ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚಿಸಲಾಗದ್ದಕ್ಕೆ ಕಾರಣ ಬಿಜೆಪಿ ಮತ್ತು ಫ್ಯಾಕ್ಸ್‌ ಮಷಿನ್‌!

|
Google Oneindia Kannada News

ಶ್ರೀನಗರ, ನವೆಂಬರ್ 22: ಕೆಟ್ಟ ಫ್ಯಾಕ್ಸ್‌ ಮಷಿನ್‌ನಿಂದ ಸರ್ಕಾರವೇ ರಚಿಸಲು ಆಗದೇಹೋದ ವಿಚಿತ್ರ ಘಟನೆ ಜಮ್ಮು ಕಾಶ್ಮೀರದಲ್ಲಿ ನಿನ್ನೆಯಷ್ಟೆ ನಡೆದಿದೆ.

ಹೌದು, ನಿನ್ನೆ ನಡೆದ ದಿಡೀರ್‌ ಬೆಳವಣಿಗೆಯಲ್ಲಿ ಪಿಡಿಪಿ, ಕಾಂಗ್ರೆಸ್, ಎನ್‌ಸಿ ಪಕ್ಷಗಳು ಸೇರಿ ಕಾಶ್ಮೀರದಲ್ಲಿ ಸರ್ಕಾರ ರಚಿಸುವ ಎಲ್ಲ ಮಾತುಕತೆಯನ್ನು ಮುಗಿಸಿ ರಾಜ್ಯಪಾಲರನ್ನು ಭೇಟಿ ಮಾಡಲು ಮೆಹಬೂಬಾ ಮಫ್ತಿ ಅವರು ಫ್ಯಾಕ್ಸ್‌ ಕಳುಹಿಸಿದರು. ಆದರೆ ಕೆಟ್ಟ ಫ್ಯಾಕ್ಸ್‌ ಮಿಷನ್‌ನಿಂದಾಗಿ ಅದು ರಾಜ್ಯಪಾಲರನ್ನು ತಲುಪಲೇ ಇಲ್ಲ.

ಜಮ್ಮು ವಿಧಾನಸಭೆ ವಿಸರ್ಜನೆ: ಪಿಡಿಪಿ, ಕಾಂಗ್ರೆಸ್‌, ಎನ್‌ಸಿಗೆ ಮುಖಭಂಗಜಮ್ಮು ವಿಧಾನಸಭೆ ವಿಸರ್ಜನೆ: ಪಿಡಿಪಿ, ಕಾಂಗ್ರೆಸ್‌, ಎನ್‌ಸಿಗೆ ಮುಖಭಂಗ

ಮೂರು ಪಕ್ಷಗಳು ರಾಜ್ಯಪಾಲರನ್ನು ಭೇಟಿ ಮಾಡಲು ಅವಕಾಶ ಕೇಳಲೆಂದು ಫ್ಯಾಕ್ಸ್‌ ಕಳುಹಿಸಿ ಕಾಯುತ್ತಿದ್ದರೆ ಇತ್ತ ರಾಜ್ಯಪಾಲ ಸತ್ಯಪಾಲ ಮಲ್ಲಿಕ್‌ ವಿಧಾನಸಭೆಯನ್ನೇ ವಿಸರ್ಜಿಸಿಬಿಟ್ಟರು. ಅಲ್ಲಿಗೆ ಸರ್ಕಾರ ರಚಿಸುವ ಮೂರೂ ಪಕ್ಷಗಳ ಆಸೆಗೆ ತಣ್ಣೀರು ಬಿತ್ತು.

ಮೆಹಬೂಬಾ ಮಫ್ತಿ ಅವರು ಕಳುಹಿಸಿದ ಫ್ಯಾಕ್ಸ್‌ ರಾಜ್ಯಪಾಲರನ್ನು ತಲುಪಿಲ್ಲವೆಂದು ಗೊತ್ತಾದ ನಂತರ ಮೆಹಬೂಬಾ ಮಫ್ತಿ ಅವರು ಮೇಲ್‌ ಮೂಲಕ ಸರ್ಕಾರ ರಚನೆ ಬಗ್ಗೆ ಅವಕಾಶ ನೀಡುವ ಬಗ್ಗೆ ಮಾತುಕತೆ ಮಾಡುಲು ಭೇಟಿಗೆ ಅವಕಾಶ ಕೋರಿ ಮೇಲ್‌ ಮಾಡಿದರು. ಆದರೆ ಅದಕ್ಕೂ ರಾಜ್ಯಪಾಲರ ಭವನದಿಂದ ಪ್ರತಿಕ್ರಿಯೆ ಬಂದಿಲ್ಲ.

