ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''ಮನೆಯೊಳಗೆ ನುಗ್ಗಿ ಹೊಡೆಯುವ ತಂತ್ರ ಚೀನಾದಿಂದ ಹೈಜಾಕ್''

|
Google Oneindia Kannada News

ಶ್ರೀನಗರ, ಜೂನ್ 16: ಭಾರತ-ಚೀನಾ ಸೇನೆ ನಡುವಿನ ಮುಖಾಮುಖಿಯಲ್ಲಿ ಭಾರತೀಯ ಸೇನಾಧಿಕಾರಿ, ಇಬ್ಬರು ಸೈನಿಕರು ಸೇರಿ ಮೂರು ಮಂದಿ ಹುತಾತ್ಮರಾಗಿರುವ ವರದಿ ಬಂದಿದೆ. ಈ ಘಟನೆ ಬಗ್ಗೆ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿದ್ದಾರೆ.

Recommended Video

ದೇಶದಲ್ಲಿರುವ ಎಲ್ಲಾ ಮುಖ್ಯಮಂತ್ರಿಗಳಿಗೆ ಕರೆಕೊಟ್ಟ ಮೋದಿ | Oneindia Kannada

''ಮನೆಯೊಳಗೆ ನುಗ್ಗಿ ಹೊಡೆಯುವ ಮಿಲಿಟರಿ ತಂತ್ರವನ್ನು ಚೀನಾದವರು ಹೈಜಾಕ್ ಮಾಡಿರುವ ಹಾಗೆ ಕಾಣಿಸುತ್ತಿದೆ. ಆದರೆ, ಯಾವುದೇ ಪ್ರತಿರೋಧ, ಪ್ರತಿ ದಾಳಿ ಬಗ್ಗೆ ಯಾಕೆ ಮಾಡುತ್ತಿಲ್ಲ ಎಂಬುದನ್ನು ತಿಳಿಯಲು ದೇಶ ಕಾತುರದಿಂದ ಕಾದಿದೆ. ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅದಕ್ಕೆ ಪ್ರತೀಕಾರ ಬೇಡವೇ" ಎಂದು ಮುಫ್ತಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಜೂನ್ 6 ನಡೆದ ಉಭಯ ದೇಶಗಳ ಉನ್ನತ ಸೇನಾ ಕಮಾಂಡರ್‌ಗಳ ಸಭೆಯಲ್ಲಿ ಗಡಿ ಉದ್ವಿಗ್ನತೆ ಕಡಿಮೆ ಮಾಡಿ ಶಾಂತಿ ಮಾತುಕತೆ ನಡೆಸುವ ನಿರ್ಧಾರಕ್ಕೆ ಬರಲಾಗಿತ್ತು.

China Has Hijacked Aggressive ‘Ghar Main Ghuske Marengay’ Militaristic Approach: Mehbooba Mufti

ಪೂರ್ವ ಲಡಾಖ್‌ ಗಡಿಯಿಂದ ಉಭಯ ದೇಶಗಳ ಸೇನಾ ಪಡೆಗಳೂ ಹಿಂದಕ್ಕೆ ಸರಿಯುತ್ತಿದ್ದು, ಪೆಟ್ರೋಲಿಂಗ್ ಪಾಯಿಂಟ್(ಗಸ್ತು ಪ್ರದೇಶ) 14, 15 ಹಾಗೂ 17 ಸ್ಥಳಗಳಿಂದ ಸುಮಾರು 2 ರಿಂದ 2.5 ಕಿ.ಮೀ ಹಿಂದಕ್ಕೆ ಸರಿಯಲು ಸೂಚಿಸಲಾಗಿತ್ತು.

India-China standoff LIVE : ಭಾರತ ಹಾಗೂ ಚೀನಾ ಗಡಿಯಲ್ಲಿ ಏನಾಗುತ್ತಿದೆ? ತಿಳಿಸಿ India-China standoff LIVE : ಭಾರತ ಹಾಗೂ ಚೀನಾ ಗಡಿಯಲ್ಲಿ ಏನಾಗುತ್ತಿದೆ? ತಿಳಿಸಿ

ಆದರೆ, ಲಡಾಕ್ ನ ಗಾಲ್ವಾನ್ ಕಣಿವೆ ಪ್ರದೇಶದ ಸೋಮವಾರ ರಾತ್ರಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಸಂಭವಿಸಿದೆ. ಉಭಯ ಸೇನೆ ನಡುವೆ ಕಲ್ಲು ತೂರಾಟ, ಲೋಹದ ವಸ್ತುಗಳನ್ನು ಎಸೆದಾಟ ನಡೆದಿದ್ದು, ಇದರಿಂದ ಗಾಯಗೊಂಡು ಎರಡು ಕಡೆ ಯೋಧರು ಮೃತಪಟ್ಟಿದ್ದಾರೆ.

1975ರಲ್ಲಿ ಅರುಣಾಚಲಪ್ರದೇಶದ ನಾಲ್ವರು ಭಾರತೀಯ ಸೈನಿಕರನ್ನು ಚೀನಾ ಸೇನೆಯು ಹತ್ಯೆ ಮಾಡಿತ್ತು. ಇದಾದ ಬಳಿಕ ಸೈನಿಕರು ಮೃತಪಟ್ಟ ಘಟನೆ ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

English summary
Face-off that took place between India and China in Galwan Valley of Ladakh, Peoples Democratic Part chief Mehbooba Mufti on Tuesday took to Twitter to say that the nation wants to know why there is no talk of retaliation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X