ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು; ಸ್ಫೋಟಕ್ಕೆ 30 ಸೆಕೆಂಡ್ ಮೊದಲು ಡ್ರೋನ್ ಕಂಡಿತ್ತು!

|
Google Oneindia Kannada News

ಶ್ರೀನಗರ, ಜೂನ್ 30; ಜಮ್ಮು ವಿಮಾನ ನಿಲ್ದಾಣದ ಮೇಲೆ ಡ್ರೋನ್ ಬಳಕೆ ಮಾಡಿಕೊಂಡು ಭಾನುವಾರ ದಾಳಿ ನಡೆಸಲಾಗಿತ್ತು. ವಾಚ್ ಟವರ್‌ನಲ್ಲಿದ್ದ ಭದ್ರತಾ ಸಿಬ್ಬಂದಿ ಸ್ಪೋಟದ 30 ಸೆಕೆಂಡ್ ಮೊದಲು ಡ್ರೋನ್ ನೋಡಿರುವ ಮಾಹಿತಿ ಸಿಕ್ಕಿದೆ.

ಭಾನುವಾರ ಮುಂಜಾನೆ 2 ಗಂಟೆಯ ಸಮಯದಲ್ಲಿ ಡ್ರೋನ್ ಮೂಲಕ ಭಾರತೀಯ ವಾಯುಪಡೆ ಹಿಡಿತದಲ್ಲಿರುವ ಜಮ್ಮು ವಿಮಾನ ನಿಲ್ದಾಣದ ಮೇಲೆ ಸ್ಪೋಟಕಗಳ ಮೂಲಕ ದಾಳಿ ಮಾಡಲಾಗಿತ್ತು. ಎನ್‌ಐಎ ಈ ಕುರಿತು ತನಿಖೆ ನಡೆಸುತ್ತಿದೆ.

ಜಮ್ಮು ಮತ್ತು ಕಾಶ್ಮೀರ; ಡ್ರೋನ್ ಹಾರಾಟಗಳ ಮೇಲೆ ನಿರ್ಬಂಧ ಜಮ್ಮು ಮತ್ತು ಕಾಶ್ಮೀರ; ಡ್ರೋನ್ ಹಾರಾಟಗಳ ಮೇಲೆ ನಿರ್ಬಂಧ

ವಾಚ್ ಟವರ್‌ನಲ್ಲಿದ್ದ ಡಿಎಸ್‌ಸಿ ಸೆಂಟ್ರಿ ಸ್ಫೋಟಕ್ಕೂ 30 ಸೆಕೆಂಡ್ ಮೊದಲು ವಿಮಾನ ನಿಲ್ದಾಣದ ಆವರಣದೊಳಗೆ ಡ್ರೋನ್ ಹಾರಾಟ ಮಾಡುವುದನ್ನು ನೋಡಿದ್ದರು. ಬಳಿಕ ದೊಡ್ಡದಾದ ಸ್ಫೋಟದ ಶಬ್ಧ ಕೇಳಿ ಬಂದಿತ್ತು.

ಜಮ್ಮು ಐಎಎಫ್ ಕೇಂದ್ರಕ್ಕೆ ನುಗ್ಗಿದ ಉಗ್ರರ ಡ್ರೋನ್: ತಪ್ಪು ಆಗಿದ್ದು ಎಲ್ಲಿ? ಜಮ್ಮು ಐಎಎಫ್ ಕೇಂದ್ರಕ್ಕೆ ನುಗ್ಗಿದ ಉಗ್ರರ ಡ್ರೋನ್: ತಪ್ಪು ಆಗಿದ್ದು ಎಲ್ಲಿ?

