ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಮರ್ಮಾಘಾತ, ಜೆಕೆಎಲ್‌ಎಫ್‌ ಗೆ ನಿಷೇಧ

|
Google Oneindia Kannada News

ಶ್ರೀನಗರ, ಮಾರ್ಚ್ 22: ಕಾಶ್ಮೀರ ಪ್ರತ್ಯೇಕತವಾದಿಗಳಿಗೆ ಕೇಂದ್ರ ಸರ್ಕಾರವು ಹೊಡೆತ ಮೇಲೆ ಹೊಡೆತಗಳನ್ನು ನೀಡುತ್ತಲೇ ಬರುತ್ತಿದೆ. ಕಾಶ್ಮೀರದ ಪ್ರಮುಖ ಪ್ರತ್ಯೇಕವಾದಿ ಸಂಘಟನೆ ಜೆಕೆಎಲ್‌ಎಫ್‌ಗೆ ಕೇಂದ್ರ ನಿಷೇಧ ಹೇರಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಉಗ್ರರ ವಿರುದ್ಧ ಕಾಯ್ದೆಯ ಪ್ರಕಾರ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮೇಲೆ ನಿಷೇಧ ಹೇರಲಾಗಿದ್ದು, ಈ ಸಂಘಟನೆಯು ವಿದ್ರೋಹಕಾರಿ ಚಟುವಟಿಕೆಗಳಲ್ಲಿ ಭಾಗಿಯಾಗಿತ್ತು ಎಂದು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ: ಮೂವರು ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆಜಮ್ಮು ಮತ್ತು ಕಾಶ್ಮೀರ: ಮೂವರು ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆ

ಈ ಸಂಘಟನೆಯು ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುವ ಚಟುವಟಿಕೆಗಳನ್ನು ಮಾಡುತ್ತಿದೆ, ದೇಶವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದೆ ಎಂದು ನಿಷೇಧಕ್ಕೆ ಕಾರಣಗಳನ್ನು ನೀಡಲಾಗಿದೆ.

Central government declared JKLF is unlawful association

ಜೆಕೆಎಲ್‌ಎಫ್ ಸಂಘಟನೆಯ ಸಂಸ್ಥಾಪಕ ಯಾಸಿನ್ ಮಲ್ಲಿಕ್ ಆಗಿದ್ದು, ಆತ ಪ್ರಸ್ತುತ ಜೈಲಿನಲ್ಲಿದ್ದಾನೆ. ಆತನ ಆಸ್ತಿ-ಪಾಸ್ತಿಯನ್ನೂ ಸಹ ಪೊಲೀಸರು ಜಪ್ತಿ ಮಾಡಿದ್ದಾರೆ. ಆತನ ನಿವಾಸದ ತಪಾಸಣೆ ಸಹ ನಡೆದಿದೆ.

ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ, ಯೋಧ ಹುತಾತ್ಮಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ, ಯೋಧ ಹುತಾತ್ಮ

ಜೆಕೆಎಲ್‌ಎಫ್‌ ಮೇಲೆ 37 ಎಫ್‌ಐಆರ್ ಗಳು ದಾಖಲಾಗಿವೆ. ಅದರಲ್ಲಿ ಸೈನಿಕರನ್ನು ಕೊಂದಿರುವ ಪ್ರಕರಣವೂ ಇದೆ. ಜೊತೆಗೆ ಎನ್‌ಐಎ ಸಹ ಒಂದು ಕೇಸನ್ನು ಜೆಕೆಎಲ್‌ಎಫ್‌ ಮೇಲೆ ದಾಖಲಿಸಿದೆ.

ಲೋಕಸಭೆಗೆ ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ-ಕಾಂಗ್ರೆಸ್ ಮೈತ್ರಿ? ಮುಫ್ತಿ ಏನಂತಾರೆ?ಲೋಕಸಭೆಗೆ ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ-ಕಾಂಗ್ರೆಸ್ ಮೈತ್ರಿ? ಮುಫ್ತಿ ಏನಂತಾರೆ?

ಇದೇ ತಿಂಗಳಲ್ಲಿ ನಿಷೇಧಕ್ಕೆ ಒಳಗಾಗುತ್ತಿರುವ ಕಾಶ್ಮೀರದ ಎರಡನೇ ಸಂಘಟನೆ ಇದಾಗಿದೆ. ಇದಕ್ಕೂ ಮುನ್ನಾ ಜಮಾತ್-ಎ-ಇಸ್ಲಾಮಿ ಸಂಘಟನೆ ಮೇಲೆ ನಿಷೇಧ ಹೇರಲಾಗಿತ್ತು.

English summary
Union Home Secretary Rajiv Gauba said Central govt has today declared Jammu Kashmir Liberation Front (Yasin Malik faction) as unlawful association under Unlawful Activities (Prevention) Act, 1967.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X