ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

14 ಲಕ್ಷ ರುಪಾಯಿ ದಂಡ ಹಾಕಿ, ಗಿಲಾನಿಗೆ 'ಫೆಮಾ' ಕೇಸು ಜಡಿದ ಇಡಿ

|
Google Oneindia Kannada News

ಜಮ್ಮು ಮತ್ತು ಕಾಶ್ಮೀರ ಮೂಲದ ಪ್ರತ್ಯೇಕತಾವಾದಿ ಸೈಯದ್ ಆಲಿ ಷಾ ಗಿಲಾನಿಗೆ ಜಾರಿ ನಿರ್ದೇಶನಾಲಯವು (ಇಡಿ) 14.40 ಲಕ್ಷ ರುಪಾಯಿ ದಂಡ ವಿಧಿಸಿದೆ. 'ಫೆಮಾ' ಕಾಯ್ದೆಯನ್ನು ಉಲ್ಲಂಘಿಸಿ, $ 10000 (ಅಂದಾಜು 6.8 ಲಕ್ಷ ರುಪಾಯಿ) ಇಟ್ಟುಕೊಂಡಿದ್ದಕ್ಕಾಗಿ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ.

ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಮರ್ಮಾಘಾತ, ಜೆಕೆಎಲ್‌ಎಫ್‌ ಗೆ ನಿಷೇಧಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಮರ್ಮಾಘಾತ, ಜೆಕೆಎಲ್‌ಎಫ್‌ ಗೆ ನಿಷೇಧ

ಕಾನೂನು ಬಾಹಿರವಾಗಿ ವಿದೇಶಿ ವಿನಿಮಯವನ್ನು ಇರಿಸಿಕೊಳ್ಳಲಾಗಿತ್ತು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ಈ ಬಗ್ಗೆ ಜಾರಿ ನಿರ್ದೇಶನಾಲಯವು ತನಿಖೆ ನಡೆಸಲಿದೆ. ತನಿಖೆ ಪೂರ್ತಿಯಾದ ಮೇಲೆ, ವಿಚಾರಣೆ ಮುಂದಕ್ಕೆ ಹೋದ ಮೇಲೆ ಜಾರಿ ನಿರ್ದೇಶನಾಲಯವು ಮಾರ್ಚ್ 20ರಂದು ಫೆಮಾ ಅಡಿಯಲ್ಲಿ 14.40 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ.

 ED slaps 14 lakh penalty, confiscates 7 lakh in FEMA case against Geelani

$10000 ಅನ್ನು ಗಿಲಾನಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಆದಾಯ ತೆರಿಗೆ ಇಲಾಖೆಯಿಂದ ದೂರು ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದಿಂದ ಪ್ರಕರಣ ಕೈಗೆತ್ತಿಕೊಳ್ಳಲಾಗಿದೆ. ಇಂಥದ್ದೇ ವಿಚಾರಣೆಯು ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್ ನ ಮಾಜಿ ಅಧ್ಯಕ್ಷ, ಪ್ರತ್ಯೇಕವಾದಿ ಯಾಸಿನ್ ಮಲಿಕ್ ನ ವಿರುದ್ಧ ಕೂಡ ನಡೆಯುತ್ತಿದೆ.

English summary
The Enforcement Directorate (ED) has levied a penalty of ₹14.40 lakh and ordered the confiscation of nearly ₹6.8 lakh in connection with a FEMA case against Jammu and Kashmir-based separatist Syed Ali Shah Geelani, officials said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X