Defence Personnel Observes Drones Entering Jammu Air Base

ವಿಮಾನ ನಿಲ್ದಾಣದ ಎಟಿಸಿ ಟವರ್ ಕ್ಯಾಬಿನ್‌ನಲ್ಲಿದ್ದ ವಾಯುಪಡೆಯ ಸಿಬ್ಬಂದಿಯೊಬ್ಬರು ಸಹ ಡ್ರೋನ್ ಹಾರಾಟದ ಶಬ್ದವನ್ನು ಕೇಳಿಸಿಕೊಂಡಿದ್ದರು. ಬಳಿಕ ಕೆಲವೇ ಸೆಕೆಂಡುಗಳಲ್ಲಿ ಸ್ಫೋಟ ಸಂಭವಿಸಿದೆ.

ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟಕ್ಕೆ ಡ್ರೋನ್ ಬಳಕೆ ಹಿಂದೆ ಪಾಕ್ ಪಿತೂರಿ!? ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟಕ್ಕೆ ಡ್ರೋನ್ ಬಳಕೆ ಹಿಂದೆ ಪಾಕ್ ಪಿತೂರಿ!?

ಸ್ಫೋಟಕಗಳನ್ನು ಹೊತ್ತು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಡ್ರೋನ್ ಮದುವೆ ಸಮಾರಂಭಗಳಲ್ಲಿ ಚಿತ್ರೀಕರಣಕ್ಕೆ ಬಳಕೆ ಮಾಡುವಷ್ಟು ದೊಡ್ಡದಿತ್ತು ಎಂದು ತನಿಖೆ ವೇಳೆ ತಿಳಿದುಬಂದಿದೆ.

ಇಬ್ಬರು ಸಿಬ್ಬಂದಿಗಳು ನೀಡಿದ ಮಾಹಿತಿ ಅನ್ವಯ ಡ್ರೋನ್ ಹಾರಾಟದ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹ ಮಾಡಲು ಅನುಕೂಲವಾಗಿದೆ. ಎನ್‌ಐಎ ಈಗಾಗಲೇ ಈ ಸ್ಫೋಟ ಪ್ರಕರಣದ ತನಿಖೆ ಕೈಗೊಂಡಿದೆ. 10 ರಿಂದ 12 ಕಿ. ಮೀ. ದೂರದಿಂದ ಡ್ರೋನ್ ಹಾರಿಸಲಾಗಿದೆ ಎಂಬುದು ಸದ್ಯದ ಅಂದಾಜು.

ಈ ದಾಳಿಯಿಂದ ವಿಮಾನಗಳಿಗೆ ಯಾವುದೇ ಹಾನಿಯಾಗಿಲ್ಲ. ಇಬ್ಬರು ಸಿಬ್ಬಂದಿಗಳು ಮಾತ್ರ ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ಅಂತರಾಷ್ಟ್ರೀಯ ಗಡಿ ಸುಮಾರು 14 ಕಿ. ಮೀ. ದೂರವಿದೆ.

ವಿವಿಧ ತನಿಖಾ ಸಂಸ್ಥೆಗಳು ಈ ದಾಳಿಯ ತನಿಖೆಯಲ್ಲಿ ಎನ್‌ಐಎಗೆ ಸಹಕಾರವನ್ನು ನೀಡುತ್ತಿವೆ. ವಿಮಾನ ನಿಲ್ದಾಣದ ಭದ್ರತೆಯನ್ನು ಮತ್ತಷ್ಟು ಹೆಚ್ಚಳ ಮಾಡಲಾಗಿದೆ. ಪ್ರಯಾಣಿಕ ವಿಮಾನಗಳು ಸಂಚಾರವನ್ನು ನಡೆಸುತ್ತಿವೆ.

ಕೇಂದ್ರ ಸರ್ಕಾರ ಡ್ರೋನ್ ಬಳಕೆ ಮಾಡಿಕೊಂಡು ದಾಳಿ ನಡೆಸಿದ್ದನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಜೊತೆ ಸಭೆ ನಡೆಸಿದ್ದರು.

English summary
Defence security corps sentry deployed on watch tower observed two drones flying in Jammu airport 30 seconds before blast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X