• search
 • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಶ್ಮೀರ ಪ್ರೆಸ್ ಕ್ಲಬ್‌ನಲ್ಲಿ ದಂಗೆ: ಪೊಲೀಸರ ಕ್ರಮಕ್ಕೆ ಖಂಡನೆ

|
Google Oneindia Kannada News

ಶ್ರೀನಗರ, ಜನವರಿ 16: ಕಣಿವೆ ಪ್ರದೇಶ ಕಾಶ್ಮೀರದ ಪತ್ರಕರ್ತರ ಅತಿದೊಡ್ಡ ಸಂಘಟನೆಯಾದ ಕಾಶ್ಮೀರ ಪ್ರೆಸ್ ಕ್ಲಬ್ ಶನಿವಾರ ದಂಗೆಗೆ ಸಾಕ್ಷಿಯಾಗಿದ್ದು, ಸದಸ್ಯರ ಗುಂಪು ಅದರ ತಾತ್ಕಾಲಿಕ ಸಮಿತಿಯನ್ನು ಬರ್ಕಾಸು ಮಾಡಿದೆ. ಹಾಗೆಯೇ ಸಶಸ್ತ್ರ ಪೊಲೀಸರ ಸಹಾಯದಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಜಮ್ಮು ಮತ್ತು ಪೊಲೀಸರ ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್‌ಮೆಂಟ್ (ಸಿಐಡಿ) ಪ್ರತಿಕೂಲ ವರದಿಗಳನ್ನು ಉಲ್ಲೇಖಿಸಿ ಕ್ಲಬ್‌ನ ನೋಂದಣಿಯನ್ನು ಅಮಾನತುಗೊಳಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಕಾನೂನುಬಾಹಿರ ಮಧ್ಯಂತರ ಸಂಸ್ಥೆಯು ಕ್ಲಬ್ ಅನ್ನು ಮುಚ್ಚಿದೆ ಎಂದು ವರದಿಗಳು ಹೇಳುತ್ತವೆ.

ಈ ಪ್ರೆಸ್‌ ಕ್ಲಬ್‌ ಕೋವಿಡ್‌ ಸಾಂಕ್ರಾಮಿಕದ ಮಾರಣಾಂತಿಕ ಅಲೆಗಳ ಸಮಯದಲ್ಲಿಯೂ ತೆರೆದಿತ್ತು ಹಾಗೂ ಸಕ್ರಿಯವಾಗಿತ್ತು ಎಂದು ಹೇಳಲಾಗಿದೆ. ಹಿಂದಿನ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಇದನ್ನು "ಸರ್ಕಾರ ಪ್ರಾಯೋಜಿತ ದಂಗೆ" ಎಂದು ಕರೆದಿದ್ದಾರೆ.

