ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರಿ ಯುವಕರೇ ಬಂದೂಕು ಬಿಡಿ, ಉಜ್ವಲ ಭವಿಷ್ಯದತ್ತ ಗಮನಕೊಡಿ: ಸೇನೆಯ ಕಿವಿಮಾತು

|
Google Oneindia Kannada News

ಶ್ರೀನಗರ, ಸೆಪ್ಟೆಂಬರ್ 4: ಬಂದೂಕು ಬಿಟ್ಟು ನಿಮ್ಮ ಉಜ್ವಲ ಭವಿಷ್ಯದ ಕಡೆಗೆ ಗಮನಕೊಡಿ ಎಂದು ಯೋಧರು ಜಮ್ಮು ಕಾಶ್ಮೀರದ ಯುವಜನತೆಗೆ ಕಿವಿಮಾತು ಹೇಳಿದ್ದಾರೆ.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಲೆಫ್ಟಿನೆಂಟ್ ಜನರಲ್ ಕನ್ವಲ್ ಜೀತ್ ಸಿಂಗ್ ಧಿಲ್ಲೋನ್ ಮಾತನಾಡಿ, ಯಾವುದೇ ಕಾರಣಕ್ಕೂ ಬಂದೂಕು ಹಿಡಿಯಬೇಡಿ, ನಿಮ್ಮ ಭವಿಷ್ಯದ ಬಗ್ಗೆ ಯೋಚಿಸಿ ಎಂದು ಹೇಳಿದ್ದಾರೆ.

ಕಾಶ್ಮೀರ ವಿಚಾರ ICJ ಮುಂದಿಡಲು ಸೂಕ್ತ ಸಾಕ್ಷ್ಯವಿಲ್ಲ ಎಂದ ಪಾಕ್ ವಕೀಲ

ನೀವು ನಿಮ್ಮ ಭವಿಷ್ಯದ ಕಡೆಗೆ ಹೆಚ್ಚು ಒತ್ತು ನೀಡಿ, ಒಳ್ಳೆಯ ಉದ್ಯೋಗ ಪಡೆದರೆ ನಿಮ್ಮ ಹೆತ್ತವರಿಗೂ ಹೆಮ್ಮೆ ಇರುತ್ತದೆ. ಜಗತ್ತು ದೊಡ್ಡದಿದೆ, ಸಾಕಷ್ಟು ಅವಕಾಶಗಳಿವೆ ಅದನ್ನು ಬಳಸಿಕೊಳ್ಳಬೇಕು. 'ಕಾಶ್ಮೀರದ ಯುವಕರೇ, ಕಾಶ್ಮೀರದ ಭವಿಷ್ಯ 'ಎಂದರು.

Dont Pick Up Guns Look To The Bright Future

ಜಮ್ಮು ಕಾಶ್ಮೀರದ ವಿವಿಧ ಭಾಗಗಳಿಂದ 575 ಯುವಕರು ಬುಧವಾರ ಸೇನೆಗೆ ಸೇರ್ಪಡೆಯಾಗಿದ್ದಾರೆ.ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ವಿಧಿ ರದ್ದಾದ ಬಳಿಕ ಅಲ್ಲಿ ಕರ್ಫ್ಯೂ ಹೇರಲಾಗಿತ್ತು. ಇಂಟರ್‌ನೆಟ್ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ.

ರಾಜ್ಯದಾದ್ಯಂತ ಶಾಲೆಗಳು, ಇತರ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳನ್ನು ಮತ್ತೆ ತೆರೆಯಲಾಗುತ್ತಿದೆ. ಜಮ್ಮು ಕಾಶ್ಮೀರ ಹಾಗೂ ಲಡಾಖ್‌ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಜಮ್ಮು ಕಾಶ್ಮೀರಕ್ಕೆ ವಿಧಾನಸಭೆ ಇರಲಿದೆ. ಆದರೆ ಲಡಾಖ್‌ಗೆ ವಿಧಾನಸಭೆ ಇಲ್ಲ.

English summary
The Indian Army on Wednesday urged youngsters in Jammu and Kashmir to refrain from picking up arms and instead, work towards ensuring a brighter future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X