ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಜಮ್ಮು ಮತ್ತು ಕಾಶ್ಮೀರದಲ್ಲಿ 5ರ ತೀವ್ರತೆಯ ಭೂಕಂಪ

|
Google Oneindia Kannada News

ಶ್ರೀನಗರ ಮೇ 5: ಜಮ್ಮು ಮತ್ತು ಕಾಶ್ಮೀರದಲ್ಲಿ 5ರ ತೀವ್ರತೆಯ ಭೂಕಂಪ ಸಂಭವಿಸಿರುವುದು ವರದಿಯಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NSC) ಗುರುವಾರ (ಮೇ 5, 2022) ಬೆಳಿಗ್ಗೆ 5 ರ ತೀವ್ರತೆಯ ಕಡಿಮೆ ತೀವ್ರತೆಯ ಭೂಕಂಪವು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದೆ ಎಂದು ಮಾಹಿತಿ ನೀಡಿದೆ ಎಂದು IANS ವರದಿ ಮಾಡಿದೆ.

ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ರಿಕ್ಟರ್ ಮಾಪಕದಲ್ಲಿ 5 ಅಳತೆಯ ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದೆ. ಆದಾಗ್ಯೂ, ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ವರದಿಯನ್ನು ಸ್ವೀಕರಿಸಲಾಗಿಲ್ಲ. ವಿಪತ್ತು ನಿರ್ವಹಣಾ ಅಧಿಕಾರಿಗಳ ಪ್ರಕಾರ, ರಿಕ್ಟರ್ ಮಾಪಕದಲ್ಲಿ 5 ಅಳತೆಯ ಭೂಕಂಪನ ಗುರುವಾರ ಬೆಳಿಗ್ಗೆ 5.35 ಕ್ಕೆ J&K ನಲ್ಲಿ ಸಂಭವಿಸಿದೆ.

Earthquake of magnitude 5 jolts Jammu and Kashmir

"ಭೂಕಂಪದ ಕೇಂದ್ರಬಿಂದು ತಜಕಿಸ್ತಾನದ ಗೊರ್ನೊ-ಬದಕ್ಷನ್ ಪ್ರದೇಶದಲ್ಲಿತ್ತು. ಇದರ ನಿರ್ದೇಶಾಂಕಗಳು ಅಕ್ಷಾಂಶ 37.49 ಡಿಗ್ರಿ ಉತ್ತರ ಮತ್ತು ರೇಖಾಂಶ 71.85 ಡಿಗ್ರಿ ಪೂರ್ವದಲ್ಲಿದೆ. ಇದು ಭೂಮಿಯ ಹೊರಪದರದಲ್ಲಿ 108 ಕಿಮೀ ಒಳಗೆ ಸಂಭವಿಸಿದೆ" ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು IANS ಗೆ ತಿಳಿಸಿದ್ದಾರೆ. ಕಾಶ್ಮೀರ ಭೂಕಂಪನ ಸೂಕ್ಷ್ಮ ಪ್ರದೇಶದಲ್ಲಿ ನೆಲೆಗೊಂಡಿದೆ ಮತ್ತು ಈ ಹಿಂದೆಯೂ ಕಂಪನಗಳು ಇಲ್ಲಿ ಹಾನಿಯನ್ನುಂಟುಮಾಡಿದ್ದವು.

English summary
National Center for Seismology (NSC) on Thursday (May 5, 2022) morning informed that a low-intensity earthquake of magnitude 5 jolted Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X