ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಕಾಶ್ಮೀರ ಶಾಂತ, ಒಂದೇ ಒಂದು ಬುಲೆಟ್ಟೂ ಹಾರಿಲ್ಲ! ವದಂತಿಯೆಲ್ಲ ಸುಳ್ಳು"

|
Google Oneindia Kannada News

ಶ್ರೀನಗರ, ಆಗಸ್ಟ್ 12: ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ಈದ್ ಅಲ್ ಅಧಾ ಆಚರಣೆಯ ಸಂದರ್ಭದಲ್ಲಿ ಕಣಿವೆ ನಾಡು ಜಮ್ಮು ಮುತ್ತು ಕಾಶ್ಮೀರದಲ್ಲಿ ಶಾಂತಿ ಕದಡಿದೆ, ಹಿಂಸಾಚಅರ ನಡೆದಿದೆ ಎಂಬ ವರದಿಗಳು ಸತ್ಯಕ್ಕೆ ದೂರವಾಗಿದ್ದು, ಈ ದಿನ ಕಾಶ್ಮೀರದಲ್ಲಿ ಒಂದೇ ಒಂದು ಬುಲೆಟ್ಟೂ ಹಾರಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಹೇಳಿದ್ದಾರೆ.

ಕಣಿವೆಯಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ನೋಡಿದೆ. ಆದರೆ ಕಾಶ್ಮೀರದಲ್ಲಿ ಒಂದೇ ಒಂದು ಗುಂಡು ಹಾರಿದರೂ ನನಗೆ ಮಾಹಿತಿ ಬರುತ್ತದೆ. ಭಾರತೀಯ ಸೇನೆ ಒಂದೇ ಒಂದು ಬುಲೆಟ್ಟನ್ನೂ ಹಾರಿಸಿಲ್ಲ. ಹಬ್ಬ ಶಾಂತಿಯುತವಾಗಿ ಆಚರಣೆಯಾಗಿದೆ ಎಂದು ರೋಹಿತ್ ಕನ್ಸಾಲ್ ಹೇಳಿದರು.

ಕಾಶ್ಮೀರ ನಡೆ ವಿರೋಧಿಸಿದ ಚೀನಾಕ್ಕೆ ಭಾರತದಿಂದ ಖಡಕ್ ಎಚ್ಚರಿಕೆಕಾಶ್ಮೀರ ನಡೆ ವಿರೋಧಿಸಿದ ಚೀನಾಕ್ಕೆ ಭಾರತದಿಂದ ಖಡಕ್ ಎಚ್ಚರಿಕೆ

ಸಂವಿಧಾನದ 370 ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿದ ನಂತರ ಕಾಶ್ಮೀರದಲ್ಲಿ ಅಂತರ್ಜಾಲ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೆ ಹಬ್ಬದ ಪ್ರಯುಕ್ತ ಜನರಿಗೆ ತಮ್ಮ ಪ್ರೀತಿ ಪಅತ್ರರಿಗೆ ದೂರವಾಣಿ ಕರೆ ಮಾಡಲು ಅವಕಾಶ ನೀಡಲಾಗಿದ್ದು, ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಹ್ಬವೂ ಶಾಂತಿಯುತವಾಗಿ ಆಚರಣೆಗೊಂದಿದೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ರೋಹಿತ್ ಮನವಿ ಮಾಡಿದ್ದಾರೆ.

Eid Is Peaceful In JK:Not A Single Bulet Fired

"15000 ಒಪಿಡಿ ಕೇಸುಗಳೊಮದಿಗೆ ವೈದ್ಯಕೀಯ ಸೇವೆಯೂ ಎಂದಿನಂತೇ ನಡೆಯುತ್ತಿದ್ದು, ದೂರವಾಣಿ ಸಂಪರ್ಕಕ್ಕಾಗಿ 300 ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. 600 ಕ್ಕೂ ಹೆಚ್ಚು ಶಸಸ್ತ್ರ ಚಿಕಿತ್ಸೆಗಳಲು ನಡೆದಿವೆ. ಜೊತೆಗೆ ವಿಮಾನ ನಿಲ್ದಾಣದಿಂದ ಇಂದು 30 ವಿಮಾನಗಳು ಹಾರಾಟ ನಡೆಸಿವೆ. ಹಜ್ ಯಾತ್ರಿಗಳಿಗೆ ಸ್ವಾಗತ ಕೋರುವುದಕ್ಕೂ ವ್ಯವಸ್ಥೆ ಮಾಡಲಾಗಿದೆ" ಎಂದು ರೋಹಿತ್ ತಿಳಿಸಿದ್ದಾರೆ.

ಲಡಾಖ್ ಬಳಿ ಪಾಕ್ ಯುದ್ಧ ವಿಮಾನ, ಎದುರಿಸಲು ಭಾರತವೂ ಸಿದ್ಧ ಲಡಾಖ್ ಬಳಿ ಪಾಕ್ ಯುದ್ಧ ವಿಮಾನ, ಎದುರಿಸಲು ಭಾರತವೂ ಸಿದ್ಧ

ಕಾಶ್ಮೀರ ಐಜಿ ಎಸ್ ಪಿ ಪಾಣಿ ಮಾತನಾಡಿ, "ಕೆಲವೆಡೆ ಕಾನೂನು -ಸುವ್ಯವಸ್ಥೆಗೆ ಧಕ್ಕೆಯಾಗುವಂಥ ಕೆಲವು ಘಟನೆಗಳು ನಡೆದಿವೆ. ಆದರೆ ಅವು ಗಂಭೀರ ಸ್ವರೂಪದವಲ್ಲ. ಅವನ್ನು ನಿಯಂತ್ರಿಸಲಾಗುತ್ತಿದೆ. ಜನರು ಆತಂಕವಿಲ್ಲದೆ ಬದುಕುತ್ತಿದ್ದಾರೆ" ಎಂದಿದ್ದಾರೆ.

English summary
Principal Secretary Rohit Kansal denied report of violence in Kashmir vally on Eid-al-Adha,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X