• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಿಲ್ಲಿಸುವುದಿಲ್ಲ: ಭಾರತೀಯ ಸೇನೆ

|

ಶ್ರೀನಗರ,ಫೆಬ್ರವರಿ 27:ಯಾವುದೇ ಕಾರಣಕ್ಕೂ ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

ಸೇನೆಯ ನಾರ್ಥರ್ನ್‌ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ವೈ.ಕೆ. ಜೋಶಿ ಅವರು, 'ಗಡಿ ನಿಯಂತ್ರಣ ರೇಖೆಯಲ್ಲಿ ಘೋಷಿಸಿರುವ ಕದನ ವಿರಾಮದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗಳ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.

ಎಲ್ಲದಕ್ಕೂ ಹೂಂ ಎಂದು ತಲೆಯಾಡಿಸಿ,ಕಾಶ್ಮೀರದ ವಿಷಯ ಕೆದಕಿದ ಪಾಕ್

ಕವಚದ ರೀತಿಯಲ್ಲಿ ಯೋಧರು ಎಲ್ಲ ಸವಾಲುಗಳನ್ನು ಎದುರಿಸಿದ್ದಾರೆ. ನಮ್ಮ ದೇಶದ ಮೇಲೆ ದುಷ್ಟ ನೋಟ ಬೀರಿದಾಗ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ ಎಂದು ಹೇಳಿದ್ದಾರೆ.

ಗಡಿಯಲ್ಲಿ ಎದುರಾಗಿರುವ ಎಲ್ಲ ಸವಾಲುಗಳನ್ನು ಸೇನೆ ಸಮರ್ಥವಾಗಿ ಎದುರಿಸಿದೆ. ಇನ್ನು ಮುಂದೆಯೂ ನಾವು ಸದಾ ಕಟ್ಟೆಚ್ಚರವಹಿಸುತ್ತೇವೆ. ನಮ್ಮ ನೆರೆಯ ದೇಶಗಳು ಗಲಭೆ ಸೃಷ್ಟಿಸುವ ಪ್ರಯತ್ನಗಳನ್ನು ತಡೆಯುವಲ್ಲಿ ನಾರ್ಥರ್ನ್‌ ಕಮಾಂಡ್‌ ಪ್ರಮುಖ ಪಾತ್ರವಹಿಸಿದೆ.

ಕದನವಿರಾಮ ಕುರಿತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಟ್ವೀಟ್ ಮಾಡಿದ ಬೆನ್ನಲ್ಲೇ ಭಾರತೀಯ ಸೇನೆ ಈ ಕುರಿತು ಸ್ಪಷ್ಟಪಡಿಸಿದೆ.

ಉಧಮ್ ಪುರದಲ್ಲಿ ಯೋಧರಿಗೆ ಪದಕ ಪ್ರದಾನ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಭದ್ರತಾ ಪಡೆಗಳು ಸದಾ ಕಟ್ಟೆಚ್ಚರವಹಿಸಿವೆ.

English summary
The Army's northern commander Lieutenant General YK Joshi on Saturday said the agreement between India and Pakistan to strictly adhere to the ceasefire pact along the Line of Control (LoC) would have no bearing on the counter-terrorism operations in Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X