ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟಕ್ಕೆ ಡ್ರೋನ್ ಬಳಕೆ ಹಿಂದೆ ಪಾಕ್ ಪಿತೂರಿ!?

|
Google Oneindia Kannada News

ಶ್ರೀನಗರ್, ಜೂನ್ 27: ಭಾರತೀಯ ವಾಯುಸೇನೆ ನಿಯಂತ್ರಣದಲ್ಲಿರುವ ಜಮ್ಮು ವಿಮಾನ ನಿಲ್ದಾಣದಲ್ಲಿ ನಡೆದ ಎರಡು ಲಘು ಸ್ಫೋಟದಲ್ಲಿ ಮೊದಲ ಬಾರಿಗೆ ಉಗ್ರರು ಡ್ರೋನ್ ಬಳಕೆ ಮಾಡಿರುವ ವಿಚಾರ ರಾಷ್ಟ್ರೀಯ ತನಿಖಾ ತಂಡದ ತನಿಖೆ ವೇಳೆ ಗೊತ್ತಾಗಿದೆ.
ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಐದು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದ್ದು, ಇಬ್ಬರು ಭಾರತೀಯ ಸೇನಾ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ. ಬೆಳಗಿನ ಜಾವ 1.37ರ ಹೊತ್ತಿಗೆ ಮೊದಲ ಸ್ಫೋಟ ಸಂಭವಿಸಿದ್ದು, ಕಟ್ಟಡದ ತಾಂತ್ರಿಕ ವಿಭಾಗದಲ್ಲಿನ ಮೇಲ್ಛಾವಣಿಗೆ ಹಾನಿಯಾಗಿದೆ. ಬೆಳಗಿನ ಜಾವ 1.43ರ ಹೊತ್ತಿಗೆ ಒಂದೇ ಕಿಲೋ ಮೀಟರ್ ದೂರದಲ್ಲಿ ಇರುವ ಬಯಲು ಪ್ರದೇಶದಲ್ಲಿ ಎರಡನೇ ಸ್ಫೋಟ ಸಂಭವಿಸಿದೆ.

ಜಮ್ಮು ವಿಮಾನ ನಿಲ್ದಾಣದಲ್ಲಿ 5 ನಿಮಿಷಗಳ ಅಂತರದಲ್ಲೇ ಎರಡು ಸ್ಫೋಟಜಮ್ಮು ವಿಮಾನ ನಿಲ್ದಾಣದಲ್ಲಿ 5 ನಿಮಿಷಗಳ ಅಂತರದಲ್ಲೇ ಎರಡು ಸ್ಫೋಟ

"ಭಾರತೀಯ ವಾಯು ನೆಲೆ ನಿಯಂತ್ರಣದ ಜಮ್ಮು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಎರಡು ಲಘುಸ್ಫೋಟವು ಉಗ್ರರ ದಾಳಿಯಾಗಿದೆ," ಎಂದು ಜಮ್ಮು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಸ್ಪಷ್ಟಪಡಸಿದ್ದಾರೆ. ಮೊದಲ ಬಾರಿಗೆ ಉಗ್ರರ ದಾಳಿಗೆ ಡ್ರೋನ್ ಬಳಕೆ ಆಗಿರುವುದು ಗೊತ್ತಾಗಿದೆ. ಅಲ್ಲದೇ, ಈ ಡ್ರೋನ್ ದಾಳಿ ಹಿಂದೆ ಪಾಕಿಸ್ತಾನ ಉಗ್ರ ಸಂಘಟನೆ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

First Drone Terror Attack: Pakistan Conspiracy Behind The Two Explosion At Jammu Airport

ತನಿಖೆ ಶುರು ಮಾಡಿರುವ ಎನ್ಐಎ ಅಧಿಕಾರಿಗಳು

ತನಿಖೆ ಶುರು ಮಾಡಿರುವ ಎನ್ಐಎ ಅಧಿಕಾರಿಗಳು

ಐದು ನಿಮಿಷಗಳ ಅಂತರದಲ್ಲಿ ಸಂಭವಿಸಿದ ಎರಡು ಸ್ಫೋಟಗಳ ಬಗ್ಗೆ ಭಾರತೀಯ ವಾಯು ಪಡೆ ಸಿಬ್ಬಂದಿ ತನಿಖೆ ಶುರು ಮಾಡಿದ್ದಾರೆ. ಸ್ಥಳಕ್ಕೆ ರಾಷ್ಟ್ರೀಯ ಬಾಂಬ್ ದತ್ತಾಂಶ ಕೇಂದ್ರ ತಜ್ಞರು, ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ದೌಡಾಯಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದು ಕಡೆ ಭಯೋತ್ಪಾದನಾ ವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ರಾಷ್ಟ್ರೀಯ ತನಿಖಾ ತಂಡವು ಪ್ರಕರಣದ ತನಿಖೆಯನ್ನು ಶುರು ಕೈಗೆತ್ತಿಕೊಂಡಿದ್ದು, ಮುಂದಿನ ಆರು ತಿಂಗಳಿನಲ್ಲಿ ಯಾವುದೇ ಸಾಕ್ಷ್ಯಗಳಿಲ್ಲದೇ ಸಂಶಯದ ಮೇಲೆ ಶಂಕಿತರನ್ನು ಬಂಧಿಸುವುದಕ್ಕೆ ಅನುಮತಿ ನೀಡಲಾಗಿದೆ.

