ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮುನಲ್ಲಿ ಓರ್ವ ಯೋಧ ಹುತಾತ್ಮ, ಉಗ್ರರ ದಾಳಿಯಲ್ಲಿ ಮಗುವಿನ ಸಾವು

|
Google Oneindia Kannada News

ಶ್ರೀನಗರ, ಏಪ್ರಿಲ್ 01 : ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಮನಕೋಟೆ ಮತ್ತು ಕೃಷ್ಣಾ ಘಾಟಿ ಎಂಬಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಭಾರತೀಯ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಅವರಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಗಡಿ ಭದ್ರತಾ ಪಡೆಯ ಇನ್‌ಸ್ಪೆಕ್ಟರ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಉಗ್ರರು ನಡೆಸಿದ ಅಪ್ರಚೋದಿತ ದಾಳಿಯಲ್ಲಿ 5 ವರ್ಷದ ಮಗು ಕೂಡ ಸಾವಿಗೀಡಾಗಿದೆ.

ಈ ಘಟನೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಉಗ್ರರು ಮತ್ತು ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸೇನೆಗೆ ನರೇಂದ್ರ ಮೋದಿಯವರು ಆದೇಶ ನೀಡಿ, ಎಲ್ಲ ಉಗ್ರರನ್ನು ಸವರಿ ಹಾಕಬೇಕೆಂದು ಆಗ್ರಹಿಸುತ್ತಿದ್ದಾರೆ. ಮೇಲಿಂದ ಮೇಲೆ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂದು ಕೇಳಿಕೊಳ್ಳುತ್ತಿದ್ದಾರೆ.

Ceasefire violation : Security personnel and 5-year-old girl die

ಉಗ್ರರ ಗುರುತು ಪತ್ತೆ : ಪುಲ್ವಾಮಾ ಜಿಲ್ಲೆಯ ಲಸ್ಸಿಪೋರಾದಲ್ಲಿ ಭಾರತೀಯ ಸೇನೆ ಸೋಮವಾರ ನಡೆಸಿದ ಗುಂಡಿನ ದಾಳಿಯಲ್ಲಿ ಲಷ್ಕರ್-ಇ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದಿನ್ ಸಂಘಟನೆಯ ನಾಲ್ವರು ಉಗ್ರರು ಹತರಾಗಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹತರಾದವರನ್ನು ಶೋಪಿಯನ್ ನಿವಾಸಿ ಜಾಫರ್ ಪೌಲ್, ಪುಲ್ವಾಮಾ ನಿವಾಸಿ ತೌಸೀಫ್ ಅಹ್ಮದ್ ಯಟ್ಟೂ, ಹೆಲ್ಲೋ ಶೋಪಿಯನ್ ನಿವಾಸಿ ಆಕಿಬ್ ಅಹ್ಮದ್ ಕುಮಾರ್ ಮತ್ತು ಸೀಡೋ ಶೋಪಿಯನ್ ನಿವಾಸಿ ಮೊಹಮ್ಮದ್ ಶಫಿ ಭಟ್ ಎಂದು ಗುರುತಿಸಲಾಗಿದೆ.

ಪುಲ್ವಾಮಾದಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆಪುಲ್ವಾಮಾದಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆ

ಪಾಕಿಸ್ತಾನ ಶಾಂತಿಯ ಮಾತು ಆಡುತ್ತಿದ್ದರೂ, ಪಾಕಿಸ್ತಾನ ಬೆಂಬಲಿತ ಉಗ್ರರಿಂದ ಕದನ ವಿರಾಮ ಉಲ್ಲಂಘನೆ ಆಗುತ್ತಲೇ ಇದೆ. ಉಗ್ರ ಕೃತ್ಯ ನಡೆಸುತ್ತಿರುವವರಲ್ಲಿ ಹಲವರು ಸ್ಥಳೀಯರೇ ಆಗಿದ್ದು, ಅವರಿಗೆ ಹಲವಾರು ಉಗ್ರರ ತರಬೇತಿ ತಾಣಗಳಲ್ಲಿ ಇಂಜಿಯನ್ ಮುಜಾಹಿದ್ದಿನ್, ಜೈಷ್-ಇ-ಮೊಹಮ್ಮದ್ ಸಂಘಟನೆಗಳು ತರಬೇತಿ ನೀಡುತ್ತಿವೆ.

ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆಸಲಾಗಿದ್ದ ಆತ್ಮಾಹುತಿ ದಾಳಿಯಲ್ಲಿ 40ಕ್ಕೂ ಹೆಚ್ಚು ಸಿಆರ್ ಪಿಎಫ್ ಜವಾನರು ಹುತಾತ್ಮರಾಗಿದ್ದರು. ಇದಾದ ಕೆಲ ದಿನಗಳಲ್ಲಿಯೇ ಫೆಬ್ರವರಿ 26ರಂದು ಭಾರತೀಯ ವಾಯು ಸೇನೆ ನಡೆಸಿದ್ದ ಪ್ರತಿದಾಳಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಲವಾರು ಉಗ್ರರ ನೆಲೆಗಳನ್ನು ಧ್ವಂಸ ಮಾಡಿಹಾಕಲಾಗಿತ್ತು.

English summary
Jammu & Kashmir : 4 terrorists of Lashkar-e-Taiba (LeT) killed in an encounter with security forces in Lassipora. In another incident Indian security personnal and a 5-year-old girl died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X