ಮೆಹಬೂಬಾ ಮಫ್ತಿ ಆಕ್ರೋಶ

ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿರುವ ಪಿಡಿಪಿ ಮುಖಂಡೆ ಮೆಹಬೂಬಾ ಮಫ್ತಿ, 'ತಂತ್ರಜ್ಞಾನ ಮುಂಚೂಣಿಯಲ್ಲಿರುವ ಇಂತಹಾ ದಿನಗಳಲ್ಲಿ ರಾಜ್ಯಪಾಲರ ಕಚೇರಿಯಲ್ಲಿ ಫ್ಯಾಕ್ಸ್‌ ಯಂತ್ರ ಕೆಲಸ ಮಾಡುವುದಿಲ್ಲ, ಆದರೆ ವಿಧಾನಸಭೆ ವಿಸರ್ಜನೆ ಮಾಡುವ ಆದೇಶ ಹೊರಡಿಸಲು ಮಾತ್ರ ಫ್ಯಾಕ್ಸ್‌ ಕೆಲಸ ಮಾಡುತ್ತದೆ' ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

Array

ರಾಜಕೀಯ ಮುಖಂಡರ ಆಕ್ಷೇಪ

ರಾಜ್ಯಪಾಲರ ಈ ನಿರ್ಧಾರಕ್ಕೆ ಕಾಶ್ಮೀರದ ರಾಜಕೀಯ ಪಕ್ಷಗಳು ಹಾಗೂ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅಣತಿಯಂತೆ ರಾಜ್ಯಪಾಲರು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆಗೆ ರಾಜ್ಯಪಾಲರು ನೀಡಿದ 4 ಕಾರಣಗಳುಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆಗೆ ರಾಜ್ಯಪಾಲರು ನೀಡಿದ 4 ಕಾರಣಗಳು

ಓಮರ್ ಅಬ್ದುಲ್ಲಾ ಟ್ವೀಟ್‌

ಜಮ್ಮು ಕಾಶ್ಮೀರದ ಕಾಂಗ್ರೆಸ್ ಮುಖಂಡ ಓಮರ್ ಅಬ್ದುಲ್ಲಾ ಸಹ ಫ್ಯಾಕ್ಸ್‌ ಮಷಿನ್‌ ಬಗ್ಗೆ ಟ್ವೀಟ್‌ ಮಾಡಿದ್ದು, 'ಜಮ್ಮು ಕಾಶ್ಮೀರ ರಾಜಭವನ ಹೊಸ ಫ್ಯಾಕ್ಸ್‌ ಮಷೀನ್ ಖರೀದಿಸಬೇಕಿದೆ' ಎಂದಿದ್ದಾರೆ. ಜೊತೆಗೆ ಇನ್ನೂ ಹಲವು ವ್ಯಂಗ್ಯಭರಿತ ಟ್ವೀಟ್‌ಗಳನ್ನು ರಾಜಭವನದ ಫ್ಯಾಕ್ಸ್‌ ಮಷಿನ್‌ ಬಗ್ಗೆ ಮಾಡಿದ್ದಾರೆ.

ನಾಲ್ಕು ಕಾರಣ ನೀಡಿದ ರಾಜ್ಯಪಾಲ

ನಾಲ್ಕು ಕಾರಣ ನೀಡಿದ ರಾಜ್ಯಪಾಲ

ಇನ್ನು ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್‌ ಅವರು ವಿಧಾನಸಭೆ ವಿಸರ್ಜನೆ ಮಾಡಿರುವುದಕ್ಕೆ ನಾಲ್ಕು ಕಾರಣಗಳನ್ನು ನೀಡಿದ್ದು, ದುರ್ಬಲ ಮೈತ್ರಿ ಸರ್ಕಾರ ಹೆಚ್ಚು ದಿನ ನಡೆಯುತ್ತಿರಲಿಲ್ಲ, ಕುದುರೆ ವ್ಯಾಪಾರದ ಶಂಕೆ ಇತ್ತು, ಇಂತಾ ಸಂದರ್ಭದಲ್ಲಿ ಚುನಾವಣೆ ನಡೆಯುವುದೇ ಸರಿ ಹಾಗಾಗಿ ವಿಧಾನಸಭೆ ವಿಸರ್ಜನೆ ಮಾಡಿರುವುದಾಗಿ ಹೇಳಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಗೆ ಬಿಗ್ ಶಾಕ್! ವಿರೋಧಿಗಳಿಂದ ಮೈತ್ರಿ?ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಗೆ ಬಿಗ್ ಶಾಕ್! ವಿರೋಧಿಗಳಿಂದ ಮೈತ್ರಿ?

ಬಿಜೆಪಿ ಅಣತಿಯಂತೆ ಕಾರ್ಯ

ಸತ್ಯಪಾಲ ಮಲ್ಲಿಕ್ ಅವರು ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕಾಶ್ಮೀರದ ರಾಜಕೀಯ ಮುಖಂಡರುಗಳು ಆಕ್ರೋಶ ಹೊರಹಾಕಿದ್ದಾರೆ. ವಿಧಾನಸಭೆ ವಿಸರ್ಜನೆ ಆಗಿದ್ದು, ಇನ್ನೇನಿದ್ದರು ಚುನಾವಣೆ ನಡೆಯಬೇಕಿದೆ ಅಷ್ಟೆ.

English summary
Jammu Kashmir politics sees fax machine drama yesterday. Mehbooba Mufti asked governor's appointment through fax but as per governor office says their fax machine not working and they did not get the letter. In the end governor Sathyapal Mallik dissolve the assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X