• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತ-ಚೀನಾ ಗಡಿಯ ಪೂರ್ವ ಲಡಾಖ್‌ನಲ್ಲಿ ಗುಂಡಿನ ದಾಳಿ

|

ಶ್ರೀನರ, ಸೆಪ್ಟೆಂಬರ್ 08 : ಭಾರತ- ಚೀನಾ ನಡುವಿನ ನಡುವೆ ಉದ್ವಿಗ್ನ ಪರಿಸ್ಥಿತಿ ಇದೆ. ಇದೇ ಸಂದರ್ಭದಲ್ಲಿ ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿ ಗುಂಡಿನ ದಾಳಿ ನಡೆದಿರುವ ಪ್ರಕರಣ ವರದಿಯಾಗಿದೆ.

ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರದ ದಂಡೆಯಲ್ಲಿನ ವಾಸ್ತವ ಗಡಿ ರೇಖೆ (ಎಲ್‌ಎಸಿ) ಬಳಿ ಗುಂಡಿನ ದಾಳಿ ನಡೆದಿದೆ. ಭಾರತ ಮತ್ತು ಚೀನಾ ಸೈನಿಕರು ಈ ಭಾಗದಲ್ಲಿ ನಿಯೋಜನೆಗೊಂಡಿದ್ದಾರೆ.

ಅರುಣಾಚಲ ಪ್ರದೇಶಕ್ಕೆ ಮಾನ್ಯತೆಯೇ ಇಲ್ಲ: ಅದು ಟಿಬೆಟ್‌ನಲ್ಲಿನ ನಮ್ಮ ಭಾಗ ಎಂದ ಚೀನಾ

ಎಲ್‌ಎಸಿ ದಾಟಿ ಬಂದಿರುವ ಭಾರತೀಯ ಯೋಧರು ಎಚ್ಚರಿಕೆ ಕೊಡಲು ಗುಂಡು ಹಾರಿಸಿದ್ದಾರೆ ಎಂದು ಚೀನಾ ಹೇಳಿದೆ. ಕಳೆದ ವಾರ ಇದೇ ಪ್ರದೇಶದಲ್ಲಿ ಚೀನಾ ಯೋಧರು ಭಾರತೀಯರನ್ನು ಪ್ರಚೋದಿಸಲು ಪ್ರಯತ್ನ ನಡೆಸಿದ್ದರು.

ಚೀನಾ ವಿರುದ್ಧ ಚೀನಿಯರಿಂದಲೇ 'ಭಾಷೆ' ಯುದ್ಧ..!

ವಾಸ್ತವ ಗಡಿ ರೇಖೆಯಲ್ಲಿ ಸಹಜ ಪರಿಸ್ಥಿತಿ ಇರಲು ಚೀನಾ ಸಹ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಚೀನಾ ಹೇಳಿದೆ. ಭಾರತೀಯ ಸೇನೆಯ ಉತ್ತರಕ್ಕಾಗಿ ಕಾಯಲಾಗುತ್ತಿದೆ ಎಂದು ಚೀನಾದ ಸೇನೆ ತಿಳಿಸಿದೆ.

ಚೀನಾ ವಿರುದ್ಧ ಮತ್ತೊಂದು ದೇಶದ ಬಂಡಾಯ..!

ಪಿಎಲ್‌ಎ ವಕ್ತಾರ ಈ ಕುರಿತು ಹೇಳಿಕೆ ನೀಡಿದ್ದು, "ಭಾರತೀಯ ಯೋಧರು ಅಕ್ರಮವಾಗಿ ವಾಸ್ತವ ಗಡಿ ರೇಖೆಯನ್ನು ದಾಟಿದ್ದಾರೆ. ಆಗ ಗಸ್ತಿನಲ್ಲಿದ್ದ ಸೈನಿಕರನ್ನು ಹೆದರಿಸಲು ಗುಂಡಿನ ದಾಳಿ ನಡೆಸಿದ್ದಾರೆ" ಎಂದು ಆರೋಪಿಸಿದ್ದಾರೆ.

"ಚೀನಾ ವಾಸ್ತವ ಗಡಿ ರೇಖೆಯಲ್ಲಿ ಸಹಜ ಸ್ಥಿತಿ ಕಾಪಾಡಲು ಪ್ರತಿತಂತ್ರವನ್ನು ಕೈಗೊಳ್ಳಬೇಕಾಗುತ್ತದೆ. ಇಂತಹ ಅಪಾಯಕಾರಿ ಕಾರ್ಯಾಚರಣೆಯನ್ನು ಭಾರತ ಸ್ಥಗಿತಗೊಳಿಸಬೇಕು" ಎಂದು ವಕ್ತಾರರು ಹೇಳಿದ್ದಾರೆ.

ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರದ ಬಳಿ ಕಳೆದ ವಾರ ಸಹ ಭಾರತೀಯ ಯೋಧರನ್ನು ಪ್ರಚೋದಿಸಲು ಚೀನಾ ಪ್ರಯತ್ನ ನಡೆಸಿತ್ತು. ಆಗಸ್ಟ್ 31ರಂದು ಭಾರತೀಯ ಪಡೆಯನ್ನು ಚೀನಾ ಯೋಧರು ಸುತ್ತುವರೆದಿದ್ದರು.

English summary
Indian soldiers fired warning shots after crossing the Line of Actual Control. Incident took place in the south bank of Pangong Lake in Ladakh on Monday China claimed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X