ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆಯನ್ನು ಬಿಜೆಪಿ ಲಸಿಕೆ ಎಂದಿದ್ದ ಅಖಿಲೇಶ್‌ಗೆ ಓಮರ್ ಅಬ್ದುಲ್ಲಾ ತಿರುಗೇಟು

|
Google Oneindia Kannada News

ಶ್ರೀನಗರ, ಜನವರಿ 03: ಕೊರೊನಾ ಲಸಿಕೆಯನ್ನು ಬಿಜೆಪಿ ಲಸಿಕೆ ಎಂದಿದ್ದ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ತಿರುಗೇಟು ನೀಡಿದ್ದಾರೆ.

ಹೆಚ್ಚು ಮಂದಿ ಕೊರೊನಾ ಲಸಿಕೆ ಪಡೆದಂತೆಲ್ಲಾ, ದೇಶಕ್ಕೆ ಹಾಗೂ ಆರ್ಥಿಕತೆಗೆ ಒಳ್ಳೆಯದು ಎಂದೂ ಓಮರ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.

ಅಖಿಲೇಶ್ ಯಾದವ್ ಹೇಳಿಕೆ ಬಗ್ಗೆ ಜಮ್ಮು-ಕಾಶ್ಮೀರ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಸಹ ಪ್ರತಿಕ್ರಿಯೆ ನೀಡಿದ್ದು, ಕೊರೊನಾ ಲಸಿಕೆ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Omar Abdullah

ಟ್ವಿಟ್ಟರ್ ನಲ್ಲಿ ಬರೆದಿರುವ ಜಮ್ಮು-ಕಾಶ್ಮೀರದ ಮಾಜಿ ಸಿಎಂ, "ಬೇರೆಯವರ ಬಗ್ಗೆ ನನಗೆ ತಿಳಿದಿಲ್ಲ, ಆದರೆ ನನ್ನ ಸರದಿ ಬಂದಾಗ ನಾನು ಸಂತೋಷದಿಂದ ಕೋವಿಡ್-19 ಲಸಿಕೆ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.

'ಅದು ಬಿಜೆಪಿಯ ಕೊರೊನಾ ಲಸಿಕೆ': ವೈದ್ಯರ, ವಿಜ್ಞಾನಿಗಳ ಶ್ರಮವನ್ನು ಅಣಕವಾಡಿದ ಮಾಜಿ ಸಿಎಂ'ಅದು ಬಿಜೆಪಿಯ ಕೊರೊನಾ ಲಸಿಕೆ': ವೈದ್ಯರ, ವಿಜ್ಞಾನಿಗಳ ಶ್ರಮವನ್ನು ಅಣಕವಾಡಿದ ಮಾಜಿ ಸಿಎಂ

ಲಸಿಕೆಗಳು ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ, ಅವು ಮಾನವಿಯತೆಗೆ ಸೇರಿದ್ದು ಹಾಗೂ ಅತ್ಯಂತ ದುರ್ಬಲವಾಗಿರುವವರಿಗೆ ಲಸಿಕೆ ಬೇಗ ಸಿಕ್ಕಿದಷ್ಟೂ ಒಳ್ಳೆಯದು" ಎಂದು ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಕೊರೊನಾ ಲಸಿಕೆಯನ್ನು ಬಿಜೆಪಿ ಲಸಿಕೆ ಎಂದಿದ್ದ ಅಖಿಲೇಶ್ ಯಾದವ್, ಬಿಜೆಪಿ ಲಸಿಕೆಯನ್ನು ಹೇಗೆ ನಂಬಲಿ ಎಂದು ಕೇಳಿದ್ದರು.

ಅಖಿಲೇಶ್ ಯಾದವ್ ಅವರ ಈ ಹೇಳಿಕೆಗೆ ದೇಶಾದ್ಯಂತ ಟೀಕೆ ವ್ಯಕ್ತವಾಗುತ್ತಿದೆ. ಆಕ್ಸ್ ಫರ್ಡ್ - ಅಸ್ಟ್ರಾಜೆನಿಕಾ ಕಂಪೆನಿಯ ಕೋವಿಶೀಲ್ಡ್ ಲಸಿಕೆ ಬಳಸುವಂತೆ ಕೇಂದ್ರ ಸರಕಾರ ರಚಿಸಿದ್ದ ವಿಶೇಷ ತಜ್ಞರ ಸಮಿತಿ ಶಿಫಾರಸನ್ನು ಮಾಡಿತ್ತು.

ರೂಪಾಂತರಿ ಕೊರೊನೊ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ ಡ್ರೈರನ್ ನಡೆಸಲು ಅನುಮತಿ ನೀಡಿತ್ತು.

English summary
COVID-19 vaccines do not belong to any political party, but humanity, National Conference leader Omar Abdullah said on Saturday, hours after Samajwadi Party chief Akhilesh Yadav termed coronavirus vaccines to be rolled out in the country as “vaccine of the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X