ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್‌ನಲ್ಲಿ ದಲೈಲಾಮಾ ಹುಟ್ಟುಹಬ್ಬ ಆಚರಣೆಗೆ ಚೀನಾ ಯೋಧರ ತಗಾದೆ

|
Google Oneindia Kannada News

ಶ್ರೀನಗರ, ಜುಲೈ 12: ಭಾರತೀಯ ಯೋಧರು, ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಸಂದರ್ಭ ಚೀನಾದ ಸೈನಿಕರು ಆಕ್ಷೇಪ ವ್ಯಕ್ತಪಡಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಲಡಾಖ್‌ನ ಡೆಮ್‌ಚುಕ್ ಪ್ರದೇಶದಲ್ಲಿ ಭಾರತೀಯ ಯೋಧರು ಹಾಗೂ ಸ್ಥಳೀಯರು ದಲೈ ಲಾಮಾ ಅವರ ಜನ್ಮದಿನವನ್ನು ಆಚರಿಸುತ್ತಿದ್ದ ಸಂದರ್ಭ ಚೀನಾ ಸೈನಿಕರು ಹಾಗೂ ನಾಗರಿಕರು ವಾಹನಗಳಲ್ಲಿ ಆಗಮಿಸಿ, ಸಿಂಧು ನದಿಯ ಮತ್ತೊಂದು ತೀರದಲ್ಲಿ ನಿಂತು ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿರುವುದಾಗಿ ತಿಳಿದುಬಂದಿದೆ. ಈ ಘಟನೆ ಜುಲೈ 6ರಂದು ನಡೆದಿದೆ.

ಚೀನಾದ ಜತೆ ಭಾರತದ ಸಂಬಂಧ ಹದಗೆಡಲು ಕಾರಣ ತಿಳಿಸಿದ ಸಚಿವ ಜೈಶಂಕರ್ಚೀನಾದ ಜತೆ ಭಾರತದ ಸಂಬಂಧ ಹದಗೆಡಲು ಕಾರಣ ತಿಳಿಸಿದ ಸಚಿವ ಜೈಶಂಕರ್

ಭಾರತ ಮತ್ತು ಚೀನಾ ನಡುವೆ ಕಳೆದ ಏಪ್ರಿಲ್ ತಿಂಗಳಿನಿಂದ ಗಡಿ ವಿವಾದ ಆರಂಭಗೊಂಡಿದೆ. ಆನಂತರ ಚೀನಾ-ಭಾರತ ಸಂಬಂಧದಲ್ಲಿ ಬಿರುಕು ಆರಂಭವಾಗಿದೆ.

Chinese Soldiers Object To Dalai Lama Birthday Celebration ByIndian Soldiers

ಇದೇ ಜುಲೈ 6ರಂದು ದಲೈ ಲಾಮಾ ಅವರ 86ನೇ ಹುಟ್ಟುಹಬ್ಬ ಇತ್ತು. ಪ್ರಧಾನಿ ಮೋದಿ ಅವರು ದಲೈಲಾಮಾ ಅವರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದರು. ಟ್ವೀಟ್ ಮೂಲಕವೂ ದಲೈ ಲಾಮಾ ಅವರಿಗೆ ಶುಭ ಕೋರಿದ್ದರು.

English summary
Chinese soldiers and some civilians on the other side of the Sindu river in the Demchuk region of Ladakh protest against Indian villagers celebrating Dalai Lama birthday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X