ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಾಶ್ಮೀರ ಸಹವಾಸ ಬೇಡ, ನಮ್ಮ ಊರುಗಳಿಗೆ ವರ್ಗಾವಣೆ ಮಾಡಿ'

|
Google Oneindia Kannada News

ಜಮ್ಮು, ಜೂನ್ 3: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ನಿತ್ಯವೂ ಈಗ ಹತ್ಯೆಗಳು ಸಂಭವಿಸುತ್ತಿವೆ. ಉಗ್ರಗಾಮಿಗಳು ಉದ್ದೇಶಿತ ಹತ್ಯೆ ನಿರಂತರವಾಗಿ ನಡೆಸುತ್ತಿದ್ದಾರೆ. ಸರಕಾರಿ ನೌಕರರು, ಮುಸ್ಲಿಮೇತರರನ್ನೇ ಉಗ್ರರು ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ. ಇದು ಸರಕಾರಿ ನೌಕರರು ಮತ್ತು ಮುಸ್ಲಿಮೇತರರನ್ನು ಭಯಭೀತಗೊಳಿಸಿದೆ. ನಿನ್ನೆ ಗುರುವಾರ ನೂರಾರು ಮಂದಿ ಸರಕಾರಿ ನೌಕರರು ತಂತಮ್ಮ ಊರುಗಳಿಗೆ ವರ್ಗಾವಣೆ ಮಾಡುವಂತೆ ಪ್ರತಿಭಟನೆ ಮಾಡಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ ಜಿಲ್ಲಾ ನೌಕರರ ವರ್ಗಾವಣೆ ನೀತಿ ಇದೆ. ಅಂದರೆ, ಒಂದು ಜಿಲ್ಲೆಯ ನೌಕರರನ್ನು ಬೇರೊಂದು ಜಿಲ್ಲೆಗೆ ನಿಯೋಜಿಲಾಗುತ್ತದೆ. ಕಾಶ್ಮೀರ ಪ್ರದೇಶದ ಜಿಲ್ಲೆಗಳಿಗೆ ಜಮ್ಮು ಪ್ರದೇಶದ ನೌಕರರನ್ನು ನಿಯೋಜಿಸಲಾಗುತ್ತಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಸೌಹಾರ್ದತೆಯ ವಾತಾವರಣ ನಿರ್ಮಾಣಕ್ಕೆ ಅನುಕೂಲವಾಗಬಹುದು ಎಂಬುದು ಉದ್ದೇಶ. ಆದರೆ, ಸರಕಾರದ ಎಣಿಕೆ ತಿರುವುಮುರುವು ಆಗಿರುವುದು ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಹತ್ಯಾಕಾಂಡ ಸಾಕ್ಷಿಯಾಗಿದೆ.

ಕಾಶ್ಮೀರದಲ್ಲಿ ಗುಂಡಿಕ್ಕಿ ಬ್ಯಾಂಕ್ ಮ್ಯಾನೇಜರ್‌ ಹತ್ಯೆಕಾಶ್ಮೀರದಲ್ಲಿ ಗುಂಡಿಕ್ಕಿ ಬ್ಯಾಂಕ್ ಮ್ಯಾನೇಜರ್‌ ಹತ್ಯೆ

'ಜಮ್ಮು ಮೂಲದ ಮೀಸಲು ವರ್ಗಗಳ ನೌಕರರ ಸಂಘ' ಅಡಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ನೌಕರರು, ತಮಗೆ ಸರಕಾರ ಸುರಕ್ಷಿತ ವಾತಾವರಣ ಕಲ್ಪಿಸಲು ಮತ್ತು ಉಗ್ರರ ದಾಳಿಗಳನ್ನು ನಿಲ್ಲಿಸಲು ವಿಫಲವಾಗಿದೆ. ತಾವು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಜಮ್ಮುವಿನ ಪ್ರೆಸ್ ಕ್ಲಬ್‌ನಿಂದ ಆರಂಭಗೊಂಡು ಅಂಬೇಡ್ಕರ್ ಚೌಕ್‌ವರೆಗೂ ಪ್ರತಿಭಟನಾ ಮೆರವಣಿಗೆ ಸಾಗಿತು.

