ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರ: ಇನ್ನೂ ಮೂರು ಜಿಲ್ಲೆಗಳಲ್ಲಿ ಡ್ರೋನ್ ಬಳಕೆ ನಿಷೇಧ

|
Google Oneindia Kannada News

ಶ್ರೀನಗರ, ಜುಲೈ 07: ಜಮ್ಮು ಕಾಶ್ಮೀರದ ಇನ್ನೂ ಮೂರು ಜಿಲ್ಲೆಗಳಲ್ಲಿ ಡ್ರೋನ್ ಬಳಕೆ ನಿಷೇಧಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಸಾಂಬಾ, ರಾಂಬನ್ ಮತ್ತು ಬಾರಾಮುಲ್ಲಾದಲ್ಲಿ ಡ್ರೋನ್‌ಗಳು ಮತ್ತು ಇತರ ಮಾನವರಹಿತ ವೈಮಾನಿಕ ವಾಹನಗಳನ್ನು ಸಂಗ್ರಹಿಸುವುದು, ಮಾರಾಟ ಮಾಡುವುದು ಅಥವಾ ಇಟ್ಟುಕೊಳ್ಳುವುದನ್ನು ಜಿಲ್ಲಾ ಅಧಿಕಾರಿಗಳು ನಿಷೇಧಿಸಿದ್ದಾರೆ.

ಸಾಮಾಜಿಕ ಮತ್ತು ಸಾಂಸ್ಕೃತಿಕ ಕೂಟಗಳಲ್ಲಿ ಫೋಟೋಗಳು ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ಸಣ್ಣ ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ.

Drone

ರಾಷ್ಟ್ರ ವಿರೋಧಿ ಅಂಶಗಳಿಂದ ಅದರ ಬಳಕೆಯ ಅಪಾಯದ ಹಿನ್ನೆಲೆಯಲ್ಲಿ ಈ ನಿಷೇಧವನ್ನು ಆದೇಶಿಸಲಾಗಿದೆ ಎಂದು ರಾಂಬಾನ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮುಸರತ್ ಇಸ್ಲಾಂ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ; ಡ್ರೋನ್ ಹಾರಾಟಗಳ ಮೇಲೆ ನಿರ್ಬಂಧಜಮ್ಮು ಮತ್ತು ಕಾಶ್ಮೀರ; ಡ್ರೋನ್ ಹಾರಾಟಗಳ ಮೇಲೆ ನಿರ್ಬಂಧ

ಜಮ್ಮುವಿನ ಐಎಎಫ್ ನಿಲ್ದಾಣದಲ್ಲಿ ಶಸ್ತ್ರಸಜ್ಜಿತ ಡ್ರೋನ್‌ಗಳೊಂದಿಗೆ ಭಯೋತ್ಪಾದಕ ದಾಳಿಯ ನಂತರ ಶ್ರೀನಗರ ಮತ್ತು ಗಡಿ ಜಿಲ್ಲೆಗಳಾದ ರಾಜೌರಿ ಮತ್ತು ಕಥುವಾದಲ್ಲಿನ ಅಧಿಕಾರಿಗಳು ಇಂತಹ ನಿಷೇಧವನ್ನು ವಿಧಿಸಿದ್ದರು.

ಬಾರಾಮುಲ್ಲಾದಲ್ಲಿ ಡ್ರೋನ್ ಕ್ಯಾಮರಾಗಳು ಅಥವಾ ಇತರ ರೀತಿಯ ಮಾನವರಹಿತ ವೈಮಾನಿಕ ವಾಹನಗಳನ್ನು ಹೊಂದಿರುವವರನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇರಿಸಲು ಸೂಚಿಸಲಾಗಿದೆ.

ಮೊದಲ ಸ್ಫೋಟವು ಜಮ್ಮುವಿನ ಹೊರವಲಯದಲ್ಲಿರುವ ಸತ್ವಾರಿ ಪ್ರದೇಶದಲ್ಲಿ ಐಎಎಫ್ ನಿರ್ವಹಿಸುತ್ತಿದ್ದ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದ ಒಂದೇ ಅಂತಸ್ತಿನ ಕಟ್ಟಡದ ಛಾವಣಿ ಮೇಲೆ ಬಿದ್ದು ಕಟ್ಟಡ ಹಾನಿಕೊಂಡಿತ್ತು. ಇನ್ನು ಎರಡನೆಯದು ನೆಲದ ಮೇಲೆ ಬಿದ್ದಿತ್ತು.

ಪಾಕಿಸ್ತಾನ ಮೂಲದ ಭಯೋತ್ಪಾದಕರು ಡ್ರೋನ್‌ಗಳನ್ನು ನಿಯೋಜಿಸಿದ ಮೊದಲ ಉದಾಹರಣೆಯಾಗಿ ಜಮ್ಮುವಿನ ಐಎಎಫ್ ನಿಲ್ದಾಣದಲ್ಲಿ ಡ್ರೋನ್ ಮೂಲಕ ಎರಡು ಬಾಂಬ್‌ಗಳನ್ನು ಸ್ಫೋಟಿಸಲಾಯಿತು.

ದಾಳಿಯಲ್ಲಿ ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಸ್ಫೋಟಗಳು ಬೆಳಿಗ್ಗೆ 1.40 ರ ಸುಮಾರಿಗೆ ಪರಸ್ಪರ ಆರು ನಿಮಿಷಗಳಲ್ಲಿ ನಡೆದಿತ್ತು.

English summary
District authorities in Samba, Ramban and Baramulla in Jammu and Kashmir on Tuesday banned the storage, sale or possession of drones and other unmanned aerial vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X