ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನವೀಯತೆ ಮೆರೆದ ಸಿಆರ್‌ಪಿಎಫ್ ಯೋಧ: ಮನಮಿಡಿಯುವ ವಿಡಿಯೋ

|
Google Oneindia Kannada News

ಶ್ರೀನಗರ, ಮೇ 14: ಭಾರತೀಯ ಸೇನಾಪಡೆ ಶತ್ರುಗಳ ವಿರುದ್ಧ ಕೆಚ್ಚೆದೆಯಿಂದ, ಅಡೆತಡೆಗಳಿಗೆ ಜಗ್ಗದೆ ಹೋರಾಡುತ್ತದೆಯೋ ಹಾಗೆಯೇ ನಮ್ಮ ದೇಶದ ಜನರು ಸಂಕಷ್ಟಕ್ಕೆ ಒಳಗಾದಾಗ ಅಷ್ಟೇ ಮಿಡಿಯುತ್ತದೆ. ಪ್ರವಾಹ, ಭೂಕಂಪ, ಉಗ್ರರ ದಾಳಿ ಮುಂತಾದ ಅಪಾಯ-ಅವಘಡಗಳ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸುತ್ತದೆ.

ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಕಾಶ್ಮೀರದಲ್ಲಿ ಶಾಂತಿ ಕಾಪಾಡಲು, ನೈಸರ್ಗಿಕ ಅವಘಡಗಳು ಉಂಟಾದಾಗ ಜನರನ್ನು ರಕ್ಷಿಸಲು ಹೋದ ಸೈನಿಕರ ಮೇಲೆ ಕಲ್ಲು ತೂರಾಟ ನಡೆಸಿದ ಅನೇಕ ಘಟನೆಗಳು ವರದಿಯಾಗಿದ್ದವು. ಜನರಿಂದ ಅವಮಾನಕ್ಕೆ ಒಳಗಾದರೂ ಅವರ ಮೇಲೆ ತಿರುಗಿ ಬೀಳದೆ ಸಂಯಮ ಕಾಪಿಟ್ಟುಕೊಳ್ಳುವ ಮನಸ್ಸು ಅವರಲ್ಲಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಶತ್ರುಗಳು ಎದುರಾದಾಗ ಯಾವ ಅಂಜಿಕೆ ಇಲ್ಲದೆ ಅವರನ್ನು ನೆಲಕ್ಕುರುಳಿಸುವ, ಅವರ ಗುಂಡಿಗೆ ಎದೆಯೊಡ್ಡುವ ಧೈರ್ಯ, ತ್ಯಾಗದ ಕಠಿಣ ಛಲವಿದೆ. ಆ ಕಾರಣಕ್ಕಾಗಿ ನಮ್ಮ ಸೈನಿಕರು ಕಠೋರ ಹೃದಯದವರೆಂದರೆ ತಪ್ಪಾದೀತು. ಅವರಲ್ಲಿ ಮಾನವೀಯತೆ, ಅನುಕಂಪ ಕೂಡ ಅಷ್ಟೇ ಹಿರಿದಿದೆ.

ಸೈನ್ಯ ಮಾತ್ರವಲ್ಲ, ಜಗತ್ತಿನಲ್ಲಿ ಎಲ್ಲೆಡೆ ಮಾನವೀಯತೆ ಮರೆಯಾಗುತ್ತಿದೆ ಎಂದು ಕೊರಗುವ ಈ ಸಂದರ್ಭದಲ್ಲಿ, ಅದನ್ನು ಸುಳ್ಳಾಗಿಸುತ್ತಿದ್ದಾರೆ ಹವಾಲ್ದಾರ್ ಇಕ್ಬಾಲ್ ಸಿಂಗ್ ಅವರಂತಹ ಯೋಧರು. ತಮ್ಮ ಊಟವನ್ನು ನವಕಾದಳ ಪ್ರದೇಶದ ಪಾರ್ಶ್ವವಾಯುಪೀಡಿತ ಮಗುವಿಗೆ ಅವರು ಅಕ್ಕರೆಯಿಂದ ತಿನ್ನಿಸುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇಕ್ಬಾಲ್ ಸಿಂಗ್ ಅವರ ಮಾನವೀಯ ನಡೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಹೃದಯ ಗೆದ್ದ ಇಕ್ಬಾಲ್

ಸಿಆರ್‌ಪಿಎಫ್ ಯೋಧ ಹವಾಲ್ದಾರ್ ಇಕ್ಬಾಲ್ ಸಿಂಗ್ ಅವರು ಶ್ರೀನಗರದಲ್ಲಿ ಮಧ್ಯಾಹ್ನದ ತಮ್ಮ ಊಟವನ್ನು ಪಾರ್ಶ್ವವಾಯುವಿಗೆ ತುತ್ತಾದ ಮಗುವಿಗೆ ಮಾಡಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಈ ಮಾನವೀಯ ನಡೆಗಾಗಿ ಡಿಜಿ ಡಿಸ್ಕ್ ಆಂಡ್ ಕಮೆಂಡೇಷನ್ ಪ್ರಮಾಣಪತ್ರ ದೊರಕಿದೆ. ಅಂದಹಾಗೆ, ಇಕ್ಬಾಲ್ ಸಿಂಗ್ ಅವರು ಫೆ. 14ರಂದು ಪುಲ್ವಾಮಾದಲ್ಲಿ ಸಿಆರ್್ಪಿಎಫ್ ಯೋಧರಿದ್ದ ವಾಹನವೊಂದರ ಮೇಲೆ ದಾಳಿ ನಡೆಯಿತ್ತಲ್ಲ, ಆ ಸಂದರ್ಭದಲ್ಲಿ ಮತ್ತೊಂದು ವಾಹನವನ್ನು ಚಾಲನೆ ಮಾಡುತ್ತಿದ್ದರು.

