ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ರಾತ್ರಿ ಕಂಪಿಸಿದ ಭೂಮಿ

|
Google Oneindia Kannada News

ಶ್ರೀನಗರ್, ಸಪ್ಟೆಂಬರ್.23: ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಲಘು ಭೂಕಂಪನ ಸಂಭವಿಸಿದೆ. ಮಂಗಳವಾರ ರಾತ್ರಿ ಭೂಮಿ ಕಂಪಿನಿಸಿದ ಅನುಭವ ಆಗುತ್ತಿದ್ದಂತೆ ಮನೆಗಳಲ್ಲಿ ಮಲಗಿದ್ದ ಜನರಲ್ಲ ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದ ಘಟನೆ ವರದಿಯಾಗಿದೆ.

ಶ್ರೀನಗರದಲ್ಲಿ ಮಂಗಳವಾರ ರಾತ್ರಿ 9.40ರ ವೇಳೆಗೆ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 3.6ರಷ್ಟಿದೆ. ಭೂಮಿಯಿಂದ 5 ಕಿಲೋ ಮೀಟರ್ ಆಳದಲ್ಲಿ ಭೂಮಿ ಕಂಪಿಸಿದ್ದು, ಭೂಕಂಪನದ ಕೇಂದ್ರಬಿಂದು ಶ್ರೀನಗರದಿಂದ ಉತ್ತರ ಭಾಗದಲ್ಲಿ 11 ಕಿಲೋ ಮೀಟರ್ ದೂರದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ತಿಳಿಸಿದೆ.

ಮಹಾರಾಷ್ಟ್ರ ಮತ್ತು ಅಸ್ಸಾಂನಲ್ಲಿ ಕಂಪಿಸಿದ ಭೂಮಿಮಹಾರಾಷ್ಟ್ರ ಮತ್ತು ಅಸ್ಸಾಂನಲ್ಲಿ ಕಂಪಿಸಿದ ಭೂಮಿ

ಇದರ ನಡುವೆ ಭೂಕಂಪನವು ಕೇವಲ ಶ್ರೀನಗದಕ್ಕೆ ಮಾತ್ರ ಸೀಮಿತವಾಗಿದ್ದು, ರಾಜ್ಯದ ಯಾವುದೇ ಭಾಗದಲ್ಲಿ ಭೂಮಿ ಕಂಪಿಸಿದ ಘಟನೆಯ ಕುರಿತು ವರದಿಯಾಗಿಲ್ಲ. ಅಲ್ಲದೇ ಆರಂಭದಲ್ಲಿ ಜಮ್ಮು ಕಾಶ್ಮೀರದ ಯಾವುದೇ ಪ್ರದೇಶದಲ್ಲಿ ಭೂಕಂಪನ ಸಂಭವಿಸಿಲ್ಲ ಎಂದು ಹೇಳಲಾಗಿತ್ತು. ಆದರೆ ತದನಂತರದಲ್ಲಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಈ ಬಗ್ಗೆ ಸ್ಪಷ್ಟನೆ ನೀಡಿದೆ.

Earthquake Of 3.6 Magnitude At Capital City Of Jammu Kashmir

ಶ್ರೀನಗರದಲ್ಲಿ ಕಂಪನದ ಪರಿಣಾಮ:

ಭೂಮಿ ತೀರಾ ಆಳದಲ್ಲಿ ಭೂಮಿ ಕಂಪಿಸಿದ್ದು, ಇದರ ಪ್ರತಿಫಲವಾಗಿ ಶ್ರೀನಗರದಲ್ಲಿ ಲಘು ಭೂ ಕಂಪನವಾಗಿತ್ತು. ಇದರಿಂದ ಶ್ರೀನಗರದ ಜನರು ಆತಂಕದಲ್ಲೇ ರಾತ್ರಿಯಿಡೀ ಕಳೆಯುವಂತಾ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿತ್ತು. ಇನ್ನೊಂದೆಡೆ ಭೂಕಂಪನ ಚಟುವಟಿಕೆಯು ಖಾಸಗಿ ಭೂಕಂಪನ ಸೇವಾ ಸಂಸ್ಥೆ ಇಎಂಎಸ್ಸಿ, ಇದೊಂದು ಆಳವಿಲ್ಲದ ಭೂಕಂಪ ಎಂದು ವರದಿ ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳಿಗೆ ಕಾರಣವಾಯಿತು.

ಮಂಗಳವಾರ ಮಹಾರಾಷ್ಟ್ರದಲ್ಲಿ ಕಂಪಿಸಿದ ಭೂಮಿ:

ಮಹಾರಾಷ್ಟ್ರದ ಪಲ್ಗರ್ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾದಕದಲ್ಲಿ ಭೂಕಂಪನ ತೀವ್ರತೆ 3.5ರಷ್ಟು ದಾಖಲಾಗಿದೆ ಎಂದು ಭಾರತೀಯ ಭೂಕಂಪಶಾಸ್ತ್ರ ಕೇಂದ್ರವು ತಿಳಿಸಿದೆ. "ಮಹಾರಾಷ್ಟ್ರದ ಪಾಲ್ಗರ್ ಪ್ರದೇಶದಲ್ಲಿ ಸಪ್ಟೆಂಬರ್.22, 2020ರ ಮಧ್ಯರಾತ್ರಿ 2.30 ಗಂಟೆಗೆ ಭೂಮಿ ಕಂಪಿಸಿದೆ. 20.01ರಷ್ಟು ಲ್ಯಾಟ್, 72.79ರಷ್ಟು ಉದ್ದ 5 ಕಿಲೋ ಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ" ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಟ್ವೀಟ್ ಮಾಡಿತ್ತು.

English summary
Earthquake Of 3.6 Magnitude At Capital City Of Jammu Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X