ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗನ್ ಲೈಸನ್ಸ್‌ ಹಗರಣ: ಹಿರಿಯ ಐಎಎಸ್ ಅಧಿಕಾರಿಯ ಮನೆ ಸೇರಿ 22 ಸ್ಥಳಕ್ಕೆ ಸಿಬಿಐ ದಾಳಿ

|
Google Oneindia Kannada News

ಶ್ರೀನಗರ, ಜು.24: ಬಂದೂಕು ಪರವಾನಗಿಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಹಿರಿಯ ಜೆ & ಕೆ ಐಎಎಸ್ ಅಧಿಕಾರಿ ಶಾಹಿದ್ ಇಕ್ಬಾಲ್ ಚೌಧರಿ ನಿವಾಸ ಸೇರಿದಂತೆ 22 ಸ್ಥಳಗಳಲ್ಲಿ ಸಿಬಿಐ ಶನಿವಾರ ಬೆಳಿಗ್ಗೆ ದಾಳಿ ನಡೆಸಿದೆ.

ಶಾಹಿದ್ ಇಕ್ಬಾಲ್ ಚೌಧರಿ ಪ್ರಸ್ತುತ ಜಮ್ಮು ಕಾಶ್ಮೀರದ ಮಿಷನ್ ಯೂತ್‌ನ ಸಿಇಒ ಹಾಗೂ ಕಾರ್ಯದರ್ಶಿ (ಬುಡಕಟ್ಟು ವ್ಯವಹಾರ) ಆಗಿದ್ದಾರೆ. ಈ ಹಿಂದೆ ಶಾಹಿದ್ ಇಕ್ಬಾಲ್ ಚೌಧರಿ ಕಥುವಾ, ರಾಸಿ, ರಾಜೌರಿಯಂಡ್ ಉಧಂಪುರ್ ಜಿಲ್ಲೆಗಳ ಉಪ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

ಮುಂಬೈ: ಪುತ್ರರಿಬ್ಬರ ಮೇಲೆ ಗುಂಡು ಹಾರಿಸಿದ ಮಾಜಿ ಪೋಲೀಸ್‌- ಓರ್ವ ಮೃತ್ಯುಮುಂಬೈ: ಪುತ್ರರಿಬ್ಬರ ಮೇಲೆ ಗುಂಡು ಹಾರಿಸಿದ ಮಾಜಿ ಪೋಲೀಸ್‌- ಓರ್ವ ಮೃತ್ಯು

ಇಕ್ಬಾಲ್ ಚೌಧರಿ ಆಡಳಿತಾವಧಿಯಲ್ಲಿ ಸಾವಿರಾರು ಪರವಾನಗಿಗಳನ್ನು ನಕಲಿ ಹೆಸರಿನಲ್ಲಿ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜನರಿಗೆ ನೀಡಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಕನಿಷ್ಠ ಎಂಟು ಮಾಜಿ ಉಪ ಆಯುಕ್ತರನ್ನು ಕೇಂದ್ರ ಸಂಸ್ಥೆ ತನಿಖೆ ನಡೆಸುತ್ತಿದೆ.

CBI Raids 22 Locations including Senior IAS Officers Home In J&K Gun License Scam

2012 ರಿಂದ ಜಮ್ಮು ಮತ್ತು ಕಾಶ್ಮೀರದಿಂದ ಎರಡು ಲಕ್ಷ ಗನ್ ಪರವಾನಗಿಗಳನ್ನು ಅಕ್ರಮವಾಗಿ ನೀಡಲಾಗಿದೆ ಎಂದು ವರದಿಯಾಗಿದೆ. ಹಾಗೆಯೇ ಇದು ಭಾರತದ ಅತಿದೊಡ್ಡ ಬಂದೂಕು ಪರವಾನಗಿ ದಂಧೆ ಎಂದು ನಂಬಲಾಗಿದೆ.

ಕಳೆದ ವರ್ಷ ಐಎಎಸ್ ಅಧಿಕಾರಿ ರಾಜೀವ್ ರಂಜನ್ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಸಿಬಿಐ ಬಂಧಿಸಿತ್ತು. ರಂಜನ್ ಮತ್ತು ಇಟ್ರಾಟ್ ಹುಸೇನ್ ರಫಿಕಿ, ಕುಪ್ವಾರಾ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಅವಧಿಯಲ್ಲಿ, ಅಂತಹ ಹಲವಾರು ಪರವಾನಗಿಗಳನ್ನು ಕಾನೂನುಬಾಹಿರವಾಗಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಅದಾನಿ ಷೇರು ಕುಸಿತ: ಟ್ವಿಟರ್‌ನಲ್ಲಿ ಪತ್ರಕರ್ತೆ ಸುಚೇತಾ ದಲಾಲ್ ಟ್ರೆಂಡ್‌ಅದಾನಿ ಷೇರು ಕುಸಿತ: ಟ್ವಿಟರ್‌ನಲ್ಲಿ ಪತ್ರಕರ್ತೆ ಸುಚೇತಾ ದಲಾಲ್ ಟ್ರೆಂಡ್‌

ಸಾರ್ವಜನಿಕ ಸೇವಕರು ಸೇರಿದಂತೆ ಇತರ ಸಹ-ಆರೋಪಿಗಳೊಂದಿಗೆ ವಿವಿಧ ಹಣಕಾಸಿನ ವ್ಯವಹಾರಗಳಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ಏಜೆನ್ಸಿಯು ಒಬ್ಬ ವ್ಯಕ್ತಿಯನ್ನು ಬಂಧಿಸಿತ್ತು. ಈ ವಿಷಯದಲ್ಲಿ "ಆಳವಾದ ಬೇರೂರಿರುವ ಪಿತೂರಿ" ಇದೆ ಎಂದು ಪತ್ತೆಹಚ್ಚಲಾಗಿದೆ ಎಂದು ಸಿಬಿಐ ಈ ಹಿಂದೆ ಹೇಳಿದೆ.

ರಂಜನ್ ಸಹೋದರ ಮತ್ತು ಬಂದೂಕು ಮಾರಾಟಗಾರರಿಗೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಇತರರನ್ನು ಬಂಧಿಸಿದಾಗ 2017 ರಲ್ಲಿ ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳವು ಈ ಹಗರಣವನ್ನು ಮೊದಲು ಪತ್ತೆಹಚ್ಚಿದೆ. ಆಗಿನ ಜೆ & ಕೆ ಸರ್ಕಾರವು ವಿಜಿಲೆನ್ಸ್ ತನಿಖೆಯ ಸೋಗಿನಲ್ಲಿ ಆರೋಪಿಗಳನ್ನು ರಕ್ಷಿಸಿತು.

ಹಗರಣವನ್ನು ಜೆ & ಕೆ ಸರ್ಕಾರಿ ಅಧಿಕಾರಿಗಳು ನಡೆಸುತ್ತಿದ್ದಾರೆಂದು ತಿಳಿದ ನಂತರ ಈ ಪ್ರಕರಣವನ್ನು ಮಾಜಿ ಗವರ್ನರ್ ಎನ್.ಎನ್.ವೋಹ್ರಾ ಸಿಬಿಐಗೆ ಹಸ್ತಾಂತರಿಸಿದರು.

(ಒನ್‌ಇಂಡಿಯಾ ಸುದ್ದಿ)

English summary
The CBI raided 22 locations in Jammu and Kashmir on july 24 th morning including the residence of senior J&K IAS officer Shahid Iqbal Choudhary, in connection with the illegal sale of gun licenses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X