ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದಲ್ಲಿ ಶಾಲೆಗಳು ಪುನರಾರಂಭ: ಬೆರಳೆಣಿಕೆಯಷ್ಟು ಮಕ್ಕಳು ಹಾಜರ್

|
Google Oneindia Kannada News

ಶ್ರೀನಗರ, ಆಗಸ್ಟ್ 19: ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಲೆಗಳು ಇಂದಿನಿಂದ ಪುನರಾರಂಭವಾಗಿದ್ದು, ಬೆರಳೆಣಿಕೆಯಷ್ಟು ಮಕ್ಕಳು ಮಾತ್ರ ಹಾಜರಾಗಿದ್ದಾರೆ.

ಕೇಂದ್ರ ಸರ್ಕಾರವು ಸಂವಿಧಾನದ ವಿಧಿ 370 ರದ್ದುಗೊಳಿಸುವ ಹಿಂದಿನ ದಿನದಿಂದಲೇ ಜಮ್ಮು ಕಾಶ್ಮೀರದಲ್ಲಿ ಇಂಟರ್‌ನೆಟ್ ಸೇವೆ ಜೊತೆಗೆ ಶಾಲಾ, ಕಾಲೇಜುಗಳನ್ನು ಸ್ಥಗಿತಗೊಳಿಸಿದ್ದರು. ಜೊತೆಗೆ ಕರ್ಫ್ಯೂ ಕೂಡ ಜಾರಿ ಮಾಡಲಾಗಿತ್ತು.

ಜಮ್ಮು ಕಾಶ್ಮೀರ: ದೂರವಾಣಿ ನಿರ್ಬಂಧ ತೆರವು, ಶಾಲೆ ಮರು ಪ್ರಾರಂಭಜಮ್ಮು ಕಾಶ್ಮೀರ: ದೂರವಾಣಿ ನಿರ್ಬಂಧ ತೆರವು, ಶಾಲೆ ಮರು ಪ್ರಾರಂಭ

ಸತತ 15 ದಿನಗಳ ಬಳಿಕ ಇಂದು(ಆಗಸ್ಟ್ 19)ರಂದು ಶಾಲೆಗಳು ತೆರೆದಿದ್ದು ಬೆರಳೆಣಿಕೆಯಷ್ಟು ಮಕ್ಕಳು ಮಾತ್ರ ಹಾಜರಾಗಿದ್ದಾರೆ.

Few Schools On The Periphery Were Opened In Jammu And Kashmir

ಪಿಟಿಐ ನೀಡಿರುವ ಮಾಹಿತಿ ಪ್ರಕಾರ ಶ್ರೀನಗರದಲ್ಲಿ 190 ಶಾಲೆಗಳನ್ನು ತೆರೆಯಲಾಗಿವೆ. ಆದರೆ ಶಾಲೆಗಳಲ್ಲಿ ಮಕ್ಕಳು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿಲ್ಲ. ಇನ್ನು ಖಾಸಗಿ ಶಾಲೆಗಳಲ್ಲಿ ಮಕ್ಕಳ ಹಿತ ದೃಷ್ಟಿಯಿಂದ ಶಾಲೆಗೆ ಕಳುಹಿಸಿಲ್ಲ. ಪೊಲೀಸ್ ಪಬ್ಲಿಕ್ ಶಾಲೆಗಳಲ್ಲಿ ಮಾತ್ರ ಸಾಕಷ್ಟು ಮಕ್ಕಳು ಹಾಜರಾಗಿದ್ದಾರೆ.

ಬರಾಮುಲ್ಲಾದಲ್ಲಿ ಐದು ನಗರಗಳಲ್ಲಿ ಶಾಲೆಗಳು ಇನ್ನೂ ಬಾಗಿಲು ತೆರೆದಿಲ್ಲ. ಜಮ್ಮು ಕಾಶ್ಮೀರದಲ್ಲಿ ವಾತಾವರಣ ಶಾಂತವಾದ ಬಳಿಕವೇ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಆದರೆ ಇನ್ನೂ ಪೋಷಕರಿಗೆ ಆತಂಕ ಕಡಿಮೆಯಾಗಿಲ್ಲ.

ನಾಗರಿಕರ ಮೇಲೆ ದೌರ್ಜನ್ಯ: ಶೆಹ್ಲಾ ರಶೀದ್ ಆರೋಪ ನಿರಾಕರಿಸಿದ ಸೇನೆನಾಗರಿಕರ ಮೇಲೆ ದೌರ್ಜನ್ಯ: ಶೆಹ್ಲಾ ರಶೀದ್ ಆರೋಪ ನಿರಾಕರಿಸಿದ ಸೇನೆ

ಒಂದೊಂದೇ ನಿರ್ಬಂಧಗಳನ್ನು ಹಿಂಪಡೆಯಲಾಗುತ್ತದೆ. ಆಗಸ್ಟ್ 5ರ ನಂತರ ಎಲ್ಲಾ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು. ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ಬೆನ್ನಲ್ಲೇ ಈ ಎಲ್ಲಾ ಬೆಳವಣಿಗೆಗಳು ನಡೆದಿದ್ದವು.

English summary
Few Schools On The Periphery Were Opened In Jammu And Kashmir,15th consecutive day as parents were apprehensive about the security situation in the Valley.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X