Employees Located in Kashmir Demanding Transfer Outside

"ಅಂತರ್-ಜಿಲ್ಲಾ ವರ್ಗಾವಣೆ ನೀತಿ ಅಡಿಯಲ್ಲಿ ಜಮ್ಮುವಿನ ವಿವಿಧ ಜಿಲ್ಲೆಗಳಿಂದ ೮೦೦೦ ನೌಕರರು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಿನ ವಾತಾವರಣದಲ್ಲಿ ನಾವು ಕಾಶ್ಮೀರಕ್ಕೆ ಹೋಗಿ ಕೆಲಸ ಮಾಡುವುದಿಲ್ಲ.. ಅಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆಯಾದರೂ ಈಗ ಉದ್ದೇಶಿತ ಹತ್ಯೆಗಳು ಹೆಚ್ಚುತ್ತಿರುವುದರಿಂದ ಅಸುರಕ್ಷಿತ ಭಾವನೆ ಮೂಡಿದೆ" ಎಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಶಿಕ್ಷಕರಾಗಿರುವ ರಮೇಶ್ ಚಂದ್ ಹೇಳುತ್ತಾರೆ.

ಕಾಶ್ಮೀರದಲ್ಲಿ ಮೇ 31ರಂದು ಶಿಕ್ಷಕಿಯೊಬ್ಬರನ್ನು ಉಗ್ರರು ಹತ್ಯೆ ಮಾಡಿದ್ದರು. ಇವರಿಗೆ ಸಂತಾಪ ಸೂಚಿಸಲೂ ಪ್ರತಿಭಟನಾಕಾರರು ಜಮ್ಮುವಿನಲ್ಲಿ ನಿನ್ನೆ ಸೇರಿದ್ದರು.

ಶ್ರೀನಗರದಲ್ಲಿ ವಲಸೆ ಕಾರ್ಮಿಕರ ಮೇಲೆ ಗುಂಡಿನ ದಾಳಿಶ್ರೀನಗರದಲ್ಲಿ ವಲಸೆ ಕಾರ್ಮಿಕರ ಮೇಲೆ ಗುಂಡಿನ ದಾಳಿ

"ಕಾಶ್ಮೀರದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯಿಂದ ಹತಾಶರಾಗಿದ್ದೇವೆ. ಹಿಂದು, ಸಿಖ್, ಮುಸ್ಲಿಮರು ಯಾರೂ ಕೂಡ ಇಲ್ಲಿ ಸುರಕ್ಷಿತವಲ್ಲ. ಉಗ್ರರು ಯಾರನ್ನು ಬೇಕಾದರೂ ಗುರಿಯಾಗಿಸುತ್ತಾರೆ" ಎಂದು ಪ್ರತಿಭಟನಾಕಾರರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

Employees Located in Kashmir Demanding Transfer Outside

ಈ ವರ್ಷ 18ಕ್ಕೂ ಹೆಚ್ಚು ಹತ್ಯೆ:
ಕಳೆದ ಎರಡು ವರ್ಷಗಳಲ್ಲಿ ಬಹುತೇಕ ಮೌನವಾಗಿದ್ದ ಉಗ್ರಗಾಮಿಗಳು ಈ ವರ್ಷ ಅಟ್ಟಹಾಸ ಹೆಚ್ಚಿಸಿದ್ದಾರೆ. ನಿನ್ನೆ ಗುರುವಾರ (ಜೂನ್ 2) ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು. ನಿನ್ನೆ ಸಂಜೆ ಒಬ್ಬ ವಲಸೆ ಕಾರ್ಮಿಕನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. 2022ರಲ್ಲಿ ಇದೂವರೆಗೆ ಉಗ್ರರ ಉದ್ದೇಶಿತ ದಾಳಿಗೆ 18ಕ್ಕೂ ಹೆಚ್ಚು ಮಂದಿ ಬಲಿಯಾದಂತಾಗಿದೆ. ಸರಕಾರಿ ನೌಕರರೇ ಹೆಚ್ಚು ಟಾರ್ಗೆಟ್ ಆಗುತ್ತಿದ್ದಾರೆ. ಉಗ್ರರು ಸರಕಾರಿ ಕಚೇರಿಗಳಿಗೆ ನುಗ್ಗಿ ಹತ್ಯೆ ನಡೆಸಿದ್ಧಾರೆ.

