ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರದಲ್ಲಿ ನಡುಗಿದ ಭೂಮಿ: 4.2 ತೀವ್ರತೆಯ ಭೂಕಂಪ

|
Google Oneindia Kannada News

ಶ್ರೀನಗರ, ಆಗಸ್ಟ್ 13: ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ಸಂಜೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪನದಲ್ಲಿ 4.2 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ. ಕಂಪನದ ತೀವ್ರತೆ ಸಾಮಾನ್ಯ ಪ್ರಮಾಣದ್ದಾಗಿದ್ದರಿಂದ ಯಾವುದೇ ಸಾವು ನೋವು ಅಥವಾ ಕಟ್ಟಡಗಳಿಗೆ ಹಾನಿಯಾಗಿರುವುದು ವರದಿಯಾಗಿಲ್ಲ.

ಸಂಜೆ 4.20ರ ವೇಳೆ ಭೂಕಂಪದ ಅನುಭವ ಆಗಿದೆ. ರಾಜ್ಯದ ಲೇಹ್ ಸಮೀಪದ ಪರ್ವತ ಪ್ರದೇಶದಲ್ಲಿ ಭೂಕಂಪದ ಕೇಂದ್ರಬಿಂದುವನ್ನು ಗುರುತಿಸಲಾಗಿದೆ. ಇದಕ್ಕೂ ಮುನ್ನ ಬೆಳಿಗ್ಗೆ 5.38ಕ್ಕೆ ಮಹಾರಾಷ್ಟ್ರದ ಪಾಲ್ಘಾರ್‌ ಪ್ರದೇಶದಲ್ಲಿ 3,2 ತೀವ್ರತೆಯ ಭೂಕಂಪ ಉಂಟಾಗಿತ್ತು. ಕೆಲವು ಸೆಕೆಂಡುಗಳ ಕಾಲ ಕಂಪನ ಉಂಟಾಗಿತ್ತು. ಇದರಿಂದ ಜನರನ್ನು ಗಾಬರಿಗೊಂಡಿದ್ದರು.

ಈಶಾನ್ಯ ಜಪಾನ್ ಗೆ ಅಪ್ಪಳಿಸಿದ 6.3 ತೀವ್ರತೆಯ ಪ್ರಬಲ ಭೂಕಂಪನಈಶಾನ್ಯ ಜಪಾನ್ ಗೆ ಅಪ್ಪಳಿಸಿದ 6.3 ತೀವ್ರತೆಯ ಪ್ರಬಲ ಭೂಕಂಪನ

2018ರ ನವೆಂಬರ್‌ನಿಂದ ಇದುವರೆಗೂ ಈ ಪ್ರದೇಶದಲ್ಲಿ 60ಕ್ಕೂ ಹೆಚ್ಚು ಲಘು ಭೂಕಂಪ ಸಂಭವಿಸಿದೆ. ಹೀಗಾಗಿ ಇದನ್ನು ಭೂಕಂಪದ ಪ್ರದೇಶವೆಂದು ಪರಿಗಣಿಸಿ ಪ್ರಾದೇಶಿಕ ಹವಾಮಾನ ಇಲಾಖೆಯು ಐದು ಕಡೆ ಭೂಕಂಪಮಾಪನಗಳನ್ನು ಅಳವಡಿಸಿದೆ.

Earthquake Hits Jammu And Kashmir 4.2 Magnitude

ಜುಲೈನ ಆರಂಭದಲ್ಲಿ ಪಾಲ್ಘಾರ್‌ನಲ್ಲಿ 3.6 ರಿಂದ 3.8ರ ತೀವ್ರತೆಯ ಸರಣಿ ಲಘು ಭೂಕಂಪಗಳು ಉಂಟಾಗಿದ್ದವು. ಈ ವೇಳೆ ಮನೆಯೊಂದು ಕುಸಿದುಬಿದ್ದು 55 ವರ್ಷ ಮಹಿಳೆಯೊಬ್ಬರು ಮೃತಪಟ್ಟಿದ್ದರು.

ಇಂಡೋನೇಷ್ಯಾದಲ್ಲಿ ಗಡಗಡ ನಡುಗಿದ ಭೂಮಿ: ಸುನಾಮಿ ಭೀತಿಇಂಡೋನೇಷ್ಯಾದಲ್ಲಿ ಗಡಗಡ ನಡುಗಿದ ಭೂಮಿ: ಸುನಾಮಿ ಭೀತಿ

ಆಗಸ್ಟ್ 9ರಂದು ಭಾರತ-ನೇಪಾಳ ಗಡಿಯಲ್ಲಿ ರಿಕ್ಟರ್ ಮಾಪನದಲ್ಲಿ 4.6ರ ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು.

English summary
Jammu and Kashmir witnessed a earthquake on Tuesday with 4.2 magnitude on the Richter scale.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X