ಜಮ್ಮುವಿನಲ್ಲಿ ನಡೆದ ಎರಡು ಸ್ಫೋಟಕ್ಕೆ ಡ್ರೋನ್ ಬಳಕೆ

ಜಮ್ಮುವಿನಲ್ಲಿ ನಡೆದ ಎರಡು ಸ್ಫೋಟಕ್ಕೆ ಡ್ರೋನ್ ಬಳಕೆ

"ಜಮ್ಮು ವಾಯುನೆಲೆಯಲ್ಲಿ ನಡೆದ ಎರಡೂ ಲಘುಸ್ಫೋಟಗಳಲ್ಲಿ ಪೇಲೋಡ್ ಹೊಂದಿರುವ ಡ್ರೋನ್‌ಗಳನ್ನು ಬಳಸಲಾಗಿದೆ. ಜಮ್ಮು ಪೊಲೀಸರು ಮತ್ತೊಂದು ಕಚ್ಚಾ ಬಾಂಬ್ ಅನ್ನು ಪತ್ತೆ ಮಾಡಿದ್ದಾರೆ. ಈ ಐಇಡಿ ಬಾಂಬ್ ಅನ್ನು ಲಷ್ಕರ್-ಇ-ತೊಯ್ಬಾ ಆಪರೇಟರ್ ಕಡೆಯಿಂದ ತೆಗೆದುಕೊಂಡಿದ್ದು, ಜನ ಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ಅದನ್ನು ಅಳವಡಿಸುವುದಕ್ಕೆ ಸಂಚು ರೂಪಿಸಲಾಗಿತ್ತು," ಎಂದು ಜಮ್ಮು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

ಗಡಿಯಲ್ಲಿ ಶಸ್ತ್ರಾಸ್ತ್ರ ಎಸಲು ಡ್ರೋನ್ ಬಳಸುತ್ತಿರುವ ಪಾಕ್

ಗಡಿಯಲ್ಲಿ ಶಸ್ತ್ರಾಸ್ತ್ರ ಎಸಲು ಡ್ರೋನ್ ಬಳಸುತ್ತಿರುವ ಪಾಕ್

ಕಳೆದ ಎರಡು ವರ್ಷಗಳಿಂದ ಗಡಿಯುದ್ದಕ್ಕೂ ಪ್ರದೇಶದಲ್ಲಿ ಪಾಕಿಸ್ತಾನವು ಮದ್ದು-ಗುಂಡು ಮತ್ತು ಶಸ್ತ್ರಾಸ್ತ್ರಗಳನ್ನು ಎಸೆಯುವುದಕ್ಕೆ ಹಾಗೂ ಸರಬರಾಜು ಮಾಡುವುದಕ್ಕೆ ಡ್ರೋನ್ ಬಳಸುತ್ತಿದೆ ಎಂಬ ಬಗ್ಗೆ ಸಾಕಷ್ಟು ವರದಿಗಳು ಬಂದಿದ್ದವು. 2019ರ ಆಗಸ್ಟ್ ತಿಂಗಳಿನಲ್ಲಿ ಮೊದಲ ಬಾರಿಗೆ ಪಂಜಾಬಿನ ಅಮೃತಸರ್ ಬಳಿ ಅಪಘಾತಕ್ಕೀಡಾಗ ಡ್ರೋನ್ ಒಂದು ಪತ್ತೆಯಾಗಿತ್ತು. ಸಪ್ಟೆಂಬರ್ ತಿಂಗಳಿನಲ್ಲಿ ಅಖೂರ್ ಮತ್ತು ಜಮ್ಮುವಿನಲ್ಲಿ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಎಸೆಯುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಹೀಗೆ ಡ್ರೋನ್ ಮೂಲಕ ಸರಬರಾಜು ಆಗುತ್ತಿದ್ದ ಶಸ್ತ್ರಾಸ್ತ್ರಗಳನ್ನು ಪಡೆದು ಸಂಗ್ರಹಿಸುತ್ತಿದ್ದ ಮೂವರು ಉಗ್ರರನ್ನು ಬಂಧಿಸಲಾಗಿತ್ತು.

ಡ್ರೋನ್ ಮೂಲಕವೇ ಔಷಧಿ ಮತ್ತು ಶಸ್ತ್ರಾಸ್ತ್ರ ಸರಬರಾಜು

ಡ್ರೋನ್ ಮೂಲಕವೇ ಔಷಧಿ ಮತ್ತು ಶಸ್ತ್ರಾಸ್ತ್ರ ಸರಬರಾಜು

ಸಪ್ಟೆಂಬರ್ ತಿಂಗಳಿನಲ್ಲಿ ಭದ್ರತಾ ಸಿಬ್ಬಂದಿಯು ಬಂಧಿಸಿದ ಉಗ್ರನು ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದನು. ಪಂಜಾಬ್ ಗಡಿಯಲ್ಲಿ ಔಷಧಿ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸುವುದಕ್ಕೆ ಎಂಟು ಡ್ರೋನ್ ಬಳಕೆ ಮಾಡುತ್ತಿದ್ದೆವು ಎಂದು ಹೇಳಿಕೆ ನೀಡಿದ್ದನು. 2020ರ ಜೂನ್ 20ರಂದು ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಶಂಕಿತ ಗುಪ್ತಚರ ಡ್ರೋನ್ ಅನ್ನು ಭಾರತೀಯ ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದರು.

English summary
First Drone Terror Attack: Pakistan Conspiracy Behind The Two Explosion At Jammu Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X