ಆರ್ಟಿಕಲ್ 370 ತೆಗೆದಾಗ ಖುಷಿಪಟ್ಟಿದ್ದೆವು... ಆದರೆ....
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ಎರಡು ವರ್ಷಗಳ ಹಿಂದೆ ಕೇಂದ್ರ ಸರಕಾರ ರದ್ದು ಮಾಡಿತು. ಆಗ ನಾವು ಅದನ್ನು ಬೆಂಬಲಿಸಿದ್ದೆವು. ಆರ್ಟಿಕಲ್ 370 ಅನ್ನು ತೆಗೆದರೂ ಕಾಶ್ಮೀರದಲ್ಲಿ ಏನೂ ಸುಧಾರಣೆ ಆಗಿಲ್ಲ. ಸುಮ್ಮನೆ ವಿಶೇಷ ಸ್ಥಾನಮಾನ ಕಳೆದುಕೊಂಡೆವು ಅಷ್ಟೇ. ಸ್ಥಳೀಯರು ವಿರೋಧ ಮಾಡಿದರೂ ನಾವು ಬೆಂಬಲಿಸಿ ತಪ್ಪು ಮಾಡಿದೆವು ಎಂದು ಅಂಜನಾ ಬಾಲ ಎಂಬ ಶಿಕ್ಷಕಿಯೊಬ್ಬರು ಹೇಳಿದ್ಧಾರೆ.

"ಸರಕಾರ ನಮಗೆ ವಸತಿ ಕಲ್ಪಿಸುವುದು ಬೇಡ, ಬಡ್ತಿ ಕೊಡುವುದು ಬೇಡ. ಎಲ್ಲಾ ನೌಕರರಿಗೂ ಸರಕಾರ ಭದ್ರತೆ ಕೊಡಲು ಅಸಾಧ್ಯ ಇರುವುದರಿಂದ ಈ ಕಣಿವೆ ಪ್ರದೇಶದಿಂದ ಬೇರೆ ಕಡೆಗೆ ವರ್ಗಾವಣೆ ಮಾಡಿ ಎಂಬುದು ನಮ್ಮ ಬೇಡಿಕೆ" ಎಂದು ಅಂಜನಾ ಬಾಲಾ ಹೇಳುತ್ತಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ರದ್ದು ಮಾಡುವ ಧೈರ್ಯ ತೋರಿದ ಸರಕಾರಕ್ಕೆ ನೌಕರರ ವರ್ಗಾವಣೆ ನೀತಿಯಲ್ಲಿ ಸಣ್ಣ ಬದಲಾವಣೆ ತರಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಇದೇ ವೇಳೆ ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ಸರಕಾರದ ಮೇಲೆ ನಮಗೆ ನಂಬಿಕೆ ಹೋಗಿದೆ. ಮತ್ತೆ ಕಾಶ್ಮೀರಕ್ಕೆ ಹೋಗಿ ಬಲಿಪಶುಗಳಾಗುವ ಇಚ್ಛೆ ಇಲ್ಲ ಎಂದು ಇವರು ಹೇಳುತ್ತಿದ್ದಾರೆ. 1990ರ ಪರಿಸ್ಥಿತಿಯ ನೆನಪಿಸುವಂತೆ ಕಾಶ್ಮೀರದಲ್ಲಿ ಈಗ ಘಟನೆಗಳು ಜರುಗುತ್ತಿದೆ. ಆಗ ಜನರು ಹೆಚ್ಚು ಪ್ರತಿಭಟನೆ ಮಾಡಲಿಲ್ಲ. ಮೌನವಾಗಿ ಕಾಶ್ಮೀರದಿಂದ ಮನೆ ಮಠ ಖಾಲಿ ಮಾಡಿ ನಿರಾಶ್ರಿತರಾಗಿ ಹೊರಗೆ ಹೋಗಿದ್ದರು. ಆರ್ಟಿಕಲ್ 370 ಅನ್ನು ರದ್ದು ಮಾಡಿದ ಬಳಿಕ ಭಯೋತ್ಪಾದನೆಗೆ ಅಂಕುಶ ಹಾಕಿದ್ದೇವೆ. ಬಹುತೇಕ ಉಗ್ರರ ಜಾಲದ ಬೆನ್ನೆಲುಬು ಮುರಿದಿದ್ದೇವೆ ಎಂದು ಹೇಳುತ್ತಿದ್ದ ಸರಕಾರ ಈಗ ಕೈಕಟ್ಟಿ ಕೂತಿರುವಂತೆ ತೋರುತ್ತಿದೆ.

(ಒನ್ಇಂಡಿಯಾ ಸುದ್ದಿ)

English summary
Amid unabated targeted killings in Kashmir, hundreds of government employees posted in the valley took out a march here on Thursday to demand their immediate transfer to their respective home districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X