ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ: ವೈಷ್ಣೋದೇವಿ ದರ್ಶನಕ್ಕೆ ನಿರ್ಬಂಧ

|
Google Oneindia Kannada News

ಜಮ್ಮು ಮತ್ತು ಕಾಶ್ಮೀರ, ಮಾರ್ಚ್ 16: ಡೆಡ್ಲಿ ಕೊರೊನಾ ವೈರಸ್ ಸೋಂಕಿನಿಂದಾಗಿ ಭಾರತದಲ್ಲಿ 112 ಪ್ರಕರಣಗಳು ದಾಖಲಾಗಿವೆ. ದಿನೇ ದಿನೇ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಜಮ್ಮುವಿನ ಪ್ರಸಿದ್ಧ ವೈಷ್ಣೋದೇವಿ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ.

ಎನ್.ಆರ್.ಐಗಳು ಅಥವಾ ವಿದೇಶಗಳಿಂದ ಬರುವ ಯಾತ್ರಿಗಳು ಮುಂಜಾಗ್ರತಾ ಕ್ರಮವಾಗಿ ಭಾರತಕ್ಕೆ ಬಂದ ಬಳಿಕ 28 ದಿನಗಳ ಕಾಲ ವೈಷ್ಣೋದೇವಿ ಮಂದಿರಕ್ಕೆ ಬರಬೇಡಿ ಎಂದು ಶ್ರೀ ಮಾತಾ ವೈಷ್ಣೋದೇವಿ ದೇವಾಲಯದ ಆಡಳಿತ ಮಂಡಳಿ ಸಲಹೆ ನೀಡಿದೆ.

ಕೊರೊನಾ: ಕೊಲ್ಲೂರು ಮೂಕಾಂಬಿಕಾ ದೇವಾಲಯದ ಮಹತ್ವದ ಪ್ರಕಟಣೆಕೊರೊನಾ: ಕೊಲ್ಲೂರು ಮೂಕಾಂಬಿಕಾ ದೇವಾಲಯದ ಮಹತ್ವದ ಪ್ರಕಟಣೆ

ಹಿಂದೂ ಧಾರ್ಮಿಕ ಕ್ಷೇತ್ರ ವೈಷ್ಣೋದೇವಿ ದರ್ಶನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಾರೆ. ವೈಷ್ಣೋದೇವಿ ದರ್ಶನಕ್ಕೆ ಹೆಚ್ಚು ಜನಜಂಗುಳಿ ಸೇರುವ ಕಾರಣ ವಿದೇಶಗಳಿಂದ ಬರುವ ಯಾತ್ರಿಕರಿಗೆ ಸುರಕ್ಷತಾ ದೃಷ್ಟಿಯಿಂದ ಭಾರತಕ್ಕೆ ಬಂದ್ಮೇಲೆ 28 ದಿನಗಳ ಕಾಲ ನಿರ್ಬಂಧ ಹೇರಲಾಗಿದೆ.

Coronavirus Scare: Shri Mata Vaishno Devi Shrine Board has issued an Advisory to devotees

ಈಗಾಗಲೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಕೂಡ ಭಕ್ತರಿಗೆ ಸಂದೇಶ ರವಾನಿಸಿದೆ. ಈ ಬಾರಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಪೂಜೆಗೆ ಭಕ್ತರು ಆಗಮಿಸದಂತೆ ತಿರುವಾಂಕೂರ್ ದೇವಸ್ವಂ ಮಂಡಳಿಯ ಅಧ್ಯಕ್ಷ ಎನ್.ವಾಸು ತಿಳಿಸಿದ್ದಾರೆ.

ಕೊರೊನಾದಿಂದ ದೇವಾಲಯಗಳಿಗೆ ಬೀಗ: ಸಂಕಟ ಬಂದರೂ ವೆಂಕಟರಮಣ ಅನ್ನಂಗಿಲ್ಲ!ಕೊರೊನಾದಿಂದ ದೇವಾಲಯಗಳಿಗೆ ಬೀಗ: ಸಂಕಟ ಬಂದರೂ ವೆಂಕಟರಮಣ ಅನ್ನಂಗಿಲ್ಲ!

ಇನ್ನೂ ಜ್ವರ, ನೆಗಡಿ, ಕೆಮ್ಮು ಇರುವ ಭಕ್ತಾದಿಗಳು ಸದ್ಯಕ್ಕೆ ತಿರುಪತಿ ದೇವಸ್ಥಾನಕ್ಕೆ ಬರುವುದು ಬೇಡ ಎಂದು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ) ತಿಳಿಸಿದೆ.

English summary
Shri Mata Vaishno Devi Shrine Board has issued an Advisory to devotees amdist Coronavirus Scare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X