ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

370ನೇ ವಿಧಿ ರದ್ದು: ನಾಳೆ ಕಾಶ್ಮೀರಕ್ಕೆ 28 ಯುರೋಪಿಯನ್ ಸದಸ್ಯರ ತಂಡ

|
Google Oneindia Kannada News

ಶ್ರೀನಗರ, ಅಕ್ಟೋಬರ್ 28: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿ ರದ್ದು ಮಾಡಿದ ನಂತರ ಪರಿಸ್ಥಿತಿ ಅವಲೋಕಿಸಲು ಮೊಟ್ಟ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸದಸ್ಯರ ತಂಡವೊಂದು ನಾಳೆ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲಿದೆ.

28 ಯುರೋಪಿಯನ್ ಸದಸ್ಯರ ತಂಡ ಇಂದು(ಸೋಮವಾರ) ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾಗಲಿದ್ದು, ನಾಳೆ ಕಣಿವೆ ರಾಜ್ಯಕ್ಕೆ ತೆರಳಲಿದೆ.

ಇದೆಂಥ ನ್ಯಾಯ? ಮೊಬೈಲ್ ಸೇವೆಯೇ ಇಲ್ದಿದ್ರೂ ಬಿಲ್ ಕಟ್ಬೇಕು!ಇದೆಂಥ ನ್ಯಾಯ? ಮೊಬೈಲ್ ಸೇವೆಯೇ ಇಲ್ದಿದ್ರೂ ಬಿಲ್ ಕಟ್ಬೇಕು!

Delegation of EU Parliamentarians To Visit Jammu and Kashmir Tomorrow

ಆಗಸ್ಟ್ 5 ರಂದು ಕೇಂದ್ರ ಸರ್ಕಾರವು ಭಾರತದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತ್ತು. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು.

72 ದಿನಗಳ ನಂತರ ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ಸೇವೆ ಪ್ರಾರಂಭ72 ದಿನಗಳ ನಂತರ ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ಸೇವೆ ಪ್ರಾರಂಭ

ಅದಾದ ನಂತರ ಕಣಿವೆ ರಾಜ್ಯದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಫೋನ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಶಾಲೆ-ಕಾಲೇಜುಗಳನ್ನು ಮುಚ್ಚಲಾಗಿತ್ತು. ಕಾಶ್ಮೀರದಲ್ಲಿ ಶಾಂತಿ ಕಡದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾದ ಕಾರಣ, ವಸ್ತುಸ್ಥಿತಿಯ ಅವಲೋಕನಕ್ಕಾಗಿ ಯುರೋಪಿಯನ್ ಸದಸ್ಯರ ತಂಡ ಕಾಶ್ಮೀರಕ್ಕೆ ಆಗಮಿಸಲಿದೆ.

English summary
A 28-member delegation of EU (European Union) parliamentarians to visit Jammu and Kashmir tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X