• search
 • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂದಾದರೂ ಸೈನಿಕ ಮಗನ ಮೃತದೇಹ ಸಿಗುವುದೇ, ಹುಡುಕಿಕೊಡಿ ಪ್ಲೀಸ್

|
Google Oneindia Kannada News

ಶ್ರೀನಗರ, ಏಪ್ರಿಲ್ 1: ಕಾಣೆಯಾದ ಸೈನಿಕ ಮಗನ ಪತ್ತೆಯಾಗಿ ಎಂಟು ತಿಂಗಳಿಂದ ತಂದೆ ಮಾಡುತ್ತಿರುವ ಕೆಲಸವನ್ನು ನೋಡಿದರೆ ಕಣ್ಣಂಚಲ್ಲಿ ನೀರು ಮೂಡುತ್ತದೆ.

ಕಳೆದ 8 ತಿಂಗಳಿನಿಂದ ನಿತ್ಯ ಮಂಜೂರ್ ಅಹಮದ್ ಭೂಮಿಯನ್ನು ಅಗೆಯುತ್ತಾರೆ, ಆಮೇಲೆ ಬರಿಗೈಯಲ್ಲಿ ವಾಪಸಾಗುತ್ತಾರೆ. ಅವರು ತಮ್ಮ ಮಗನ ಮೃತದೇಹ ಎಲ್ಲಾದರೂ ಸಿಗಬಹುದೇ ಎಂದು ತಣ್ಣಂಚಲ್ಲಿರುವ ಕಣ್ಣೀರು ಒರೆಸಿಕೊಳ್ಳುತ್ತಾ ತಮ್ಮ ಯಾರೇನೇ ಅಂದರೂ ಬಿಡದೆ ತಾವು ಅಂದುಕೊಂಡಿರುವುದನ್ನು ಮಾಡುತ್ತಿದ್ದಾರೆ.

ಅವರ ಕಿರಿಯ ಮಗ ಶಾಖಿರ್ ಮಂಜೂರ್, ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಗಸ್ಟ್ 2 ರಂದು ಅವರನ್ನು ಅಪಹರಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಅವರ 56 ವರ್ಷದ ತಂದೆ ಮಂಜೂರ್ ಬೇರೆ ಬೇರೆ ಜಾಗಗಳಿಗೆ ಹೋಗಿ ರಕ್ತಸಿಕ್ತವಾದ ಬಟ್ಟೆಗಳು ಬಿದ್ದದ್ದರೆ ಅದನ್ನು ನೋಡುವುದು, ಮಗನ ಶವ ಎಲ್ಲಾದರೂ ಸಿಗುತ್ತದೆಯೇ ಎಂದು ಹುಡುಕುತ್ತಿದ್ದಾರೆ.

ಈದ್ ದಿನ 25 ವರ್ಷದ ಮಗ ಶಾಕಿರ್ ಕುಟುಂಬದವರೊಂದಿಗೆ ಊಟ ಮಾಡಿದ್ದ ಅದೇ ಕೊನೆಯ ಬಾರಿ ಆತನನ್ನು ನೋಡಿದ್ದು ಎನ್ನುತ್ತಾರೆ ಮಂಜೂರ್. ಕೆಲವು ಗಂಟೆಗಳ ಬಳಿಕ ಶಾಖಿರ್‌ನಿಂದ ಕರೆ ಬರುತ್ತದೆ. ಶಾಖಿರ್ ಸ್ನೇಹಿತರ ಜತರೆ ಹೊರಗಡೆ ಹೋಗುತ್ತಿದ್ದೇನೆ, ಒಂದೊಮ್ಮೆ ಸೇನೆಯು ಕೇಳಿದರೆ ಇದರ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿ ಎಂದು ಪೋಷಕರಿಗೆ ಹೇಳಿದ್ದರು.

ಆದರೆ ಅವರ ಅಪಹರಣವಾಗಿತ್ತು. ಅಪಹರಣಕಾರರು ಅವರಿಗೆ ಒಂದು ಬಾರಿ ಕರೆ ಮಾಡಲು ಅವಖಾಶ ನೀಡಿದ್ದರು ಎಂದು ಮಂಜೂರ್ ಹೇಳಿದ್ದಾರೆ.

ಮರುದಿನ ಶಾಖಿರ್ ಬಳಸುತ್ತಿದ್ದ ವಾಹನ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಲಭ್ಯವಾಗಿತ್ತು. ಒಂದು ವಾರದ ಬಳಿಕ ಅವರ ರಕ್ತಸಿಕ್ತವಾದ ಬಟ್ಟೆಗಳು ಸಿಕ್ಕಿದ್ದವು. ಮನೆಯಿಂದ 3 ಕಿ.ಮೀ ದೂರದಲ್ಲಿ ಇದೆಲ್ಲವೂ ನಡೆದಿತ್ತು.

   ಇವರ ಕೆಟ್ಟ ಆಡಳಿತದ ವಿರುದ್ಧ ನಾವು ಹೋರಾಟ ಮಾಡ್ತೀವಿ ! | DK Shivakumar | Oneindia Kannada

   ಇದೆಲ್ಲಾ ನೋಡಿದಾಗಿನಿಂದ ಸರಿಯಾಗಿ ನಿದ್ದೆ ಮಾಡಿಲ್ಲ, ನನಗೆ ಆತನ ಮೃತದೇಹ ಸಿಗುವವರೆಗೂ ನಿದ್ದೆ ಬರುವುದಿಲ್ಲ. ಇದು ಕೇವಲ ನನಗೆ ಮಾತ್ರವಲ್ಲ ಇಡೀ ಹಳ್ಳಿಗೆ ನೋವಿನ ಕ್ಷಣವಾಗಿದೆ. ಕಾಶ್ಮೀರದಲ್ಲಿ ಸುಮಾರು 8 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ. ಆದರೆ ಸೈನಿಕ ನಾಪತ್ತೆಯಾಗಿರುವ ಪ್ರಕರಣ ಇದೇ ಮೊದಲಾಗಿದೆ.

   English summary
   For the last eight months, Manzoor Ahmad Wagay has been digging every single day and coming up with nothing. The day he does find what he's looking for, it will be the body of his young son.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X