗ್ರೆನೇಡ್ ದಾಳಿ ಮಾಡಲು ಮುಂದಾಗಿದ್ದ ಉಗ್ರರನ್ನು ಬಂಧಿಸಲಾಗಿತ್ತು. ಪೂಂಛ್‌ ಜಿಲ್ಲೆಯಲ್ಲಿನ ದೇವಸ್ಥಾನವೊಂದರ ಮೇಲೆ ಗ್ರೆನೇಡ್‌ ದಾಳಿ ನಡೆಸುವ ಮೂಲಕ ಕೋಮುಗಲಭೆ ಸೃಷ್ಟಿಸಲು ಹೊಂಚು ಹಾಕಿದ್ದ ಪಾಕಿಸ್ತಾನದ ಸಂಚನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದರು.
ಮೇಂಧರ್‌ ಸೆಕ್ಟರ್‌ನಲ್ಲಿ ವಾಹನವೊಂದನ್ನು ಅಡ್ಡಗಟ್ಟಿದ್ದ ರಾಷ್ಟ್ರೀಯ ರೈಫಲ್ಸ್‌ ಮತ್ತು ಸ್ಥಳೀಯ ಪೊಲೀಸರ ವಿಶೇಷ ಕಾರ್ಯಾಚರಣೆ ಪಡೆ ಸಹೋದರರಿಬ್ಬರನ್ನು ಬಂಧಿಸಿತ್ತು.

ಗಲ್ಹುಟಾ ಗ್ರಾಮದ ಮುಸ್ತಫಾ ಇಕ್ಬಾಲ್‌ ಖಾನ್‌ ಹಾಗೂ ಮುರ್ತಜಾ ಇಕ್ಬಾಲ್‌ ಅವರಿಗೆ ಪಾಕಿಸ್ತಾನದಿಂದ ಕರೆಯೊಂದು ಬಂದಿರುವ ಖಚಿತ ಸುಳಿವು ಆಧರಿಸಿ ಬಂಧಿಸಲಾಗಿತ್ತು.
ವಿಚಾರಣೆ ವೇಳೆ ಪಾಕಿಸ್ತಾನದ ಮೊಬೈಲ್‌ ಸಂಖ್ಯೆಯೊಂದರಿಂದ ಕರೆ ಬಂದಿರುವುದು ದೃಢಪಟ್ಟಿದೆ.

''ಕೆಲವು ಗ್ರೆನೇಡ್‌ಗಳನ್ನು ಒದಗಿಸಲಾಗುವುದು, ಕೂಡಲೇ ಅರಿ ಗ್ರಾಮದಲ್ಲಿನ ಮಂದಿರವನ್ನು ಧ್ವಂಸ ಮಾಡಿ ಎಂದು ನಿರ್ದೇಶನ ನೀಡಲಾಗಿತ್ತು. ಗ್ರೆನೇಡ್‌ನಿಂದ ದಾಳಿ ಮಾಡುವ ವಿಧಾನದ ವಿಡಿಯೊವನ್ನೂ ಮೊಬೈಲ್‌ಗೆ ಕಳುಹಿಸಲಾಗಿತ್ತು,'' ಎಂಬುದಾಗಿ ಮುಸ್ತಫಾ ಒಪ್ಪಿಕೊಂಡಿದ್ದ.

ಮುಸ್ತಾಫಾಗೆ ದಾಳಿಗಾಗಿ ನೆರವು ನೀಡಲು ಸಿದ್ಧತೆ ನಡೆಸುತ್ತಿದ್ದ ಇಬ್ಬರು ಸಹಚರರಾದ ಯಾಸೀನ್‌ ಮತ್ತು ರಯೀಸ್‌ನನ್ನು ಬಾಲಾಕೋಟ್‌ ಬಳಿಯ ದಬ್ಬಿ ಗ್ರಾಮದಲ್ಲಿ ಬಂಧಿಸಲಾಗಿತ್ತು.

English summary
Five people were injured in a grenade attack on the house of a BJP leader in Jammu and Kashmir's Rajouri district on Thursday night, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X