ಅನೇಕ ವಿಚಾರಗಳು ಸರಿಯಾಗಿವೆ

ಈ ಜಗತ್ತಿನಲ್ಲಿ ಅನೇಕ ವಿಚಾರಗಳು ಚೆನ್ನಾಗಿವೆ ಎಂಬುದನ್ನು ಹೇಳಲು ಒಂದು ಸಂಗತಿ ಸಿಕ್ಕಿದೆ. ಸಿಆರ್‌ಪಿಎಫ್‌ನ ಇಕ್ಬಾಲ್ ಸಿಂಗ್ ಅವರು ಹಸಿವಿನಿಂದ ಬಳಲುತ್ತಿದ್ದ ಪಾರ್ಶ್ವವಾಯುಪೀಡಿತ ಮಗುವೊಂದಕ್ಕೆ ತಮ್ಮ ಆಹಾರವನ್ನು ತಿನ್ನಿಸಿದ್ದಾರೆ ಎಂದು ಪತ್ರಕರ್ತೆ ಶ್ರೇಯಾ ದೌಂಡಿಯಾಲ್ ಟ್ವೀಟ್ ಮಾಡಿದ್ದಾರೆ.

ಎಲ್ಲ ಧರ್ಮಗಳ ತಾಯಿ ಮಾನವೀಯತೆ

'ಎಲ್ಲ ಧರ್ಮಗಳ ತಾಯಿ ಮಾನವೀಯತೆ' ಹೀಗೆ ಇಕ್ಬಾಲ್ ಸಿಂಗ್ ಅವರ ಹೆಂಗರುಳನ್ನು ಬಣ್ಣಿಸಿದೆ ಶ್ರೀನಗರ ವಲಯದ ಸಿಆರ್‌ಪಿಎಫ್ ಘಟಕ. ಶ್ರೀನಗರ ವಲಯ ಸಿಆರ್‌ಪಿಎಫ್‌ 49ಬಿಎನ್‌ನಲ್ಲಿ ನಿಯೋಜನೆಯಾಗಿರುವ ಚಾಲಕ ಇಕ್ಬಾಲ್ ಸಿಂಗ್ ಪಾರ್ಶ್ವವಾಯು ಪೀಡಿತ ಕಾಶ್ಮೀರಿ ಮಗುವಿಗೆ ಆಹಾರ ತಿನ್ನಿಸಿದರು. ಕೊನೆಯಲ್ಲಿ 'ನಿನಗೆ ನೀರು ಬೇಕೇ' ಎಂದು ಕೇಳಿದರು. 'ಶೌರ್ಯ ಮತ್ತು ಸಹಾನುಭೂತಿ ಒಂದೇ ನಾಣ್ಯದ ಎರಡು ಮುಖಗಳು' ಎಂದು ಅದು ಟ್ವೀಟ್ ಮಾಡಿದೆ.

Array

ಇದು ಮಹಾನ್ ಭಾರತ

ಇದು ನಮ್ಮ ಮಹಾನ್ ಭಾರತ. ಹವಾಲ್ದಾರ್ ಇಕ್ಬಾಲ್ ಅವರಿಗೆ ನನ್ನ ಸಲ್ಯೂಟ್. ನಿಜವಾದ ಹೀರೋ, ಜೈ ಹಿಂದ್ ಎಂದು ಜೋರ್ಡನ್ ಜಿಗ್ಮಿ ಎಂಬುವವರು ಕೊಂಡಾಡಿದ್ದಾರೆ.

ಬದುಕಿಸಿದವರು

ಫೆ. 14ರಂದು ಉಗ್ರರ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಮೃತಪಟ್ಟ ಸಂದರ್ಭದಲ್ಲಿ ಸಿಆರ್‌ಪಿಎಫ್‌ನ ವಾಹನವೊಂದನ್ನು ಇಕ್ಬಾಲ್ ಸಿಂಗ್ ಚಲಾಯಿಸುತ್ತಿದ್ದರು. ದಾಳಿಯಲ್ಲಿ ಗಾಯಗೊಂಡ ಅನೇಕರ ಜೀವವನ್ನು ಉಳಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು ಎಂದು ಅಮರೇಶ್ ಶ್ರೀವಾಸ್ತವ ಟ್ವೀಟ್ ಮಾಡಿದ್ದಾರೆ.

ಎಲ್ಲೆಡೆ ಮಾನವೀಯತೆ ಇದೆ

ನಮ್ಮ ಇಕ್ಬಾಲ್ ಸಿಂಗ್ ಅವರಿಗೆ ಬಹುದೊಡ್ಡ ವಂದನೆಗಳು. ಮಾನವೀಯತೆ ಎನ್ನುವುದು ಎಲ್ಲ ಕಡೆಯೂ ಇದೆ ಎಂದು ಆಶಿಫ್ ಅಲಿ ಸಂತಸ ಹಂಚಿಕೊಂಡಿದ್ದಾರೆ.

English summary
A video goes viral of CRPF personnel Havaldar Iqbal Singh who was feeding his lunch to a paralytic child in Srinagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X