ಭಾರತದ ಸಂಪಾದಕರ ಒಕ್ಕೂಟವು ಕ್ಲಬ್‌ನಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಬಲವಾಗಿ ಪ್ರತಿಪಾದನೆ ಮಾಡಿದೆ. "ಜನವರಿ 15 ರಂದು ಶಸ್ತ್ರಸಜ್ಜಿತ ಪೊಲೀಸರ ಸಹಾಯದಿಂದ ಪತ್ರಕರ್ತರ ಗುಂಪೊಂದು ಕಣಿವೆಯಲ್ಲಿನ ಅತಿದೊಡ್ಡ ಪತ್ರಕರ್ತರ ಸಂಘವಾದ ಕಾಶ್ಮೀರ ಪ್ರೆಸ್ ಕ್ಲಬ್‌ನ ಕಚೇರಿ ಮತ್ತು ನಿರ್ವಹಣೆಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡ ರೀತಿಯಿಂದ ಭಾರತದ ಸಂಪಾದಕರ ಒಕ್ಕೂಟವು (ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ) ದಿಗ್ಭ್ರಮೆಗೊಂಡಿದೆ," ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಡಿಸೆಂಬರ್ 29, 2021 ರಂತೆ ಕ್ಲಬ್‌ಗೆ ಹೊಸ ಮರು-ನೋಂದಣಿಯನ್ನು ನೀಡಲಾಗಿತ್ತು. ಆದರೆ ಪ್ರೆಸ್ ಕ್ಲಬ್‌ನ ಚುನಾವಣೆಗಳನ್ನು ನಡೆಸಲು ಪತ್ರಕರ್ತ ಸಂಸ್ಥೆ ಘೋಷಣೆ ಮಾಡಿದ ಒಂದು ದಿನದ ನಂತರ ಆಡಳಿತವು ಅದನ್ನು ಮರು-ನೋಂದಣಿಯನ್ನು ಹಿಂಪಡೆಯಲು ನಿರ್ಧರಿಸಿತು. 2022 ರ ಜನವರಿ 14 ರಂದು ರಿಜಿಸ್ಟ್ರಾರ್ ಆಫ್ ಸೊಸೈಟಿಗಳು ಕ್ಲಬ್ ಅನ್ನು ಸಶಸ್ತ್ರ ಪಡೆಗಳ ಸಹಾಯದಿಂದ ಸ್ವಾಧೀನಪಡಿಸಿಕೊಂಡಿದೆ. ಇದಕ್ಕೂ ಒಂದು ದಿನದ ಮೊದಲು ಕಾಶ್ಮೀರ ಪ್ರೆಸ್ ಕ್ಲಬ್‌ನ ನೋಂದಣಿಯನ್ನು ಸ್ಥಗಿತಗೊಳಿಸುವ ಆದೇಶ ಬಂದಿರುವುದರಿಂದಾಗಿ ಗಾಬರಿ ಆಗಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದೆ.

ಯಾವುದೇ ವಾರೆಂಟ್ ಇಲ್ಲದೆ ಪೊಲೀಸರ ಪ್ರವೇಶ

"ಇನ್ನೂ ಹೆಚ್ಚು ಗೊಂದಲದ ಸಂಗತಿಯೆಂದರೆ, ರಾಜ್ಯ ಪೊಲೀಸರು ಯಾವುದೇ ವಾರೆಂಟ್ ಅಥವಾ ದಾಖಲೆಗಳಿಲ್ಲದೆ ಪ್ರೆಸ್‌ ಕ್ಲಬ್‌ ಆವರಣವನ್ನು ಪ್ರವೇಶಿಸಿದ್ದಾರೆ. ಈ ದಂಗೆಯಲ್ಲಿ ನಿರ್ಲಜ್ಜವಾಗಿ ಭಾಗಿಯಾಗಿದ್ದಾರೆ," ಎಂದು ಒಕ್ಕೂಟ ತಿಳಿಸಿದೆ. ಪೊಲೀಸರು ಮತ್ತು ಸ್ಥಳೀಯ ಆಡಳಿತ ಕ್ಲಬ್‌ನ ಪಾವಿತ್ರ್ಯತೆಯನ್ನು ಉಲ್ಲಂಘಿಸಿರುವುದು ರಾಜ್ಯದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನಿರಂತರ ಸಂಚಿನ ಪ್ರತೀಕವಾಗಿದೆ ಎಂದು ಕೂಡಾ ಒಕ್ಕೂಟ ಆರೋಪ ಮಾಡಿದೆ.

   Tips for Corona care Givers | Oneindia Kannada

   ಎಡಿಟರ್ಸ್ ಗಿಲ್ಡ್ ಈ ಪ್ರತಿಕೂಲವಾದ ಸ್ವಾಧೀನಕ್ಕೆ ಮುಂಚಿತವಾಗಿ ಯಥಾಸ್ಥಿತಿಯನ್ನು ಮರುಸ್ಥಾಪಿಸಲು ಒತ್ತಾಯಿಸುತ್ತದೆ. ಹಾಗೆಯೇ ಸಶಸ್ತ್ರ ಪಡೆಗಳು ಕ್ಲಬ್ ಆವರಣಕ್ಕೆ ಹೇಗೆ ಪ್ರವೇಶಿಸಿದವು ಎಂಬುದರ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ. (ಒನ್‌ಇಂಡಿಯಾ ಸುದ್ದಿ)

   English summary
   Coup At Kashmir Press Club, Editors Guild of India Condemns 'Police Complicity'.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X