• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಶ್ಮೀರದಲ್ಲಿ ಗುಂಡಿನ ಚಕಮಕಿ; 3 ಉಗ್ರರ ಹತ್ಯೆ, ಒಬ್ಬ ಶರಣಾಗತಿ

|
Google Oneindia Kannada News

ಶ್ರೀನಗರ, ಮೇ 06; ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಹೊಸದಾಗಿ ಉಗ್ರ ಸಂಘಟನೆಗೆ ಸೇರಿದ್ದ ತೌಷಿಫ್ ಅಹಮದ್ ಎಂಬ ಉಗ್ರ ಪೊಲೀಸರಿಗೆ ಶರಣಾಗಿದ್ದಾನೆ.

ಗುರುವಾರ ಬೆಳಗ್ಗೆ ಶೋಫಿಯನ್ ಜಿಲ್ಲೆಯ ಕಾನಿಗಮ್ ಎಂಬ ಗ್ರಾಮದ ಬಳಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಇದುವರೆಗೂ ಮೂವರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಕಾಶ್ಮೀರ ವಿಭಾಗದ ಪೊಲೀಸರು ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಇಬ್ಬರು ಉಗ್ರರು ಸೇರಿ 5 ಮಂದಿ ಬಂಧನ ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಇಬ್ಬರು ಉಗ್ರರು ಸೇರಿ 5 ಮಂದಿ ಬಂಧನ

ಉಗ್ರರು ಅಡಗಿರುವ ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ದಾಳಿಯನ್ನು ನಡೆಸಿವೆ. ಈ ವೇಳೆ ಹೊಸದಾಗಿ ಉಗ್ರ ಸಂಘಟನೆಗೆ ಸೇರಿದ್ದ ಉಗ್ರನೊಬ್ಬ ಪೊಲೀಸರಿಗೆ ಶರಣಾಗಿದ್ದಾನೆ. ಆತನ ವಿಚಾರಣೆ ನಡೆಯುತ್ತಿದ್ದು, ಅಡಗಿ ಕೂತವರ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.

ಜಮ್ಮು ಕಾಶ್ಮೀರದ ಮಾಜಿ ಗವರ್ನರ್ ಜಗಮೋಹನ್ ನಿಧನ: ಪ್ರಧಾನಿ ಸಂತಾಪಜಮ್ಮು ಕಾಶ್ಮೀರದ ಮಾಜಿ ಗವರ್ನರ್ ಜಗಮೋಹನ್ ನಿಧನ: ಪ್ರಧಾನಿ ಸಂತಾಪ

Encounter In South Kashmir One Newly Recruited Terrorist Surrendered

ಒಟ್ಟು ಐವರು ಉಗ್ರರು ಒಳನುಸುಳಿ ಬಂದಿರಬಹುದು ಎಂದು ಶಂಕಿಸಲಾಗಿದೆ. ಗುಂಡಿನ ಕಾಳಗ ಮುಂದುವರೆದಿದ್ದು, ಉಗ್ರರ ಬಳಿ ಯಾವ ಶಸ್ತ್ರಾಸ್ತ್ರಗಳಿವೆ ಎಂದು ಶರಣಾದ ಉಗ್ರನಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.

ಭದ್ರತಾ ಪಡೆಯ ಭಯದಿಂದ ಉಗ್ರರು ನೇಮಕಾತಿ ಹೇಗೆ ಮಾಡಿದ್ದಾರೆ ಗೊತ್ತಾ? ಭದ್ರತಾ ಪಡೆಯ ಭಯದಿಂದ ಉಗ್ರರು ನೇಮಕಾತಿ ಹೇಗೆ ಮಾಡಿದ್ದಾರೆ ಗೊತ್ತಾ?

English summary
Encounter between terrorists and security forces at Kanigam area of Shopian district of South Kashmir. One newly recruited terrorist surrendered, 3 terrorists killed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X