ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಕಾಣಿಸಿಕೊಂಡ ಡ್ರೋನ್‌; ಜಮ್ಮುವಿನಲ್ಲಿ ಕಟ್ಟೆಚ್ಚರ

|
Google Oneindia Kannada News

ಶ್ರೀನಗರ, ಜೂನ್ 30: ಭಾರತೀಯ ವಾಯುಸೇನೆ ನಿಯಂತ್ರಣದ ಜಮ್ಮು ವಿಮಾನ ನಿಲ್ದಾಣದಲ್ಲಿ ಡ್ರೋನ್ ಮೂಲಕ ದಾಳಿ ನಂತರ ಮತ್ತೆ ಮತ್ತೆ ಡ್ರೋನ್‌ಗಳು ಕಾಣಿಸಿಕೊಳ್ಳುತ್ತಿವೆ.

ಜಮ್ಮುವಿನ ಮಿಲಿಟರಿ ಪ್ರದೇಶದಲ್ಲಿ ಬುಧವಾರವೂ ಮತ್ತೆ ಡ್ರೋನ್ ಕಾಣಿಸಿಕೊಂಡಿದೆ. ಬುಧವಾರ ಬೆಳಿಗ್ಗೆ ಕಾಲುಚಕ್ ಹಾಗೂ ಕುಂಜವಾನಿ ಎಂಬಲ್ಲಿ ಭದ್ರತಾ ಸಿಬ್ಬಂದಿಗೆ ಎರಡು ಡ್ರೋನ್‌ಗಳು ಗೋಚರಿಸಿವೆ. ಕಾಲುಚಕ್‌ನಲ್ಲಿ ಬೆಳಿಗ್ಗೆ 4.40ರ ಸಮಯದಲ್ಲಿ ಹಾಗೂ ಕುಂಜವಾನಿ ಪ್ರದೇಶದಲ್ಲಿ ಬೆಳಿಗ್ಗೆ 4.52ರ ಸಮಯದಲ್ಲಿ ಡ್ರೋನ್ ಕಾಣಿಸಿಕೊಂಡಿವೆ.

Breaking News: ಎನ್ಐಎ ತಂಡಕ್ಕೆ ಜಮ್ಮು ಐಎಎಫ್ ದಾಳಿ ಪ್ರಕರಣದ ತನಿಖೆ ಹೊಣೆBreaking News: ಎನ್ಐಎ ತಂಡಕ್ಕೆ ಜಮ್ಮು ಐಎಎಫ್ ದಾಳಿ ಪ್ರಕರಣದ ತನಿಖೆ ಹೊಣೆ

ಕಾಲುಚಕ್ ಪ್ರದೇಶದ ಗೋಸ್ವಾಮಿ ಎನ್‌ಕ್ಲೇವ್ ಸಮೀಪ ಶಂಕಿತ ವಸ್ತು ಆಕಾಶದಲ್ಲಿ ಕಾಣಿಸಿಕೊಂಡಿದೆ. ಕುಂಜವಾನಿ ಬಳಿಯೂ ಇಂಥದ್ದೇ ವಸ್ತು ಕಾಣಿಸಿಕೊಂಡಿದೆ. ಸುಮಾರು 800 ಮೀಟರ್ ಎತ್ತರದಲ್ಲಿ ಈ ಡ್ರೋನ್‌ಗಳು ಹಾರಾಟ ನಡೆಸುತ್ತಿದ್ದವು ಎಂದು ಸೇನಾ ಮೂಲಗಳು ತಿಳಿಸಿವೆ.

Drones Spotted Again In Jammu And Kashmir

ಭಾನುವಾರ ಡ್ರೋನ್ ಬಳಸಿ ಸ್ಫೋಟಕ್ಕೆ ಪ್ರಯತ್ನ ಪಡಲಾಗಿತ್ತು. ಸೋಮವಾರ ಜಮ್ಮು-ಪಠಾಣ್‌ಥಾಕ್‌ ರಾಷ್ಟ್ರೀಯ ಹೆದ್ದಾರಿ ಬಳಿ ಡ್ರೋನ್ ಕಂಡುಬಂದಿತ್ತು. ಮಂಗಳವಾರ ಮೂರು ಕಡೆಗಳಲ್ಲಿ ಡ್ರೋನ್ ಕಾಣಿಸಿಕೊಂಡಿತ್ತು. ಇದೀಗ ಮತ್ತೆ ಬೆಳ್ಳಂಬೆಳಿಗ್ಗೆ ಡ್ರೋನ್ ಕಾಣಿಸಿಕೊಂಡಿದೆ.

ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟ ನಡೆದ ನಂತರ ಭದ್ರತಾ ಪಡೆ ಭಾರೀ ಕಟ್ಟೆಚ್ಚರ ವಹಿಸಿದೆ.

ಭಾರತೀಯ ವಾಯುಸೇನೆ ನಿಯಂತ್ರಣದ ಜಮ್ಮು ವಿಮಾನ ನಿಲ್ದಾಣದಲ್ಲಿ ನಡೆದ ಡ್ರೋನ್ ದಾಳಿ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ರಾಷ್ಟ್ರೀಯ ತನಿಖಾ ತಂಡ(ಎನ್ಐಎ)ಕ್ಕೆ ವಹಿಸಿದೆ.

ಜೂನ್ 27ರ ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಐದು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದ್ದು, ಇಬ್ಬರು ಭಾರತೀಯ ಸೇನಾ ಪಡೆ ಸಿಬ್ಬಂದಿ ಗಾಯಗೊಂಡಿದ್ದರು. ಬೆಳಗಿನ ಜಾವ 1.37ರ ಹೊತ್ತಿಗೆ ಮೊದಲ ಸ್ಫೋಟ ಸಂಭವಿಸಿದ್ದು, 1.43ರ ಹೊತ್ತಿಗೆ ಒಂದೇ ಕಿಲೋ ಮೀಟರ್ ದೂರದಲ್ಲಿ ಇರುವ ಬಯಲು ಪ್ರದೇಶದಲ್ಲಿ ಎರಡನೇ ಸ್ಫೋಟ ಸಂಭವಿಸಿತ್ತು.

ಇದರಲ್ಲಿ ಪಾಕ್ ಬೆಂಬಲಿ ಉಗ್ರಗಾಮಿಗಳ ಕೈವಾಡ ಶಂಕೆ ಇದ್ದು, ಭಾರೀ ಕಟ್ಟೆಚ್ಚರ ವಹಿಸಲಾಗಿದೆ.

English summary
For the fourth day in a row drones have been spotted near military areas in Jammu and Kashmir
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X